ಬಾಲಿವುಡ್

ಆರ್ಯನ್ ಖಾನ್ ಹುಟ್ಟುಹಬ್ಬಕ್ಕೆ 500 ಸಸಿಗಳ ಉಡುಗೊರೆ ನೀಡಿದ ಜೂಹಿ ಚಾವ್ಲ

ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ನ.12 ರಂದು 24 ನೇ ವಸಂತಕ್ಕೆ ಕಾಲಿಟ್ಟಿದ್ದು, ನಟಿ ಜೂಹಿ ಚಾವ್ಲಾ ಆತನಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ.

ಆರ್ಯನ್ ಖಾನ್ ಹುಟ್ಟುಹಬ್ಬಕ್ಕೆ 500 ಸಸಿಗಳ ಉಡುಗೊರೆ ನೀಡಿದ ಜೂಹಿ ಚಾವ್ಲ
ಜೂಹಿ ಚಾವ್ಲ
Published On :

ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ನ.12 ರಂದು 24 ನೇ ವಸಂತಕ್ಕೆ ಕಾಲಿಟ್ಟಿದ್ದು,  ನಟಿ ಜೂಹಿ ಚಾವ್ಲಾ ಆತನಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. 

ಜನ್ಮದಿನದ ಸಂದೇಶದೊಂದಿಗೆ ವಿಶೇಷ ಉಡುಗೊರೆಯನ್ನು ಜೂಹಿ ಚಾವ್ಲ ಇನ್ಸ್ಟಾಗ್ರಾಮ್ ನಲ್ಲಿ ಘೋಷಿಸಿದ್ದು, ಆರ್ಯನ್ ಖಾನ್, ಸುಹಾನ ಅವರ ಬಾಲ್ಯದಲ್ಲಿ ತಮ್ಮ ಮಕ್ಕಳಾದ ಜಾನ್ಹವಿ ಹಾಗೂ ಅರ್ಜುನ್ ಮೆಹ್ತಾ ಅವರೊಂದಿಗೆ ತೆಗೆದಿದ್ದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದೊಂದಿಗೆ ಆರ್ಯನ್ ಖಾನ್ ಹೆಸರಿನಲ್ಲಿ 500 ಸಸ್ಯಗಳನ್ನು ಇಡುತ್ತಿರುವುದಾಗಿ ಜೂಹಿ ಚಾವ್ಲಾ ತಿಳಿಸಿದ್ದಾರೆ.

ಜನ್ಮ ದಿನದ ಶುಭಾಶಯಗಳು ಆರ್ಯನ್, ನಿಮಗಾಗಿ ಇಷ್ಟರವರೆಗಿನ ಹಾರೈಕೆಗಳು, ಶುಭಾಶಯಗಳು ಒಂದೇ ಆಗಿದೆ. ನೀವು ಸರ್ವಶಕ್ತನಿಂದ ಶಾಶ್ವತವಾಗಿ ಆಶೀರ್ವದಿಸಲ್ಪಡುತ್ತೀರಿ, ರಕ್ಷಿಸಲ್ಪಡುತ್ತೀರಿ ಮತ್ತು ಮಾರ್ಗದರ್ಶನ ಪಡೆಯುತ್ತಿರಿ. ನಿಮ್ಮನ್ನು ಪ್ರೀತಿಸುತ್ತೇವೆ. ನಿಮ್ಮ ಹೆಸರಿನಲ್ಲಿ 500 ಸಸ್ಯಗಳನ್ನು ಇಡುತ್ತಿದ್ದೇವೆ (ಪ್ಲೆಡ್ಜ್) ಎಂದು ಚಾವ್ಲ ತಿಳಿಸಿದ್ದಾರೆ.

ಇದೇ ವೇಳೆ ಶಾರೂಖ್ ಖಾನ್ ಅವರ 56 ನೇ ಜನ್ಮದಿನದ ಅಂಗವಾಗಿ 500 ಸಸ್ಯಗಳನ್ನು ಶಾರೂಖ್ ಖಾನ್ ಹೆಸರಿನಲ್ಲಿ ನೆಡುವಂತೆ ಸಲಹೆ ನೀಡಿದ್ದಾರೆ. 

ಇತ್ತೀಚೆಗೆ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಆರ್ಯನ್ ಖಾನ್ ಗೆ ಜಾಮೀನು ನೀಡುವಾಗ 1 ಲಕ್ಷ ರೂಪಾಯಿ ಶೂರಿಟಿ ಬಾಂಡ್ ಗೆ ಜೂಹಿ ಚಾವ್ಲ ಸಹಿ ಹಾಕಿದ್ದರು ಎನ್ನುವುದು ಗಮನಾರ್ಹ ಸಂಗತಿಯಾಗಿದ್ದು, ಜೂಹಿ ಚಾವ್ಲ ಶಾರೂಖ್ ಕುಟುಂಬದೊಂದಿಗೆ ಅತ್ಯುತ್ತಮ ಸ್ನೇಹ ಹೊಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.