'ಮರ್ಡರ್', 'ರೋಗ್' ಖ್ಯಾತಿಯ ಚಿತ್ರಕಥೆಗಾರ ಸುಬೋಧ್ ಚೋಪ್ರಾ ನಿಧನ
"ಮರ್ಡರ್" ಮತ್ತು "ರೋಗ್" ಚಿತ್ರದ ಸಂಬಾಷಣೆಗಳಿಗೆ ಹೆಸರಾದ ಬರಹಗಾರ ಸುಬೋಧ್ ಚೋಪ್ರಾ (49 )ಅವರು ಮುಂಬೈನ ಆಸ್ಪತ್ರೆಯಲ್ಲಿ ನಿಧನವಾಗಿದ್ದಾರೆ. ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಅಲ್ಲದೆ ಅವರು ಕೆಲ ದಿನಗಳ ಹಿಂದಷ್ಟೇ ಕೋವಿಡ್ ನಿಂದ ಚೇತರಿಸಿಕೊಂಡಿದ್ದರೆಂದು ಅವರ ಸಹೋದರ ಶಶಾಂಕ್ ಚೋಪ್ರಾ ಹೇಳಿದ್ದಾರೆ.

"ಮರ್ಡರ್" ಮತ್ತು "ರೋಗ್" ಚಿತ್ರದ ಸಂಬಾಷಣೆಗಳಿಗೆ ಹೆಸರಾದ ಬರಹಗಾರ ಸುಬೋಧ್ ಚೋಪ್ರಾ (49)ಅವರು ಮುಂಬೈನ ಆಸ್ಪತ್ರೆಯಲ್ಲಿ ನಿಧನವಾಗಿದ್ದಾರೆ. ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಅಲ್ಲದೆ ಅವರು ಕೆಲ ದಿನಗಳ ಹಿಂದಷ್ಟೇ ಕೋವಿಡ್ ನಿಂದ ಚೇತರಿಸಿಕೊಂಡಿದ್ದರೆಂದು ಅವರ ಸಹೋದರ ಶಶಾಂಕ್ ಚೋಪ್ರಾ ಹೇಳಿದ್ದಾರೆ.
ಸುಬೋಧ್ ಚೋಪ್ರಾ ಅವರ ಆಮ್ಲಜನಕದ ಮಟ್ಟ ಕುಸಿದ ನಂತರ ಶುಕ್ರವಾರ ಮಲಾಡ್‌ನ ಉಪನಗರ ಲೈಫ್‌ಲೈನ್ ಆಸ್ಪತ್ರೆಗೆ ದಾಖಲಿಸಲಾಗಿದೆ. "ಅವರು ಮೇ 8 ರಂದು ಕೋವಿಡ್ 19 ನಿಂದ ಚೇತರಿಸಿಕೊಂಡಿದ್ದರು. ಅವರು ಹೊಟ್ಟೆಯಲ್ಲಿ ನೋವು ಅನುಭವಿಸುತ್ತಿದ್ದರು. ಅವರಿಗೆ ಏನೂ ತಿನ್ನಲು ಆಗುತ್ತಿರಲಿಲ್ಲ.ಅವರ ಆಮ್ಲಜನಕದ ಮಟ್ಟವು ಇದ್ದಕ್ಕಿದ್ದಂತೆ ಕುಸಿಯಿತು ಮತ್ತು ನಾವು ಮನೆಯಲ್ಲಿ ಸಿಲಿಂಡರ್‌ಗೆ ವ್ಯವಸ್ಥೆ ಮಾಡಿದ್ದೆವು" ಎಂದು ಶಾಂಕ್ ಚೋಪ್ರಾ ಪಿಟಿಐಗೆ ತಿಳಿಸಿದರು.
ಕೋವಿಡ್ ನಿಂದ ತಂದೆ ಸಾವನ್ನಪ್ಪಿದ ಹತ್ತು ದಿನಗಳ ಬಳಿಕ ಸುಬೋಧ್ ಚೋಪ್ರಾ, ಅವರ ಸೋದರ ಹಾಗೂ ಅತ್ತಿಗೆಗೆ ಕೋವಿಡ್ ಪಾಸಿಟಿವ್ ಎಂದು ವರದಿ ಬಂದಿತ್ತು.
ಸುಬೋಧ್ ಅವರು ವಸುಧಾ ಎಂಬ ಮಲಯಾಳಂ ಚಲನಚಿತ್ರವನ್ನು ನಿರ್ದೇಶಿಸಿದ್ದರು ಮತ್ತು ಮಹೇಶ್ ಭಟ್ ಅವರ ಹಿಂದಿ ಧಾರಾವಾಹಿಗಳಲ್ಲಿ ಸಹ ಕೆಲಸ ಮಾಡಿದ್ದರು.
ಸುಬೋಧ್ ಕಡೆಯದಾಗಿ 2019ರಲ್ಲಿ "ಇಮ್ಮಾರ್ಟಲ್ಸ್ ಆಫ್ ಕಾರ್ಗಿಲ್" ಎಂಬ ಸಾಕ್ಷ್ಯಚಿತ್ರಕ್ಕೆ ಸಂಭಾಷಣೆ ಬರೆದಿದ್ದರು.
ಈ ವರ್ಷ, ಹಲವಾರು ಬಾಲಿವುಡ್ ಕಲಾವಿದರು, ನಿರ್ದೇಶಕರು ಕೋವಿಡ್ -19 ಗೆ ಪ್ರಾಣ ಕಳೆದುಕೊಂಡರು. ಹಿರಿಯ ಸಂಗೀತ ಸಂಯೋಜಕ ಶ್ರವಣ್ ರಾಥೋಡ್‌ನಿಂದ ಸತೀಶ್ ಕೌಲ್, ಅಭಿಲಾಶಾ ಪಾಟೀಲ್, ಚಲನಚಿತ್ರ ಸಂಕಲನಕಾರ ಅಜಯ್ ಶರ್ಮಾ, ಬಿಕ್ರಮ್‌ಜೀತ್ ಕನ್ವರ್‌ಪಾಲ್ ಮತ್ತು ಯೂಟ್ಯೂಬರ್ ರಾಹುಲ್ ವೊಹ್ರಾ ಸೇರಿ ಅನೇಕರು ಕೋವಿಡ್ -19 ಗೆ ಬಲಿಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


