ಬಾಲಿವುಡ್'ಮರ್ಡರ್', 'ರೋಗ್' ಖ್ಯಾತಿಯ ಚಿತ್ರಕಥೆಗಾರ ಸುಬೋಧ್ ಚೋಪ್ರಾ ನಿಧನ
"ಮರ್ಡರ್" ಮತ್ತು "ರೋಗ್" ಚಿತ್ರದ ಸಂಬಾಷಣೆಗಳಿಗೆ ಹೆಸರಾದ ಬರಹಗಾರ ಸುಬೋಧ್ ಚೋಪ್ರಾ (49 )ಅವರು ಮುಂಬೈನ ಆಸ್ಪತ್ರೆಯಲ್ಲಿ ನಿಧನವಾಗಿದ್ದಾರೆ. ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಅಲ್ಲದೆ ಅವರು ಕೆಲ ದಿನಗಳ ಹಿಂದಷ್ಟೇ ಕೋವಿಡ್ ನಿಂದ ಚೇತರಿಸಿಕೊಂಡಿದ್ದರೆಂದು ಅವರ ಸಹೋದರ ಶಶಾಂಕ್ ಚೋಪ್ರಾ ಹೇಳಿದ್ದಾರೆ.