'ನಿಕ್ ಜೋನಸ್ ಪತ್ನಿ' ಎಂದು ಸಂಬೋಧಿಸಿದ ಮಾಧ್ಯಮದ ವಿರುದ್ಧ ಪ್ರಿಯಾಂಕಾ ಚೋಪ್ರಾ ತೀವ್ರ ಕಿಡಿ
ತಮ್ಮ ಮುಂಬರುವ ಚಿತ್ರ "ದಿ ಮ್ಯಾಟ್ರಿಕ್ಸ್ ರಿಸರೆಕ್ಷನ್" ಪ್ರಚಾರದಲ್ಲಿ ನಿರತರಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು, ತಮ್ಮನ್ನು ಮಾಧ್ಯಮ ಸಂಸ್ಥೆಯೊಂದು ವರದಿಯಲ್ಲಿ ನಿಕ್ ಜೋನಸ್ ಪತ್ನಿ ಎಂದು ಸಂಭೋಧಿಸಿದ್ದಕ್ಕೆ ತೀವ್ರ ಕಿಡಿಕಾರಿದ್ದಾರೆ.

ಮುಂಬೈ: ತಮ್ಮ ಮುಂಬರುವ ಚಿತ್ರ "ದಿ ಮ್ಯಾಟ್ರಿಕ್ಸ್ ರಿಸರೆಕ್ಷನ್" ಪ್ರಚಾರದಲ್ಲಿ ನಿರತರಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು, ತಮ್ಮನ್ನು ಮಾಧ್ಯಮ ಸಂಸ್ಥೆಯೊಂದು ವರದಿಯಲ್ಲಿ ನಿಕ್ ಜೋನಸ್ ಪತ್ನಿ ಎಂದು ಸಂಬೋಧಿಸಿದ್ದಕ್ಕೆ ತೀವ್ರ ಕಿಡಿಕಾರಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಪ್ರಿಯಾಂಕಾ ಅವರು, ನನಗೆ ನನ್ನದೇ ಆದ ಗುರ್ತಿಕೆ ಇದೆ. ನನ್ನ ಸಾಮಾಜಿಕ ಮಾಧ್ಯಮಗಳ ಖಾತೆಯ ಬಯೊದಲ್ಲಿ ಐಎಂಡಿಬಿ (ಸಿನಿಮಾ, ಟಿವಿ ಸರಣಿ ಮುಂತಾದ ಮನರಂಜನಾ ಕ್ಷೇತ್ರದ ಮಾಹಿತಿಯನ್ನೊಳಗೊಂಡ ಆನ್ಲೈನ್ ಡೇಟಾ ಬೇಸ್) ಲಿಂಕ್ ಶೇರ್ ಮಾಡಬೇಕೇ? ಇಂದಿಗೂ ಮಹಿಳೆಯರಿಗೆ ಏಕೆ ಹೀಗೆ ಆಗುತ್ತಿದೆ? ಈ ಬಗ್ಗೆ ವಿವರಣೆ ನೀಡಿ ಎಂದು ಒತ್ತಾಯಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ ಹಂಚಿಕೊಂಡಿರುವ ಸ್ಕ್ರೀನ್ ಶಾಟ್ನಲ್ಲಿ‘ ಗುಡ್ ಮಾರ್ನಿಂಗ್ ಅಮೆರಿಕ ಜೊತೆ ಮಾತನಾಡಿದ ನಿಕ್ ಜೋನಸ್ ಪತ್ನಿ, ‘ಮ್ಯಾಟ್ರಿಕ್ಸ್ ರಿಸರೆಕ್ಷನ್’ ಚಿತ್ರದ ಸಹ ನಟ ಕೀನು ರೀವ್ಸ್ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ’ಎಂದು ವರದಿ ಮಾಡಿರುವುದು ಕಂಡುಬಂದಿದೆ.
ಈ ವರದಿಯನ್ನು ಉಲ್ಲೇಖಿಸಿರುವ ಪ್ರಿಯಾಂಕಾ ಚೋಪ್ರಾ ಅವರು ‘ಅತ್ಯಂತ ಕುತೂಹಲಕಾರಿ ವಿಷಯವೇನೆಂದರೆ ನಾನು, ಸಾರ್ವಕಾಲಿಕ ಐಕಾನಿಕ್ ಫಿಲ್ಮ್ ಫ್ರಾಂಚೈಸಿಯನ್ನು ಪ್ರಮೋಟ್ ಮಾಡುತ್ತಿದ್ದೇನೆ. ಆದರೆ, ಈಗಲೂ ನನ್ನನ್ನು ವೈಫ್ ಆಫ್... ಎಂದೇ ಸಂಬೋಧಿಸಲಾಗುತ್ತಿದೆ’ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪೋಸ್ಟ್'ನ್ನು ಪತಿ ನಿಕ್ ಜೋನಸ್ ಖಾತೆಗೂ ಟ್ಯಾಗ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


