ಬಾಲಿವುಡ್

ಕೊರೋನಾ ವಿರುದ್ಧ ಒಗ್ಗೂಡಿ ಹೋರಾಡುವಂತೆ ಜನತೆಗೆ ನಟ ಸೋನು ಸೂದ್ ಕರೆ

ದೇಶದ ಬೆನ್ನು ಬಿಡದಂತೆ ಕಾಡುತ್ತಿರುವ ಮಹಾಮಾರಿ ಕೊರೋನಾ ವಿರುದ್ಧ ಒಗ್ಗೂಡಿ ಹೋರಾಡುವಂತೆ ಜನತೆಗೆ ಬಾಲಿವುಡ್ ನಟ ಸೋನು ಸೂದ್ ಅವರು ಕರೆ ನೀಡಿದ್ದಾರೆ.

ಕೊರೋನಾ ವಿರುದ್ಧ ಒಗ್ಗೂಡಿ ಹೋರಾಡುವಂತೆ ಜನತೆಗೆ ನಟ ಸೋನು ಸೂದ್ ಕರೆ
ಸೋನು ಸೂದ್
Published On :

ನವದೆಹಲಿ: ದೇಶದ ಬೆನ್ನು ಬಿಡದಂತೆ ಕಾಡುತ್ತಿರುವ ಮಹಾಮಾರಿ ಕೊರೋನಾ ವಿರುದ್ಧ ಒಗ್ಗೂಡಿ ಹೋರಾಡುವಂತೆ ಜನತೆಗೆ ಬಾಲಿವುಡ್ ನಟ ಸೋನು ಸೂದ್ ಅವರು ಕರೆ ನೀಡಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ನನಗೆ ನಿದ್ರೆ ಮಾಡಲಾಗುತ್ತಿಲ್ಲ...ಮಧ್ಯ ರಾತ್ರಿ ಫೋನ್ ರಿಂಗ್ ಆಗುತ್ತದೆ. ಫೋನ್ ತೆಗೆದಾಗ ಹತಾಶ ಧ್ವನಿ ಕೇಳಿ ಬರುತ್ತದೆ. ತಮ್ಮ ಪ್ರೀತಿ ಪಾತ್ರರನ್ನು ಕಾಪಾಡುವಂತೆ ಸಹಾಯ ಮಾಡುವಂತೆ ಜನರು ಮೊರೆ ಇಡುತ್ತಿದ್ದಾರೆ. ನಾವಿಂದು ಕಠಿಣ ಪರಿಸ್ಥಿತಿ ಎದುರಿಸುತ್ತಿರಬಹುದು. ಆದರೆ, ನಾಳೆ ಉತ್ತಮ ದಿನ ಬಂದೇ ಬರುತ್ತದೆ. ನಿಮ್ಮ ಪ್ರಾರ್ಥನೆ ಗಟ್ಟಿಯಾಗಿರಲಿ. ಎಲ್ಲರೂ ಒಗ್ಗಟ್ಟಿನಿಂದ ಇದ್ದರೆ, ಖಂಡಿತವಾಗಿಯೂ ಈ ಹೋರಾಟದಲ್ಲಿ ಗೆದ್ದೇ ಗೆಲ್ಲುತ್ತೇವೆ. ನಮಗೆ ಮತ್ತಷ್ಟು ಕೈಗಳ ಅಗತ್ಯವಿದೆಯಷ್ಟೇ ಎಂದು ಹೇಳಿದ್ದಾರೆ. 

ರಿಯಲ್ ಹೀರೋ ಆಗಿರುವ ನಟ ಸೋನು ಸೂದ್‌ ಅವರಿಗೆ ಒಂದು ವಾರದ ಹಿಂದಷ್ಟೇ ಕೋವಿಡ್ ಪಾಸಿಟಿವ್ ಬಂದಿತ್ತು. ಕೊರೋನಾ ಪರೀಕ್ಷಾ ವರದಿ ಬರುತ್ತಿದ್ದಂತೆಯೇ ಸೋನು ಸೂದ್ ಅವರು ಎಚ್ಚೆತ್ತುಕೊಂಡ ಪರಿಣಾಮ ಒಂದು ವಾರದಲ್ಲಿಯೇ ಗುಣಮುಖರಾಗಿದ್ದಾರೆ. ಇದೀಗ ಸೋನು ಸೂದ್ ಅವರಿಗೆ ಕೊರೋನಾ ನೆಗೆಟಿವ್ ಬಂದಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.