ಮಿಲಿಂದ್ ಸೋಮನ್ ಬೆತ್ತಲೆ ಓಟದ ಚಿತ್ರ: ತಪ್ಪೇನಿದೆ? ಅದು ಆತನ ಸೌಂದರ್ಯ ಎಂದ ಪೂಜಾ ಬೇಡಿ!
ರೂಪದರ್ಶಿ ಮಿಲಿಂದ್ ಸೋಮನ್ ತಮ್ಮ ಹುಟ್ಟು ಹಬ್ಬದ ದಿನದಂದು ಗೋವಾ ಕಡಲ ತೀರದಲ್ಲಿ ಬೆತ್ತಲೆಯಾಗಿ ಓಡುತ್ತಿರುವ ವಿವಾದಾಸ್ಪದ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವುದನ್ನು ಬಾಲಿವುಡ್ ನಟಿ ಪೂಜಾ ಬೇಡಿ ಸಮರ್ಥಿಸಿಕೊಂಡಿದ್ದಾರೆ

ಮುಂಬೈ: ರೂಪದರ್ಶಿ ಮಿಲಿಂದ್ ಸೋಮನ್ ತಮ್ಮ ಹುಟ್ಟು ಹಬ್ಬದ ದಿನದಂದು ಗೋವಾ ಕಡಲ ತೀರದಲ್ಲಿ ಬೆತ್ತಲೆಯಾಗಿ ಓಡುತ್ತಿರುವ ವಿವಾದಾಸ್ಪದ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವುದನ್ನು ಬಾಲಿವುಡ್ ನಟಿ ಪೂಜಾ ಬೇಡಿ ಸಮರ್ಥಿಸಿಕೊಂಡಿದ್ದಾರೆ. ನಿಜಕ್ಕೂ ಆ ಚಿತ್ರದಲ್ಲಿ ಅಂತಹ ಅಶ್ಲೀಲವೇನು ಇಲ್ಲ. ಅದು ಆತನ ಸೌಂದರ್ಯ ಎಂದೂ, ಅವರು ಬಣ್ಣಿಸಿದ್ದಾರೆ.
ಮಿಲಿಂದ್ ಚಿತ್ರವನ್ನು ಟ್ವಿಟ್ಟರ್ ನಲ್ಲಿ ನಾಗಾ ಸಾಧುಗಳೊಂದಿಗೆ ಹೋಲಿಸಿ, ನೀವು ಬೂದಿ ಬಳಿದು ಕೊಂಡು ಬೆತ್ತಲೆಯಾಗಿ ತಿರುಗಿದರೆ ಯಾವುದೇ ತಪ್ಪು ಇಲ್ಲದಿರುವಾಗ, ಮಿಲಿಂದ್ ಫೋಟೋದಲ್ಲೂ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ. "ಅಶ್ಲೀಲತೆ ನೋಡುಗರ ದೃಷ್ಟಿಯಲ್ಲಿದೆ. ಸುಂದರವಾಗಿ ಕಾಣಿಸಲು, ಪ್ರಸಿದ್ಧನಾಗಲು, ಮಾನದಂಡ ನಿಗದಿಪಡಿಸಿಕೊಳ್ಳುವುದು ಅಪರಾಧವೇ? ನಗ್ನತೆ ಅಪರಾಧವಾಗಿದ್ದರೆ ಎಲ್ಲಾ ನಾಗಾ ಸಾಧುಗಳನ್ನು ಬಂಧಿಸಬೇಕು, ಬೂದಿ ಬಳಿದುಕೊಂಡು ಬಹಿರಂಗವಾಗಿ ತಿರುಗಾಡುವುದು ಸ್ವೀಕಾರಾರ್ಹವಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಏತನ್ಮಧ್ಯೆ, ಮಿಲಿಂದ್ ತಮ್ಮ 55 ನೇ ಹುಟ್ಟುಹಬ್ಬದಂದು ಗೋವಾ ಕಡಲ ತೀರದಲ್ಲಿ ಬೆತ್ತಲೆಯಾಗಿ ಓಡುತ್ತಿರುವುದನ್ನು ಪತ್ನಿ ಅಂಕಿತಾ ಕೊನ್ವರ್ ಸೆರೆ ಹಿಡಿದಿದ್ದ ಫೋಟೋ ಅನ್ನು "ಹ್ಯಾಪಿ ಬರ್ತ್‌ಡೇ ಟು ಮಿ 55 " ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಅಪ್‌ಲೋಡ್ ಮಾಡಿದ್ದಕ್ಕಾಗಿ ಮಿಲಿಂದ್ ವಿರುದ್ಧ ಅಶ್ಲೀಲ ಪ್ರಕರಣ ದಾಖಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 (ಅಶ್ಲೀಲ) ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ದಕ್ಷಿಣ ಗೋವಾ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ಕುಮಾರ್ ಸಿಂಗ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಇತ್ತೀಚೆಗೆ, ಇದೇ ರೀತಿ ರೂಪದರ್ಶಿ, ನಟಿ ಪೂನಂ ಪಾಂಡೆ ಆಕ್ಷೇಪಾರ್ಹವಾದ ವಿಡಿಯೋ ಚಿತ್ರೀಕರಿಸಿದ್ದಕ್ಕಾಗಿ. ಆಕೆ, ಆಕೆಯ ಪತಿ ಸ್ಯಾಮ್ ವಿರುದ್ದ ಪ್ರಕರಣ ದಾಖಲಿಸಿ ಗೋವಾ ಪೊಲೀಸರು ಬಂಧಿಸಿದ್ದರು. ನಂತರ 20,000 ರೂ.ಗಳ ಬಾಂಡ್ ಮೇಲೆ ನ್ಯಾಯಾಲಯ ಅವರ ಬಿಡುಗಡೆಗೆ ಆದೇಶಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


