ಬೋಲ್ಡ್ ನಟಿ ಮಮತಾ ಕುಲಕರ್ಣಿ ಜೀವನಧಾರಿತ ಚಿತ್ರ ತೆರೆಗೆ
ತೊಂಬತ್ತರ ದಶಕದಲ್ಲಿ ಬಾಲಿವುಡ್‌ನ ಬೋಲ್ಡ್ ನಟಿ ಮಮತಾ ಕುಲಕರ್ಣಿ ಅವರ ಜೀವನದ ಬಗ್ಗೆ ಚಿತ್ರ ನಿರ್ಮಿಸುವ ಯೋಚನೆ ನಡೆದಿದೆ.

ನವದೆಹಲಿ: ತೊಂಬತ್ತರ ದಶಕದಲ್ಲಿ ಬಾಲಿವುಡ್‌ನ ಬೋಲ್ಡ್ ನಟಿ ಮಮತಾ ಕುಲಕರ್ಣಿ ಅವರ ಜೀವನದ ಬಗ್ಗೆ ಚಿತ್ರ ನಿರ್ಮಿಸುವ ಯೋಚನೆ ನಡೆದಿದೆ.
ಮಮತಾ ಅವರ ವಿವಾದಾತ್ಮಕ ಜೀವನವನ್ನು ಆಧರಿಸಿದ ಚಿತ್ರವೊಂದನ್ನು ನಿರ್ಮಿಸಲು ತಯಾರಿ ನಡೆದಿದೆ. ಈ ಚಿತ್ರವು ಬಿಲಾಲ್ ಸಿದ್ದಿಕಿ ಅವರು ಬರೆದ ‘ ದಿ ಸ್ಟಾರ್‌ಡಸ್ಟ್ ಅಫೇರ್’ ಪುಸ್ತಕವನ್ನು ಆಧರಿಸಿದೆ. ನಿರ್ಮಾಪಕ ನಿಖಿಲ್ ದ್ವಿವೇದಿ ಈ ಪುಸ್ತಕದ ಹಕ್ಕುಗಳನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪುಸ್ತಕವು ಮಮತಾ ಕುಲಕರ್ಣಿಯ ಜೀವನದ ಏರಿಳಿತಗಳನ್ನು ಒಳಗೊಂಡಿದೆ. ಬಾಲಿವುಡ್ ತಾರೆ ಹಲವು ವಿಷಯಗಳಿಂದ ಯಾವಾಗಲೂ ಸುದ್ದಿಯಲ್ಲಿದ್ದಾರೆ.
ಮಮತಾ ಕುಲಕರ್ಣಿ ತಮ್ಮ ಸಿನಿ ವೃತ್ತಿಜೀವನದಲ್ಲಿ ಕರಣ್-ಅರ್ಜುನ್, ಬಾಜಿ, ಚೀನಾ ಗೇಟ್, ತಿರಂಗಾ, ಕ್ರಾಂತಿವಿರ್ ಮತ್ತು ಸಬ್ಸೆ ಬಡಾ ಖಿಲಾಡಿ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಈ ಚಿತ್ರವನ್ನು ತೆರೆಯ ಮೇಲೆ ತರಲು ಚಿತ್ರ ತಂಡ ಶೀಘ್ರದಲ್ಲಿ ಪಾತ್ರಗಳನ್ನು ಆಯ್ಕೆ ಮಾಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


