ವಕೀಲೆ ಅಪರ್ಣಾ ಭಟ್ ಗೆ ಚಿತ್ರದಲ್ಲಿ ಪ್ರಾಶಸ್ತ್ಯ ಕೊಡಿ:'ಛಪಾಕ್'ಚಿತ್ರ ನಿರ್ಮಾಪಕರಿಗೆ ದೆಹಲಿ ಹೈಕೋರ್ಟ್ ಆದೇಶ
ಛಪಾಕ್ ಚಿತ್ರ ನಿರ್ಮಾಪಕರು ಮತ್ತು ವಕೀಲೆ ಅಪರ್ಣಾ ಭಟ್ ನಡುವಿನ ಕಾನೂನು ಹೋರಾಟದ ಕುರಿತು ಶನಿವಾರ ತೀರ್ಪು ನೀಡಿದ ದೆಹಲಿ ಹೈಕೋರ್ಟ್, ಚಿತ್ರದಲ್ಲಿ ವಕೀಲೆ ಅಪರ್ಣಾ ಭಟ್ ಅವರಿಗೆ ಪ್ರಾಶಸ್ತ್ಯ ನೀಡುವಂತೆ ಆದೇಶ ನೀಡಿದೆ.

ನವದೆಹಲಿ: ಛಪಾಕ್ ಚಿತ್ರ ನಿರ್ಮಾಪಕರು ಮತ್ತು ವಕೀಲೆ ಅಪರ್ಣಾ ಭಟ್ ನಡುವಿನ ಕಾನೂನು ಹೋರಾಟದ ಕುರಿತು ಶನಿವಾರ ತೀರ್ಪು ನೀಡಿದ ದೆಹಲಿ ಹೈಕೋರ್ಟ್, ಚಿತ್ರದಲ್ಲಿ ವಕೀಲೆ ಅಪರ್ಣಾ ಭಟ್ ಅವರಿಗೆ ಪ್ರಾಶಸ್ತ್ಯ ನೀಡುವಂತೆ ಆದೇಶ ನೀಡಿದೆ.
ಅಡ್ವೊಕೇಟ್ ಅಪರ್ಣಾ ಭಟ್ ಅವರಿಗೆ ಚಿತ್ರದಲ್ಲಿ ಪ್ರಾಶಸ್ತ್ಯ ನೀಡದಿದ್ದರೆ ಜನವರಿ 15ರ ನಂತರ ಮಲ್ಟಿಪ್ಲೆಕ್ಸ್ ಗಳಲ್ಲಿ ಮತ್ತು ಜನವರಿ 17ರ ನಂತರ ಆನ್ ಲೈನ್ ಪ್ರದರ್ಶನಕ್ಕೆ ತಡೆಯೊಡ್ಡಲಾಗುವುದು ಎಂದು ಸಹ ನ್ಯಾಯಾಲಯ ಎಚ್ಚರಿಕೆ ನೀಡಿದೆ.
ದೀಪಿಕಾ ಪಡುಕೋಣೆ ಅಭಿನಯದ ಛಪಾಕ್ ಚಿತ್ರದಲ್ಲಿ ನಿಜ ಜೀವನದಲ್ಲಿ ಆಸಿಡ್ ದಾಳಿಗೊಳಗಾಗಿದ್ದ ಲಕ್ಷ್ಮಿ ಅಗರ್ವಾಲ್ ಪರ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದ ವಕೀಲೆ ಅಪರ್ಣಾ ಭಟ್ ಅವರ ಹೆಸರನ್ನು ಬಳಸಿಕೊಳ್ಳಲಿಲ್ಲವೇಕೆ ಎಂದು ನಿನ್ನೆ ವಿಚಾರಣೆ ವೇಳೆ ಕೇಳಿದ ದೆಹಲಿ ಹೈಕೋರ್ಟ್ ಚಿತ್ರದ ನಿರ್ಮಾಪಕಿ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕಿ ಮೇಘನಾ ಗುಲ್ಜರ್ ಅವರನ್ನು ಕೇಳಿದೆ.
ಅಡ್ವೊಕೇಟ್ ಅಪರ್ಣಾ ಭಟ್ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ತ್ವರಿತ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಫಾಕ್ಸ್ ಸ್ಟಾರ್ ಸ್ಟುಡಿಯೊ ದೆಹಲಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


