ಬಾಲಿವುಡ್

70 ಕೆಜಿ ತೂಕದ ಹೆಡ್ ಲಿಫ್ಟ್ ಎತ್ತಿದ ಆಲಿಯಾ

ನಟಿ ಆಲಿಯಾ ಭಟ್ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದು, ಯಾವಾಗಲೂ ಹೊಸ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರುತ್ತಾರೆ. ಫಿಟ್‌ನೆಸ್‌ ಕುರಿತು ಕಾಳಜಿ ಹೊಂದಿದ ಆಲಿಯಾ, ಜಿಮ್‌ ನಲ್ಲಿ ಸಾಕಷ್ಟು ಕಸರತ್ತು ಮಾಡುತ್ತಿರುತ್ತಾರೆ.

70 ಕೆಜಿ ತೂಕದ ಹೆಡ್ ಲಿಫ್ಟ್ ಎತ್ತಿದ ಆಲಿಯಾ
ಅಲಿಯಾ ಭಟ್
Published On :

ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ 70 ಕೆಜಿ ತೂಕದ ಹೆಡ್ ಲಿಫ್ಟ್ ಭಾರ ಎತ್ತುವ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ

ನಟಿ ಆಲಿಯಾ ಭಟ್ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದು, ಯಾವಾಗಲೂ ಹೊಸ ಸವಾಲುಗಳನ್ನು  ಎದುರಿಸಲು ಸಿದ್ಧರಾಗಿರುತ್ತಾರೆ. ಫಿಟ್‌ನೆಸ್‌ ಕುರಿತು ಕಾಳಜಿ ಹೊಂದಿದ ಆಲಿಯಾ, ಜಿಮ್‌ ನಲ್ಲಿ ಸಾಕಷ್ಟು ಕಸರತ್ತು ಮಾಡುತ್ತಿರುತ್ತಾರೆ. ಇತ್ತೀಚೆಗೆ, ಆಲಿಯಾ ಅವರು ಭಾರ ಎತ್ತುತ್ತಿರುವ ವೀಡಿಯೋ ಒಂದನ್ನು ಅವರ ಫಿಟ್‌ನೆಸ್ ತರಬೇತುದಾರ ಇನ್‌-ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ತುಂಬಾ ಸ್ಲಿಮ್ ಟ್ರಿಮ್ ಆಗಿರುವ ಆಲಿಯಾ, ಇತ್ತೀಚೆಗಷ್ಟೇ 70 ಕೆಜಿ ತೂಕದ ಭಾರ ಎತ್ತಿದ್ದರು. ಅವರು  ಮೊದಲೆಂದಿಗೂ ಇಂತಹ ಸಾಹಸ ಮಾಡಿಲ್ಲವಂತೆ. ಹೀಗಾಗಿ ಆಲಿಯಾ ಅವರ ಈ ಸಾಧನೆಯನ್ನು ಮೆಚ್ಚಿ  ಅವರ ತರಬೇತುದಾರರ ''ಅರ್ಹಳಾದ ಕಲಾವಿದೆಗೆ ನಾನು (ಆಲಿಯಾ) ಅವರಿಗೆ ಸಲ್ಲಬೇಕಾದ ಶ್ರೇಯಸ್ಸು ನೀಡಲು ಬಯಸುತ್ತೇನೆ'' ಎಂದು ಶೀರ್ಷಿಕೆ ಬರೆದು ವೀಡಿಯೋ ಒಂದನ್ನು ಇನ್-ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.