ಈ ಸೂಪರ್ ಸ್ಟಾರ್ ಬಾಲಿವುಡ್ ನಟನಿಗಾಗಿ 'ನೋ ಕಿಸ್' ಷರತ್ತು ಬಿಡ್ತಾರಂತೆ ತಮನ್ನಾ!
ಬಹುಭಾಷಾ ನಟಿ ತಮನ್ನಾ ಭಾಟಿಯಾ ಯಾವುದೇ ಸಿನಿಮಾದಲ್ಲಿ ಅಭಿನಯಿಸಿದರೂ ತೆರೆ ಮೇಲೆ ಯಾರಿಗೂ ಕಿಸ್ ಮಾಡೋದಿಲ್ಲ ಅಂತ ಮೊದಲೇ ಷರತ್ತು ಹಾಕಿರುತ್ತಾರಂತೆ.

Published On :
ಬಹುಭಾಷಾ ನಟಿ ತಮನ್ನಾ ಭಾಟಿಯಾ ಯಾವುದೇ ಸಿನಿಮಾದಲ್ಲಿ ಅಭಿನಯಿಸಿದರೂ ತೆರೆ ಮೇಲೆ ಯಾರಿಗೂ ಕಿಸ್ ಮಾಡೋದಿಲ್ಲ ಅಂತ ಮೊದಲೇ ಷರತ್ತು ಹಾಕಿರುತ್ತಾರಂತೆ. ಆದರೆ ಈ ಬಾಲಿವುಡ್ ನಟನಿಗಾಗಿ ಮಾತ್ರ ಈ ಷರತ್ತನ್ನು ಕೈ ಬಿಡುತ್ತಾರಂತೆ.
ಹೌದು, ಈಗಂತ ಸ್ವತಃ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರೇ ಬಹಿರಂಗ ಪಡಿಸಿದ್ದಾರೆ. ಇತ್ತೀಚೆಗೆ ನಡೆದ ತಮಿಳು ಫಿಲ್ಮ್ ಫೇರ್ ನಲ್ಲಿ ಈ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಬಾಲಿವುಡ್ ನಟ ಹೃತಿಕ್ ರೋಷನ್ ನಾಯಕರಾದರೆ ನಾನು ಕಿಸ್ ಮಾಡಲು ಸಿದ್ಧ ಎಂದು ಹೇಳಿದ್ದಾರೆ.
ಹೃತಿಕ್ ರೋಷನ್ ಅವರನ್ನು ಕಂಡರೆ ತಮನ್ನಾಗೆ ತುಂಬಾ ಇಷ್ಟವಂತೆ. ಹೀಗಾಗಿಯೆ ಒಮ್ಮ ಹೃತಿಕ್ ರನ್ನು ಭೇಟಿಯಾಗಿದ್ದಾಗ ನಾನು ಸಂಪೂರ್ಣವಾಗಿ ಒಬ್ಬ ಅಭಿಮಾನಿಯಾಗಿ ಅವರೊಂದಿಗೆ ಕಾಲ ಕಳೆದಿದ್ದೆ ಎಂದು ತಮ್ಮನ್ನಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


