ಬಾಲಿವುಡ್

ಡೇಟಿಂಗ್ ಬಗ್ಗೆ ಸೋನಾಕ್ಷಿ ಸಿನ್ಹಾಗೆ ಪೋಷಕರ ಸಲಹೆ ಏನು ಗೊತ್ತೇ?

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಡೇಟಿಂಗ್ ಮಾಡಿದರೆ ಎಂತಹ ಹುಡುಗನನ್ನು ಡೇಟಿಂಗ್ ಮಾಡಬೇಕೆಂದು ಆಕೆಯ ಪೋಷಕರು ಹೇಳಿದ್ದಾರೆ.

ಡೇಟಿಂಗ್ ಬಗ್ಗೆ  ಸೋನಾಕ್ಷಿ ಸಿನ್ಹಾಗೆ ಪೋಷಕರ ಸಲಹೆ ಏನು ಗೊತ್ತೇ?
ಸೋನಾಕ್ಷಿ ಸಿನ್ಹಾ ಡೇಟಿಂಗ್ ಮಾಡಲು ಪೋಷಕರ ಆಕ್ಷೇಪ ಇಲ್ಲ, ಹುಡುಗನಿಗೆ ಇರಬೇಕಾದ ಗುಣಲಕ್ಷಣಗಳೇನು ಗೊತ್ತೇ?
Published On :
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಡೇಟಿಂಗ್ ಮಾಡಿದರೆ ಎಂತಹ ಹುಡುಗನನ್ನು ಡೇಟಿಂಗ್ ಮಾಡಬೇಕೆಂದು ಆಕೆಯ ಪೋಷಕರು ಹೇಳಿದ್ದಾರೆ.
ಬಾಲಿವುಡ್ ನಲ್ಲಿ ಡೇಟಿಂಗ್ ಮಾಡುವುದರ ಬಗ್ಗೆ ಅವರ ದೃಷ್ಟಿಕೋನ ಏನೆಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಸೋನಾಕ್ಷಿ ಸಿನ್ಹಾ, ಒಳ್ಳೆಯ ಗುಣವಿರುವ (ಸುಶೀಲ) ಹುಡುಗನೊಂದಿಗೆ ಡೇಟಿಂಗ್ ಮಾಡುವುದು ಸೂಕ್ತ ಎಂದು ಪೋಷಕರು ಹೇಳಿರುವುದಾಗಿ ತಿಳಿಸಿದ್ದಾರೆ. 
ಆದರೆ ಬಾಲಿವುಡ್ ನಲ್ಲಿ ಈ ರೀತಿಯ ಒಳ್ಳೆಯ ಗುಣವಿರುವ ಹುಡುಗರು ಸಿಗುವುದು ಕಷ್ಟ ಎಂದು ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ. 
ನಾನು ಓರ್ವ ಖ್ಯಾತನಾಮರೊಂದಿಗೆ ಡೇಟಿಂಗ್ ಮಾಡಿದ್ದೆ ಆದರೆ ಈ ಕುರಿತು ಪ್ರಪಂಚಕ್ಕೆ ತಿಳಿದಿಲ್ಲ ಎಂದು ಸೋನಾಕ್ಷಿ ಸಿನ್ಹಾ  ಹೆಚ್ಚು ಮಾಹಿತಿ ಬಹಿರಂಗಪಡಿಸದೇ ತಮ್ಮ ಡೇಟಿಂಗ್ ವಿಷಯವನ್ನು ಹಂಚಿಕೊಂಡಿದ್ದಾರೆ. ಸೋನಾಕ್ಷಿ ಸಿನ್ಹಾ ಖ್ಯಾತ ಬಾಲಿವುಡ್ ನಟ, ರಾಜಕಾರಣಿ ಶತೃಘ್ನ ಸಿನ್ಹ-ಪೂನಂ ಸಿನ್ಹಾ ಅವರ ಮಗಳು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.