ನಾನಾ ಪಟೇಕರ್ ಮುಂದಿನ ಸಿನಿಮಾ 'ಹೌಸ್ ಪುಲ್ 4 ' ಚಿತ್ರೀಕರಣ ಆರಂಭ
ಬಾಲಿವುಡ್ ನಟಿ ತನುಶ್ರೀ ದತ್ ಅವರ ಎಲ್ಲಾ ಆರೋಪಗಳ ನಡುವೆಯೂ ಸಜ್ಜಿದ್ ಖಾನ್ ನಿರ್ದೇಶನದ ಮುಂದಿನ ಸಿನಿಮಾ ಹೌಸ್ ಪುಲ್ 4 ಚಿತ್ರದ ಚಿತ್ರೀಕರಣವನ್ನು ಜೈಸಲ್ಮೇರ್ ನಲ್ಲಿ ಆರಂಭಿಸಿದ್ದಾರೆ.

ನವದೆಹಲಿ: ಬಾಲಿವುಡ್ ನಟಿ ತನುಶ್ರೀ ದತ್ ಅವರ ಎಲ್ಲಾ ಆರೋಪಗಳ ನಡುವೆಯೂ ಸಜ್ಜಿದ್ ಖಾನ್ ನಿರ್ದೇಶನದ ಮುಂದಿನ ಸಿನಿಮಾ ಹೌಸ್ ಪುಲ್ 4 ಚಿತ್ರದ ಚಿತ್ರೀಕರಣವನ್ನು ಜೈಸಲ್ಮೇರ್ ನಲ್ಲಿ ಆರಂಭಿಸಿದ್ದಾರೆ.
2008ರಲ್ಲಿ 'ಹಾರ್ನ್ ಒಕೆ ಪ್ಲೀಸಸ್ ' ಚಿತ್ರದ ಚಿತ್ರೀಕರಣ ವೇಳೆಯಲ್ಲಿ ಬಾಲಿವುಡ್ ಹಿರಿಯ ನಟ ನಾನಾ ಪಟೇಕರ್ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಲೈಂಗಿಕ ಕಿರುಕುಳು ನೀಡಿದ್ದಾರೆ ಎಂದು ಆರೋಪಿದ್ದರು.
ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಮೇಲೂ ತನುಶ್ರೀ ದತ್ ಆರೋಪ ಮಾಡಿದ್ದರು. ಆದಾಗ್ಯೂ, ಈ ಎಲ್ಲಾ ನಾಟಕಗಳ ಮಧ್ಯೆ, ನಾನಾ ಪಟೇಕರ್ ಅವರ ಮುಂದಿನ ಚಿತ್ರದ ಚಿತ್ರೀಕರಣವನ್ನು ಆರಂಭಿಸಿದ್ದಾರೆ.
ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿರುವ ಪರ್ಹನ್ ಖಾನ್ ಚಿತ್ರೀಕರಣದ ಚಿತ್ರವೊಂದನ್ನು ತಮ್ಮ ಇನ್ ಟಾಗ್ರಾಮ್ ನಲ್ಲಿ ಹಾಕಿಕೊಂಡಿದ್ದಾರೆ.
ಕೀರ್ತಿ ಸನಾನ್, ಪೂಜಾ ಹೆಗ್ಡೆ, ನಾನಾ ಪಟೇಕರ್ ಈ ಪೋಟೋದಲ್ಲಿದ್ದಾರೆ.
ಅಕ್ಷಯ್ ಕುಮಾರ್, ಬಾಬಿ ಡಿಯೊಲ್, ರಿತೇಶ್ ದೇಶ್ ಮುಖ್ ಹಾಗೂ ಕೀರ್ತಿ ಕರಬಂಧ ಮತ್ತಿತರ ತಾರಾಗಣವಿರುವ ಈ ಚಿತ್ರ ಹೌಸ್ ಪುಲ್ ಚಿತ್ರ ಸರಣಿಯ ನಾಲ್ಕನೇ ಸಿನಿಮಾವಾಗಿದೆ.
ಮುಂದಿನ ವರ್ಷದ ಅಕ್ಟೋಬರ್ ವೇಳೆಗೆ ದೀಪಾವಳಿ ಕೂಡುಗೆಯಾಗಿ ಚಿತ್ರ ಬಿಡುಗಡೆ ಆಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


