ಬಾಲಿವುಡ್

ಲವ್ ಯಾತ್ರಿ ವಿವಾದ: ಸಲ್ಮಾನ್ ವಿರುದ್ಧ ಎಫ್ಐಆರ್ ರದ್ದುಗೊಳಿಸಿದ ಸುಪ್ರೀಂ

ಬಾಲಿವುಡ್ ಬಹು ನಿರೀಕ್ಷಿತರ ಚಿತ್ರ ಲವ್ ಯಾತ್ರಿ ನಿರ್ಮಾಪಕರಾದ ಬಾಲಿವುಡ್ ಸ್ಟಾರ್ ಒಡೆತನದ ಸಲ್ಮಾನ್ ಖಾನ್ ವೆಂಚರ್ಸ್ ಪ್ರೈ.ಲಿ. ಅಥವಾ ನಟ ಸಲ್ಮಾನ್ ವಿರುದ್ಧ ದೇಶದ ಯಾವುದೇ ಭಾಗದಲ್ಲಿ ....

ಲವ್ ಯಾತ್ರಿ ವಿವಾದ: ಸಲ್ಮಾನ್ ವಿರುದ್ಧ ಎಫ್ಐಆರ್ ರದ್ದುಗೊಳಿಸಿದ ಸುಪ್ರೀಂ
’ಲವ್ ರಾತ್ರಿ’
Published On :
ನವದೆಹಲಿ: ಬಾಲಿವುಡ್ ಬಹು ನಿರೀಕ್ಷಿತರ ಚಿತ್ರ ಲವ್ ಯಾತ್ರಿ ನಿರ್ಮಾಪಕರಾದ ಬಾಲಿವುಡ್ ಸ್ಟಾರ್ ಒಡೆತನದ ಸಲ್ಮಾನ್ ಖಾನ್ ವೆಂಚರ್ಸ್ ಪ್ರೈ.ಲಿ. ಅಥವಾ ನಟ ಸಲ್ಮಾನ್ ವಿರುದ್ಧ ದೇಶದ ಯಾವುದೇ ಭಾಗದಲ್ಲಿ ದಂಡನಾ ಕ್ರಮ ತೆಗೆದುಕೊಳ್ಳುವಂತಿಲ್ಲ ಎಂದು ಗುರುವಾರ ಸುಪ್ರೀಂ ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಾಧೀಶ ದಿಪಕ್ ಮಿಶ್ರಾ ನೇತೃತ್ವದ ಪೀಠವು ಅಕ್ಟೋಬರ್ 5 ರಂದು ಬಿಡುಗಡೆಯಾಗುವ ’ಲವ್ ಯಾತ್ರಿ’ ಚಿತ್ರಕ್ಕೆ ಸಂಬಂಧಿಸಿ ದಾಖಲಾದ ಎಫ್ಐಆರ್ ಅನ್ನು ರದ್ದುಗೊಳಿಸಿದೆ.
ಹಿಂದೂ ಭಾವನೆಗಳಿಗೆ ಧಕ್ಕೆ ಆಗುವ ಅಂಶಗಳಿದೆ ಎಂದು ಆರೋಪಿಸಿ ಸಲ್ಮಾನ್ ಖಾನ್  ಹಾಗೂ ಇತರೆ ಏಳು ಮಂದಿಯ ಮೇಲೆ ಬಿಹಾರದ ಮುಜಾಫರ್ ಪುರ  ಮಿಥನ್ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತಮ್ಮ ಮೇಲಿನ  ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಮಾನ್ ಖಾನ್ ಸುಪ್ರೀಂ ಮೊರೆ ಹೋಗಿದ್ದು ಮನವಿ ಆಲಿಸಿದ ನ್ಯಾಯಾಲಯ ಚಿತ್ರದ ವಿಷಯ ಮತ್ತು ಶೀರ್ಷಿಕೆಯ ವಿಚಾರದಲ್ಲಿ ಚಿತ್ರತಂಡದ ವಿರುದ್ಧ ಯಾವುದೇ ದಂಡನಾ ಕ್ರಮ ತೆಗೆದುಕೊಳ್ಳುವಂತಿಲ್ಲ ಎಂದು ಹೇಳಿದೆ.
ಆಯುಷ್ ಶರ್ಮ ಹಾಗೂ ವಾರಿನಾ ಹುಸೇನ್ ಅವರ ಚೊಚ್ಚಲ ಚಿತ್ರ ಇದಾಗಿದ್ದು ಚಿತ್ರತಂಡ ಶೀರ್ಷಿಕೆಯನ್ನು ’ಲವ್ ರಾತ್ರಿ’ ಇಂದ ’ಲವ್ ಯಾತ್ರಿ’ ಎಂದು ಬದಲಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.