ಥಗ್ಸ್ ಆಫ್ ಹಿಂದೂಸ್ತಾನ್ ಮೊದಲ ಪೋಸ್ಟರ್ ಔಟ್, ಟ್ರೇಲರ್ ಬಿಡುಗಡೆ ಯಾವಾಗ ಗೊತ್ತಾ?
ಬಾಲಿವುಡ್ ನ ಈ ವರ್ಷದ ಚಿತ್ರಗಳಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ ಯಶ್ ರಾಜ್ ಪ್ರೊಡಕ್ಷನ್ಸ್ ನಿರ್ಮಾಣದ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದ ಪ್ರಥಮ ಪೋಸ್ಟರ್ ಬಿಡುಗಡೆಯಾಗಿದೆ.

Published On :
ಮುಂಬೈ: ಬಾಲಿವುಡ್ ನ ಈ ವರ್ಷದ ಚಿತ್ರಗಳಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ ಯಶ್ ರಾಜ್ ಪ್ರೊಡಕ್ಷನ್ಸ್ ನಿರ್ಮಾಣದ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದ ಪ್ರಥಮ ಪೋಸ್ಟರ್ ಬಿಡುಗಡೆಯಾಗಿದೆ.
ಮಂಗಳವಾರ ಬಿಡುಗಡೆಯಾಗಿರುವ ಈ ಪೋಸ್ಟರ್ ನಲ್ಲಿ ನಾವು ಬಿಗ್ ಬಿ ಅಮಿತಾಬ್ ಬಚ್ಚನ್, ಅಮೀರ್ ಖಾನ್, ಫಾತಿಮಾ ಸನಾ, ಶಾರುಖ್ ಹಾಗೂ ಕತ್ರೀನಾ ಕೈಫ್ ಅವರನ್ನು ಕಾಣುಬಹುದು.
ಯಶ್ ಚೋಪ್ರಾ ಅವರ ಜನ್ಮದಿನದವಾದ ಸೆಪ್ಟೆಂಬರ್ 27ಕ್ಕೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವುದಾಗಿ ನಿರ್ಮಾಣ ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ.
ಪೋಸ್ಟರ್ ನಲ್ಲಿ ಅಮಿತಾಬ್ ಹಾಗೂ ಫಾತಿಮಾ ಕತ್ರೀನಾ ಅವರ ಮೇಲೆ ಯುದ್ಧ ಮಾಡುವ ಭಂಗಿಯಲ್ಲಿದ್ದಾರೆ. ಇದು ಪೋಸ್ಟರ್ ಮೆರುಗನ್ನು ಹೆಚ್ಚಿಸುವಂತಿದೆ. ಚಿತ್ರದ ಪ್ರಮುಖ ತಾರಾಂಗಣದಲ್ಲಿರುವ ಅಮಿತಾಬ್, ಅಮೀರ್, ಪಾತಿಮಾ ಸೇರಿ ಅನೇಕರ ವೈಯುಕ್ತಿಕ ಪೋಸ್ಟರ್ ಗಳು ಇದಾಗಲೇ ಸಾಕಷ್ಟು ಜನಪ್ರಿಯವಾಗಿದೆ. ಆದರೆ ಇದೇ ಮೊದಲ ಬಾರಿಗೆ ಅಮಿತಾಬ್ ಹಾಗೂ ಅಮೀರ್ ಖಾನ್ ಒಂದೇ ಪೋಸ್ಟರ್ನಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಇನ್ನು ಚಿತ್ರದಲ್ಲಿ ಕತ್ರೀನಾ ಪಾತ್ರದ ಕುರಿತು ಹೆಚ್ಚು ಮಾಹಿತಿ ಹೊರಬಂದಿಲ್ಲ. ಆಕೆ ನಿರ್ವಹಿಸುತ್ತಿರುವ ಸುರಯ್ಯಾ ಪಾತ್ರದ ಕುರಿತು ಚಿತ್ರಪ್ರೇಮಿಗಳಲ್ಲಿ ಸಾಕಷ್ಟು ನಿರೀಕ್ಷೆಗಳಿದೆ.
ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಅಮೀರ್ ಈ ಕುರಿತಂತೆ ತಮ್ಮ ಉತ್ಸಾಹವನ್ನೂ ಹಂಚಿಕೊಂಡಿದ್ದಾರೆ. "ಈ ಪೋಸ್ಟರ್ ನಲ್ಲಿ ನನ್ನನ್ನು ನಾನು ಕಂಡುಕೊಳ್ಳುವಾಗ ನಾನು ಮಿ. ಬಚ್ಚನ್ ಜತೆಯಾಗಿರುವದನ್ನು ಕಂಡು ಅತ್ಯಂತ ಸಂತಸವಾಗುತ್ತದೆ. ಇದು ನನ್ನ ದೊಡ್ಡ ಕನಸಾಗಿತ್ತು. ಆದರೆ ನನಗೀಗಲೂ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ." ಅಮೀರ್ ಖಾನ್ ಟ್ವೀಟ್ ಮಾಡಿದ್ದಾರೆ.
ಥಗ್ಸ್ ನ ಮೊದಲ ಮೋಷನ್ ಪೋಸ್ಟರ್ ಬಿಡುಗಡೆಗೊಂಡಂದಿನಿಂದ ಚಿತ್ರಪ್ರೇಮಿಗಳಲ್ಲಿ ಚಿತ್ರದ ಬಗೆಗೆ ಕುತೂಹಲವಿದ್ದು ಇದೀಗ ಚಿತ್ರದ ಟ್ರೇಲರ್ ಬಿಡುಗಡೆಗಾಗಿ ಅವರು ಕಾಯುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Amitabh Bachchanಅಮಿತಾಬ್ ಬಚ್ಚನ್Aamir Khanಅಮೀರ್ ಖಾನ್Posterಪೋಸ್ಟರ್Thugs Of Hindostanಥಗ್ಸ್ ಆಫ್ ಹಿಂದೂಸ್ತಾನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


