23 ವರ್ಷ ಪೂರೈಸಿದ ಡಿಡಿಎಲ್'ಜೆ ಹಿಂದಿ ಚಿತ್ರ
ನಟ ಶಾರುಖ್ ಖಾನ್ ಹಾಗೂ ಕಾಜೋಲ್ ಅಭಿನಯದ 'ದಿಲ್ ವಾಲೆ ಧುಲ್ಹನಿಯಾ ಲೇ ಜಾಯೇಂ ಗೆ' ಚಿತ್ರ ತೆರೆಕಂಡು 23 ವರ್ಷಗಲು ಕಳೆದಿದ್ದೂ, ಆದರೂ ಈ ಚಿತ್ರ ಇಂದಿಗೂ ಪ್ರದರ್ಶನಗೊಳ್ಳುತ್ತಿದೆ...

Published On :
ಮುಂಬೈ: ನಟ ಶಾರುಖ್ ಖಾನ್ ಹಾಗೂ ಕಾಜೋಲ್ ಅಭಿನಯದ 'ದಿಲ್ ವಾಲೆ ಧುಲ್ಹನಿಯಾ ಲೇ ಜಾಯೇಂ ಗೆ' ಚಿತ್ರ ತೆರೆಕಂಡು 23 ವರ್ಷಗಳು ಕಳೆದಿದ್ದೂ, ಆದರೂ ಈ ಚಿತ್ರ ಇಂದಿಗೂ ಪ್ರದರ್ಶನಗೊಳ್ಳುತ್ತಿದೆ.
ಮುಂಬೈನ ಮರಾಠಾ ಮಂದಿರ್ ಚಿತ್ರಮಂದಿರದಲ್ಲಿ ಡಿಡಿಎಲ್'ಜೆ 1,200 ವಾರಗಳ ಪ್ರದರ್ಶನ ಪೂರೈಸಿದೆ.
ಇದಕ್ಕೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಶಾರುಖ್ ಅವರು, ಚಿತ್ರದ ಕುರಿತು ಜನರು ತೋರಿದ ಪ್ರೀತಿಗೆ ನಾನು ಚಿರಋಣಿ. 1200 ವಾರಗಳ ಬಳಿಕವೂ ಚಿತ್ರ ನಿರಂತರ ಪ್ರದರ್ಶನ ಕಾಣುತ್ತಿದೆ. ರಾಜ್ ಮತ್ತು ಸಿಮ್ರನ್ ಪ್ರೇಮಕಥೆ ಇನ್ನೂ ಜೀವಂತವಾಗಿದೆ ಎಂದು ಹೇಳಿದ್ದಾರೆ.
ನಟಿ ಕಾಜೋಲ್ ಸಹ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿ, ಡಿಡಿಎಲ್'ಜೆ 1200 ವಾರಗಳ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಗ್ಗೆ ಪ್ರೀತಿ ಇಟ್ಟುಕೊಂಡಿರುವ ಅಭಿಮಾನಿಗಳಿಗೆ ಧನ್ಯವಾದಗಳು. 1200 ವಾರಗಳಾದಲೂ ಈಗಲೂ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಹಲವು ವರ್ಷಗಳ ಕಾಲ ಚಿತ್ರದ ಬಗ್ಗೆ ಪ್ರೀತಿ ತೋರಿಸುತ್ತಿರುದಕ್ಕೆ ಅಭಿಮಾನಿಗಳಿಗೆ ಧನ್ಯವಾದ. ಚಿತ್ರ ಹಿಂದೆ, ಈಗ ಹಾಗೂ ಯಾವಾಗಲೂ ನಮ್ಮೆಲ್ಲರಿಗೂ ವಿಶೇಷ ಚಿತ್ರವಾಗಿಯೇ ಇರಲಿದೆ ಎಂದು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Mumbaiಮುಂಬೈಶಾರುಖ್ ಖಾನ್Bollywoodಬಾಲಿವುಡ್Movieಚಿತ್ರDilwale Dulhania Le JayengeKajolಕಾಜೋಲ್Rukh Khanದಿಲ್ ವಾಲೆ ಧುಲ್ಹನಿಯಾ ಲೇ ಜಾಯೇಂ ಗೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


