#MeToo ಅಭಿಯಾನ ಬೆಂಬಲಿಸಿ ಮುಂದಿನ ಚಿತ್ರ ನಿರ್ಮಾಣ ಕೈಬಿಟ್ಟ ಅಮೀರ್ ಖಾನ್!
ಬಾಲಿವುಡ್ ಮೇರು ನಟರಲ್ಲಿ ಒಬ್ಬರಾದ ಆಮೀರ್ ಖಾನ್ ದೇಶದೆಲ್ಲೆಡೆ ಸದ್ದು ಮಾಡುತ್ತಿರುವ "ಮೀಟೂ" ಅಭಿಯಾನವನ್ನು ಬೆಂಬಲಿಸಿ ತಮ್ಮ ನಿರ್ಮಾಣ ಸಂಸ್ಥೆಯ ಮುಂದಿನ ಯೋಜನೆ ಕೈಬಿಟ್ಟಿದ್ದಾರೆ.

Published On :
ನವದೆಹಲಿ: ಬಾಲಿವುಡ್ ಮೇರು ನಟರಲ್ಲಿ ಒಬ್ಬರಾದ ಆಮೀರ್ ಖಾನ್ ದೇಶದೆಲ್ಲೆಡೆ ಸದ್ದು ಮಾಡುತ್ತಿರುವ "ಮೀಟೂ" ಅಭಿಯಾನವನ್ನು ಬೆಂಬಲಿಸಿ ತಮ್ಮ ನಿರ್ಮಾಣ ಸಂಸ್ಥೆಯ ಮುಂದಿನ ಯೋಜನೆ ಕೈಬಿಟ್ಟಿದ್ದಾರೆ.
ನಿರ್ದೇಶಕ ಸುಭಾಷ್ ಕಪೂರ್ ಸಾರಥ್ಯದಲ್ಲಿ ಗುಲ್ಶನ್ ಕುಮಾರ್ ಜೀವನಾಧಾರಿತ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದ ನಟ ಈಗ ಈ ಯೋಜನೆ ಕೈಬಿಟ್ಟಿದ್ದಾಗಿ ಘೋಷಿಸಿದ್ದಾರೆ. ಸುಭಾಷ್ ಕಪೂರ್ ವಿರುದ್ಧ ನಟಿ ಗೀತಿಕಾ ತ್ಯಾಗಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಅಮೀರ್ ಪತ್ನಿ ಕಿರಣ್ ರಾವ್ ತಾವು "ಮೀಟೂ" ಚಲವಳಿಯನ್ನು ಬೆಂಬಲಿಸಿ ತಮ್ಮ ಮುಂದುಇನ ಚಿತ್ರ ನಿರ್ಮಾಣವನ್ನು ಸ್ಥಗಿತಗೊಳಿಸಿದ್ದೇವೆ ಎಂದು ಹೇಳಿದ್ದಾರೆ.
ಈ ಕುರಿತಂತೆ ನಟ ಅಮೀರ್ ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ್ದು ಲೈಂಗಿಕ ಕಿರುಕುಳ ಮತ್ತು ಅಸಭ್ಯ ವರ್ತನೆ ಸಹಿಸಲು ಸಾಧ್ಯವಿಲ್ಲ, ನಾನು ನಿರ್ಮಾಣ ಮಾಡಲು ಉದ್ದೇಶಿಸಿದ್ದ ಚಿತ್ರದಲ್ಲಿ ಕೆಲಸ ಮಾಡುವ ಓರ್ವ ವ್ಯಕ್ತಿಯ ಮೇಲೆ ಇತೀಚೆಗೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಹಿಗಾಗಿ ಣಾನು ನನ್ನ ಉದ್ದೇಶಿಸ್ತ ಚಿತ್ರ ನಿರ್ಮಾಣವನ್ನು ಕೈಬಿಡುತ್ತಿದ್ದೇನೆ ಎಂದಿದ್ದಾರೆ.
ಅಮೀರ್ ಖಾನ್ ಅವರ ಈ ನಿರ್ಧಾರವನ್ನು ಗೀತಾ ತ್ಯಾಗಿ ಸ್ವಾಗತಿಸಿದ್ದು "ಇದು ಶ್ಲಾಘನೀಯವಾಗಿದೆ ಮತ್ತು ನಾವು ಬಯಸುವ ರೀತಿಯ ಬೆಂಬಲ ಇದರಿಂದ ಸಿಗಲಿದೆ. ಇನ್ನೂ ಹೆಚ್ಚು ಹೆಚ್ಚು ಮಹಿಳೆಯರು ತಮಗಾದ ಅನುಭವವನ್ನು ಧೈರ್ಯವಾಗಿ ಹೇಳೀಕೊಳ್ಳಬಹುದು" ಎಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Aamir Khanಅಮೀರ್ ಖಾನ್Kiran Raoಕಿರಣ್ ರಾವ್Subhash KapoorGulshan Kumar biopicಸುಭಾಷ್ ಕಪೂರ್ ಗುಲ್ಶನ್ ಕುಮಾರ್ ಬಯೋಪಿಕ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


