ನನ್ನ ಸಂಬಂಧಗಳ ಬಗ್ಗೆ ವಿವರಣೆ ಅಥವಾ ಸಮರ್ಥನೆ ಅಗತ್ಯವಿಲ್ಲ- ಪ್ರಿಯಾಂಕಾ ಚೋಪ್ರಾ
ಯಾರೊಬ್ಬರ ನಡುವಿನ ಸಂಬಂಧ ಬಗ್ಗೆ ಏನು ವಿವರಣೆ ನೀಡಬೇಕಾದ ಅಗತ್ಯವಿಲ್ಲ ಎಂದು ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಪ್ರತಿಕ್ರಿಯಿಸಿದ್ದಾರೆ.

ಮುಂಬೈ: ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ, ಬಾಯ್ ಪ್ರೆಂಡ್ ನಿಕ್ ಜೋನಾಸ್ ಜೊತೆಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಎಂಬಂತಹ ವದಂತಿಗಳು ಪ್ರಮುಖ ಸುದ್ದಿಯಾಗಿತ್ತು.
ಈ ಸಂಬಂಧ ಇಂದು ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಚೋಪ್ರಾ, ತನ್ನ ವೈಯಕ್ತಿಕ ಜೀವನ ಸಾರ್ವಜನಿಕವಾಗಿ ಬಳಕೆ ಆಗಬಾರದು ಎಂದು ಹೇಳಿದ್ದಾರೆ.
ಎಐಸಿಸಿಐ ಮಹಿಳಾ ಸಂಘಟನೆ ಮತ್ತು ಯೆಸ್ ಬ್ಯಾಂಕ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಿಯಾಂಕಾ ಚೊಪ್ರಾ, ಯಾರೊಬ್ಬರ ನಡುವಿನ ಸಂಬಂಧ ಬಗ್ಗೆ ಏನು ವಿವರಣೆ ನೀಡಬೇಕಾದ ಅಗತ್ಯವಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಶೇ.90 ರಷ್ಟು ನನ್ನ ಜೀವನ ಸಾರ್ವಜನಿಕವಾಗಿ ಬಳಕೆಯಾಗುತ್ತಿದೆ. ಆದರೆ, ಕೇವಲ ಶೇ.10 ರಷ್ಟು ಮಾತ್ರ ನನ್ನಗೆ ಇದೆ. ನಾನು ಯುವತಿ. ಯಾವುದು ಸರಿ ಎಂಬುದನ್ನು ನಿರ್ಧರಿಸುವ ಹಕ್ಕು ನನ್ನಗಿದೆ. ನನ್ನ ಕುಟುಂಬ, ಗೆಳೆತನ, ಸಂಬಂಧ ಬಗ್ಗೆ ಯಾರೊಬ್ಬರಿಗೂ ವಿವರಣೆ ಅಥವಾ ಸಮರ್ಥನೆ ಮಾಡಿಕೊಳ್ಳುವ ಅಗತ್ಯವಿಲ್ಲಎಂದು ಹೇಳಿದ್ದಾರೆ.
ಸಲ್ಮಾನ್ ಖಾನ್ ಅಭಿಯನದ ಭಾರತ್ ಚಿತ್ರದಿಂದ ಪ್ರಿಯಾಂಕಾ ಕೈ ಬಿಟ್ಟ ನಂತರ ನಿಕ್ ಜೋನಾಸ್ ಜೊತೆ ಕೈ ಕೈ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಎಂಗೇಜ್ ಮೆಂಟ್ ಕೂಡಾ ಆಗಿದೆ ಎಂಬಂತಹ ವರದಿಗಳು ಕೇಳಿಬಂದಿದ್ದವು.
ಕಳೆದೆರಡು ತಿಂಗಳಿನಿಂದ 25 ವರ್ಷದ ಗಾಯಕನ ಜೊತೆಗೆ ಪ್ರಿಯಾಂಕಾ ನ್ಯೂಯಾರ್ಕ್ , ಲಾಸ್ ಎಂಜೆಲ್ಸ್ ನಲ್ಲಿ ಡಿನ್ನರ್ ಕೂಟ ಮತ್ತಿತರ ಕಡೆಗಳಲ್ಲಿ ಓಡಾಡುತ್ತಿದ್ದಾರೆ ಎನ್ನಲಾಗಿತ್ತು.
ಈ ಮಧ್ಯೆ ಸಂಬಂಧಿಯೊಬ್ಬರ ವಿವಾಹ ಸಂದರ್ಭದಲ್ಲಿ ನಿಕ್ ಜೋನಾಸ್ ಅವರನ್ನು ತನ್ನ ಕುಟುಂಬ ಸದಸ್ಯರೊಂದಿಗೆ ಪ್ರಿಯಾಂಕಾ ಪರಿಚಯಿಸಿದ್ದರು. ಕಳೆದ ರಾತ್ರಿ ಕೂಡಾ ಸಿಂಗಾಪೂರದಲ್ಲಿನ ನಿಕ್ ಜೋನಾಸ್ ಕನ್ಸರ್ಟ್ ನಲ್ಲಿ ಪ್ರಿಯಾಂಕಾ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


