ಕರಣ್ ಜೋಹಾರ್ ಮುಂದಿನ ಚಿತ್ರ 'ಬ್ರಹ್ಮಾಸ್ತ್ರ'
ಬಾಲಿವುಡ್ ನಟ ಅಕ್ಷಯ್ ಕುಮಾರ್ ಜತೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದ ನಿರ್ದೇಶಕ, ನಿರ್ಮಾಪಕ ಕರಣ್ ಜೋಹಾರ್ ಇದೀಗ ಮತ್ತೊಂದು ಬ್ಲಾಕ್ ಬಸ್ಟರ್...

Published On :
ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಜತೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದ ನಿರ್ದೇಶಕ, ನಿರ್ಮಾಪಕ ಕರಣ್ ಜೋಹಾರ್ ಇದೀಗ ಮತ್ತೊಂದು ಬ್ಲಾಕ್ ಬಸ್ಟರ್ ಘೋಷಣೆಯನ್ನು ಮಾಡಿದ್ದಾರೆ.
ಬಾಲಿವುಡ್ ನ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್, ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ರೊಂದಿಗೆ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಚಿತ್ರಕ್ಕೆ ಬ್ರಹ್ಮಾಸ್ತ್ರ ಎಂದು ಟೈಟಲ್ ಇಡಲಾಗಿದೆ. ಇನ್ನು ಈ ಕುರಿತು ನಿರ್ಮಾಪಕ ಕರಣ್ ಜೋಹಾರ್ ತಮ್ಮ ಟ್ವೀಟರ್ ನಲ್ಲಿ ಘೋಷಿಸಿದ್ದಾರೆ.
ಚಿತ್ರಕ್ಕೆ ಬ್ರಹ್ಮಾಸ್ತ್ರ ಎಂಬ ಟೈಟಲ್ ಇಡಲಾಗಿದ್ದು ಟ್ರೈಲಾಜಿ...ಫ್ಯಾಂಟಸಿ ಅಡ್ವೇಂಚರ್, ಎ ಲೇಬರ್ ಆಫ್ ಲವ್ ಎಂದು ಶೀರ್ಷಿಕೆ ಕೊಡಲಾಗಿದೆ.
ಇನ್ನು ಕಳೆದ ತಿಂಗಳು ಕರಣ್ ಜೋಹಾರ್ ಅವರು ಚಿತ್ರವೊಂದನ್ನು ಘೋಷಿಸಿದ್ದರು. ಡ್ರ್ಯಾಗನ್ ಎಂದು ಶೀರ್ಷಿಕೆ ಇಡಲಾಗಿದೆ ಎಂದು ಹೇಳಲಾಗುತ್ತಿತ್ತು. ಈ ಬಗ್ಗೆ ಸ್ಪಷ್ಟಪಡಿಸಿರುವ ಕರಣ್ ಚಿತ್ರಕ್ಕೆ ಡ್ರ್ಯಾಗನ್ ಎಂದು ಶೀರ್ಷಿಕೆ ಇಡಲಾಗಿಲ್ಲ. ಮುಂದಿನ ದಿನಗಳಲ್ಲಿ ಚಿತ್ರದ ಶೀರ್ಷಿಕೆ ಕುರಿತು ಅಧಿಕೃತ ಘೋಷಣೆ ಮಾಡಲಾಗುವುದು ಎಂದರು.
ಯೇ ಜವಾನಿ ಹೈ ದಿವಾನಿಯಂತ ಬ್ಲಾಕ್ ಬಸ್ಟರ್ ಚಿತ್ರವನ್ನು ನಿರ್ದೇಶಿಸಿದ್ದ ಅಯನ್ ಮುಖರ್ಜಿ ಬ್ರಹ್ಮಾಸ್ತ್ರ ಚಿತ್ರವನ್ನು ನಿರ್ದೇಶಿಸುತ್ತಿದ್ದು 2019ರ ಆಗಸ್ಟ್ 15ರಂದು ಬೆಳ್ಳಿ ತೆರೆಗೆ ಅಪ್ಪಳಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Amitabh Bachchanಅಮಿತಾಬ್ ಬಚ್ಚನ್Ranbir Kapoorರಣಬೀರ್ ಕಪೂರ್Alia BhattKaran JoharBrahmastraಬ್ರಹ್ಮಾಸ್ತ್ರಕರಣ್ ಜೋಹಾರ್ಅಲಿಯಾ ಭಟ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


