ಅನುಪಮ್ ಖೇರ್ 'ಖೀರ್' ಗೆ ಅತ್ಯುತ್ತಮ ಅಂತರಾಷ್ಟ್ರೀಯ ಕಿರು ಚಿತ್ರ ಪ್ರಶಸ್ತಿ
ಹಿರಿಯ ಬಾಲಿವುಡ್ ನಟ ಅನುಪಮ್ ಖೇರ್ ಅಭಿನಯದ ಖೀರ್ ಕಿರು ಚಿತ್ರ ವ್ಯಾಂಕೋವರ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ...

Published On :
ಮುಂಬೈ: ಹಿರಿಯ ಬಾಲಿವುಡ್ ನಟ ಅನುಪಮ್ ಖೇರ್ ಅಭಿನಯದ ಖೀರ್ ಕಿರು ಚಿತ್ರ ವ್ಯಾಂಕೋವರ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಅಂತರಾಷ್ಟ್ರೀಯ ಕಿರು ಚಿತ್ರ ಪ್ರಶಸ್ತಿ ಪಡೆದಿದೆ.
ಈ ಕುರಿತು ಅನುಪಮ್ ಖೇರ್ ಅವರು ಇಂದು ಟ್ವೀಟ್ ಮಾಡಿದ್ದು, ನಮ್ಮ ಕಿರು ಚಿತ್ರ 'ಖೀರ್' ಅತಿ ದೊಡ್ಡ ಪ್ರಶಸ್ತಿ ಪಡೆದಿದೆ. ವ್ಯಾಂಕೋವರ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಖೀರ್ ಗಾಗಿ ನಾವು ಅತ್ಯುತ್ತಮ ಅಂತರಾಷ್ಟ್ರೀಯ ಕಿರು ಚಿತ್ರ ಪ್ರಶಸ್ತಿ ಪಡೆದಿದ್ದೇವೆ ಎಂದು ಹೇಳಿದ್ದಾರೆ.
ಸೂರ್ಯ ಬಾಲಕೃಷ್ಣನ್ ನಿರ್ದೇಶನದ ಈ ಕಿರು ಚಿತ್ರದಲ್ಲಿ ನತಾಶ ರಸ್ತೋಗಿ, ಅಭಿಮಾನ್ಯು ಚವ್ಲಾ ಹಾಗೂ ಸ್ತುತಿ ದಿಕ್ಷಿತ್ ಅವರು ಸಹ ಅಭಿನಯಿಸಿದ್ದಾರೆ. 'ಖೀರ' ಹಿರಿಯ ದಂಪತಿಗಳ ಪ್ರೇಮಕಥೆಯನ್ನು ಒಳಗೊಂಡಿದೆ.
ಖೀರ್ ಕಿರು ಚಿತ್ರವನ್ನು ಈ ವರ್ಷ ಪ್ರೇಮಿಗಳ ದಿನಕ್ಕು ಮುನ್ನಾದಿನ ಯೂಟ್ಯೂಬ್ ಚಾನಲ್ ನಲ್ಲಿ ಹೊಸ್ಟ್ ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Anupam Kherಅನುಪಮ್ ಖೇರ್\'Kheer\'Vancouver International film festಖೀರ್ವ್ಯಾಂಕೋವರ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


