3 ವರ್ಷಗಳ ಸುದೀರ್ಘ ಚಿತ್ರೀಕರಣ ಮುಗಿಸಿದ ಬಾಹುಬಲಿ ತಂಡ
ಟಾಲಿವುಡ್ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶನದ ಮೆಗಾ ಪ್ರಾಜೆಕ್ಟ್ ಬಾಹುಬಲಿ ಚಿತ್ರದ ಚಿತ್ರೀಕರಣ ಅಂತೂ ಮೂರು ವರ್ಷಗಳ ಸುದೀರ್ಘ ಚಿತ್ರೀಕರಣ ಬಳಿಕ...

Published On :
ಟಾಲಿವುಡ್ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶನದ ಮೆಗಾ ಪ್ರಾಜೆಕ್ಟ್ ಬಾಹುಬಲಿ ಚಿತ್ರದ ಚಿತ್ರೀಕರಣ ಅಂತೂ ಮೂರು ವರ್ಷಗಳ ಸುದೀರ್ಘ ಚಿತ್ರೀಕರಣ ಬಳಿಕ ಮುಕ್ತಾಯಗೊಂಡಿದೆ.
ಎರಡು ಭಾಗದಲ್ಲಿ ಬಾಹುಬಲಿ ಚಿತ್ರ ನಿರ್ಮಾಣವಾಗುತ್ತಿದ್ದು ಬಾಹುಬಲಿ ದ ಬಿಗನಿಂಗ್ ಚಿತ್ರ 2015 ಜೂನ್ 10ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಮಾಡಿತ್ತು. ಇದೀಗ ಬಾಹುಬಲಿ ಮುಂದುವರೆದ ಭಾಗ ಬಾಹುಬಲಿ ದ ಕನ್‌ಕ್ಲೂಷನ್ ಚಿತ್ರಕ್ಕಾಗಿ ಮೂರು ವರ್ಷಗಳಿಂದ ಚಿತ್ರೀಕರಣ ನಡೆಯುತ್ತಿದ್ದು ಇದೀಗ ಮುಕ್ತಾಯಗೊಂಡಿದೆ. ಚಿತ್ರತಂಡ 2017ರ ಏಪ್ರಿಲ್ 28ರಂದು ಬಿಡುಗಡೆ ಮಾಡುವ ಉದ್ದೇಶವಿಟ್ಟುಕೊಂಡಿದ್ದು ಇದೀಗ ಪೋಸ್ಟ್ ಪ್ರೋಡಕ್ಷನ್ ಕೆಲಸಗಳು ಆರಂಭಗೊಳ್ಳಲಿವೆ.
ಮೂರುವರೆ ವರ್ಷದ ಸುದೀರ್ಘ ಚಿತ್ರೀಕರಣ ಮುಗಿಸಿರುವ ಚಿತ್ರದ ನಿರ್ದೇಶಕ ರಾಜಮೌಳಿ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಬಾಹುಬಲಿ ಚಿತ್ರದ ನಟ ಪ್ರಭಾಸ್ ರನ್ನು ಹೊಗಳಿದ್ದಾರೆ. ನಿಜಕ್ಕೂ ಪ್ರಭಾಸ್ ಅದ್ಭುತ ಕಲಾವಿದ. ಒಂದು ಚಿತ್ರಕ್ಕಾಗಿ ತಮ್ಮ ಮೂರುವರೆ ವರ್ಷ ಕಾಲ ಸಮಯವನ್ನು ನೀಡಿದ್ದಾರೆ ಎಂದು ಟ್ವೀಟಿಸಿದ್ದಾರೆ.
ಬಾಹುಬಲಿ ದ ಕನ್‌ಕ್ಲೂಷನ್ ಚಿತ್ರದಲ್ಲಿ ಪ್ರಭಾಸ್ ಅಮರೇಂದ್ರ ಬಾಹುಬಲಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ರಾಣಾ ದಗ್ಗುಬಾಟಿ, ಅನುಷ್ಕಾ ಶರ್ಮಾ, ತಮನ್ನಾ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಬಾಹುಬಲಿ ಚಿತ್ರದ ನಂತರ ಪ್ರಭಾಸ್ ಸುಜೀತ್ ನಿರ್ದೇಶನದಲ್ಲಿ ಆಕ್ಷನ್-ಥ್ರಿಲ್ಲರ್ ಚಿತ್ರದಲ್ಲಿ ನಟಿಸಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


