ಬಾಲಿವುಡ್

ಪ್ರಿಯಾಂಕಾ ಚೋಪ್ರಾ ಏಷ್ಯಾದ ಸೆಕ್ಸಿಯಸ್ಟ್ ಮಹಿಳೆ!

ಏಷ್ಯಾದ ಅತ್ಯಂತ ಸೆಕ್ಸಿ ಮಹಿಳೆಯಾಗಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇಂಗ್ಲೆಂಡಿನ ವಾರ್ಷಿಕ ...

ಪ್ರಿಯಾಂಕಾ ಚೋಪ್ರಾ ಏಷ್ಯಾದ ಸೆಕ್ಸಿಯಸ್ಟ್ ಮಹಿಳೆ!
ಪ್ರಿಯಾಂಕಾ ಚೋಪ್ರಾ
Published On :
ಲಂಡನ್: ಏಷ್ಯಾದ ಅತ್ಯಂತ ಸೆಕ್ಸಿ ಮಹಿಳೆಯಾಗಿ(ಆಕರ್ಷಕ) ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇಂಗ್ಲೆಂಡಿನ ವಾರ್ಷಿಕ ಸಮೀಕ್ಷೆಯೊಂದರಲ್ಲಿ ಹೊರಹೊಮ್ಮಿದ್ದಾರೆ. 
ಲಂಡನ್ ಮೂಲದ ವಾರ ಪತ್ರಿಕೆ ಈಸ್ಟರ್ನ್ ಐಯಲ್ಲಿ ಸತತ 5ನೇ ವರ್ಷ ಪ್ರಿಯಾಂಕಾ ಚೋಪ್ರಾ ಏಷ್ಯಾದ 50 ಆಕರ್ಷಕ ಮಹಿಳೆಯರ ಸಾಲಿನಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.ಕಳೆದ ವರ್ಷ ಒಂದನೇ ಸ್ಥಾನ ದೀಪಿಕಾ ಪಡುಕೋಣೆ ಪಾಲಾಗಿತ್ತು. ಈ ವರ್ಷ ಅವರು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ನಾನಿದರ ಕ್ರೆಡಿಟ್ ನ್ನು ಪಡೆಯಲು ಸಾಧ್ಯವಿಲ್ಲ. ನನ್ನ ತಂದೆ-ತಾಯಿಗಳು ಮತ್ತು ನಿಮ್ಮ ಆಯ್ಕೆಗೆ ನನ್ನ ಈ ಗೆಲುವು ಸಂದಬೇಕು ಎಂದು ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಚೋಪ್ರಾ ಆನ್ ಲೈನ್ ಸಮೀಕ್ಷೆಯಲ್ಲಿ ಮತ ಹಾಕಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ನನ್ನ ಈ ಗೆಲುವಿನಿಂದ ನಾನು ಕೃತಜ್ಞನಾಗಿದ್ದೇನೆ. ಸ್ಥಿರತೆ ಇಲ್ಲಿ ಮುಖ್ಯವಾಗುತ್ತದೆ ಎಂದಿದ್ದಾರೆ.
ಪ್ರಿಯಾಂಕಾ ಚೋಪ್ರಾರ ಈ ಗೆಲುವು ಹಾಲಿವುಡ್ ನಲ್ಲಿ ಇನ್ನೂ ಹಲವು ಪ್ರಾಜೆಕ್ಟ್ ಗಳು ಅವರಿಗೆ ಸಿಗಲು ಅನುಕೂಲ ಮಾಡಿಕೊಡಲಿದೆ. ಸಾಮಾಜಿಕ ಮಾಧ್ಯಮದಲ್ಲಿ ಈಗಾಗಲೇ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿರುವ ಪ್ರಿಯಾಂಕಾ ಇನ್ಸ್ಟಾಗ್ರಾಮ್ ನಲ್ಲಿ 20 ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದಾರೆ.
ಈಸ್ಟರ್ ಐ ಮನರಂಜನಾ ಪತ್ರಿಕೆ ಸಂಪಾದಕ ಮತ್ತು 50 ಸೆಕ್ಸಿಯಸ್ಟ್ ಏಷ್ಯಾ ಮಹಿಳೆಯರ ಪ್ರಶಸ್ತಿ ಸ್ಥಾಪಕ ಅಸ್ಜದ್ ನಾಸಿರ್, ಪ್ರಿಯಾಂಕಾ ಚೋಪ್ರಾ ಅವರನ್ನು ಸೌಂದರ್ಯ, ಬುದ್ಧಿವಂತಿಕೆ, ಧೈರ್ಯ ಮತ್ತು ಸಹೃದಯದ ಮಹಿಳೆ ಎಂದು ಬಣ್ಣಿಸಿದ್ದಾರೆ.
ಪ್ರಿಯಾಂಕಾ ನಂತರ ಎರಡನೇ ಸ್ಥಾನದಲ್ಲಿ ಭಾರತೀಯ ಟಿವಿ ನಟಿ ನಿಯಾ ಶರ್ಮಾ ಇದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.