ಎಟಿಎಂ ಸರತಿ ಸಾಲಿನಲ್ಲಿ ಅಭಿಮಾನಿಗಳೊಂದಿಗೆ ಸೆಲ್ಫಿಗೆ ಪೋಸ್ ನೀಡಿದ ಅನಿಲ್ ಕಪೂರ್
ಕೇಂದ್ರ ನೋಟು ಹಿಂಪಡೆತ ನಿರ್ಧಾರ ಸಾಮಾನ್ಯ ಜರನ್ನು ಮತ್ತು ತಾರೆಗಳನ್ನು ಒಂದೇ ಸಾಲಿನಲ್ಲಿ ನಿಂತುಕೊಳ್ಳುವಂತೆ ಮಾಡಲು ಕೆಲವೆಡೆಯಾದರು ಸಫಲವಾಗಿದೆ. ಇಂತಹ ಉದಾಹರಣೆಯೊಂದರಲ್ಲಿ

Published On :
ಮುಂಬೈ: ಕೇಂದ್ರ ನೋಟು ಹಿಂಪಡೆತ ನಿರ್ಧಾರ ಸಾಮಾನ್ಯ ಜರನ್ನು ಮತ್ತು ತಾರೆಗಳನ್ನು ಒಂದೇ ಸಾಲಿನಲ್ಲಿ ನಿಂತುಕೊಳ್ಳುವಂತೆ ಮಾಡಲು ಕೆಲವೆಡೆಯಾದರು ಸಫಲವಾಗಿದೆ. ಇಂತಹ ಉದಾಹರಣೆಯೊಂದರಲ್ಲಿ ಬಾಲಿವುಡ್ ನಟ ಅನಿಲ್ ಕಪೂರ್, ಎಟಿಎಂ ಸರತಿ ಸಾಲಿನಲ್ಲಿ ನಿಂತು ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆಸಿಕೊಂಡಿದ್ದಾರೆ.
ಕಪ್ಪು ಹಣ ನಿಯಂತ್ರಣ ಮತ್ತು ನಕಲಿ ನೋಟುಗಳನ್ನು ವ್ಯವಸ್ಥೆಯಿಂದ ಹೊರಹಾಕುವ ಕಾರಣ ನೀಡಿ, ಪ್ರಧಾನಿ ನರೇಂದ್ರ ಮೋದಿ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂದಕ್ಕೆ ಪಡೆದಿದ್ದರು.
ಗುರುವಾರ ಟ್ವಿಟ್ಟರ್ ಮೊರೆ ಹೋಗಿರುವ ಅನಿಲ್ ಕಪೂರ್ ಇಬ್ಬರು ಯುವತಿಯರ ಜೊತೆಗೆ ಎಟಿಎಂ ಎದುರು ತೆಗೆದುಕೊಂಡಿರುವ ಫೋಟೋ ಟ್ವೀಟ್ ಮಾಡಿದ್ದಾರೆ.
"ಎಟಿಎಂ ಸಾಲಿನಲ್ಲಿ ಸೆಲ್ಫಿ. ನೋಟು ಹಿಂಪಡೆತ ನಿರ್ಧಾರಕ್ಕೆ ಧನ್ಯವಾದಗಳು. ನಿಮ್ಮನ್ನು ಭೇಟಿ ಮಾಡಲು ಸಾಧ್ಯವಾಯಿತು" ಎಂದು ಅನಿಲ್ ಟ್ವೀಟ್ ಮಾಡಿದ್ದಾರೆ.
೫೯ ವರ್ಷದ ನಟ ನಿರ್ದೇಶಕ ಅನೀಸ್ ಬಜಮೀ ಅವರ 'ಮುಬಾರ್ಕಾನ್' ಸಿನೆಮಾದಲ್ಲಿ ನಟಿಸುತ್ತಿದ್ದು ಅದು ಮುಂದಿನ ವರ್ಷ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


