ಕುಸ್ತಿಪಟು ಆಯಿತು; ಮುಂದಿನ ಚಿತ್ರ 'ಸಿಕ್ರೆಟ್ ಸೂಪರ್ ಸ್ಟಾರ್' ನಲ್ಲಿ ಸಂಗೀತಕಾರನಾಗಿ ಅಮೀರ್
ಅಮೀರ್ ಖಾನ್ ಕುಸ್ತಿ ಪಟು ಪಾತ್ರದಲ್ಲಿ ನಟಿಸಿರುವ 'ಧಂಗಲ್' ಸಿನೆಮಾ ಬಿಡುಗಡೆಗೂ ಮುಂಚೆ ನಿರೀಕ್ಷೆ-ಕುತೂಹಲಗಳನ್ನು ಹುಟ್ಟು ಹಾಕುತ್ತಿರುವಾಗಲೇ ಅವರ ಮುಂದಿನ ಯೋಜನೆ

ನವದೆಹಲಿ: ಅಮೀರ್ ಖಾನ್ ಕುಸ್ತಿ ಪಟು ಪಾತ್ರದಲ್ಲಿ ನಟಿಸಿರುವ 'ಧಂಗಲ್' ಸಿನೆಮಾ ಬಿಡುಗಡೆಗೂ ಮುಂಚೆ ನಿರೀಕ್ಷೆ-ಕುತೂಹಲಗಳನ್ನು ಹುಟ್ಟು ಹಾಕುತ್ತಿರುವಾಗಲೇ ಅವರ ಮುಂದಿನ ಯೋಜನೆ ಘೋಷಣೆಯಾಗಿದೆ.
ಬಾಲಿವುಡ್ ವದಂತಿಗಳನ್ನು ನಂಬುವುದಾದರೆ, ನಿಖರತೆಯ ನಟ ತಮ್ಮ ಮುಂದಿನ ಚಿತ್ರ 'ಸಿಕ್ರೆಟ್ ಸೂಪರ್ ಸ್ಟಾರ್' ನಲ್ಲಿ ಸಂಗೀತ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.
ಈ ಸಿನೆಮಾವನ್ನು ಇದಕ್ಕೂ ಮುಂಚೆ 'ಆಜ್ ಫಿರ್ ಜೀನೆ ಕಿ ತಮನ್ನಾ ಹೈ' ಎಂದು ಹೆಸರಿಸಲಾಗಿತ್ತು. ಇದು ಅಮೀರ್ ಅವರ ವ್ಯವಸ್ಥಾಪಕ ಅದ್ವೈತ್ ಚೌಹಾನ್ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಲಿದೆ.
ಈ ಚಿತ್ರದಲ್ಲಿ ಅಮೀರ್ ಅವರದ್ದು ನಾಯಕನ ಪಾತ್ರ ಅಲ್ಲದಿದ್ದರೂ, ಪೋಷಕ ನಟನ ಪಾತ್ರವೂ ಅಲ್ಲ. ಮುಖ್ಯಪಾತ್ರಗಳು ಮಗು ಮತ್ತು ತಾಯಿ ಎಂದು ತಿಳಿದುಬಂದಿದ್ದು ಅದಕ್ಕಾಗಿ ನಟರ ಶೋಧ ಪ್ರಗತಿಯಲ್ಲಿದೆ.
ಇದು ಸಂಗೀತಮಯ ಚಿತ್ರವಾಗಲಿದ್ದು, ಅಮಿತ್ ತ್ರಿವೇದಿ ಸಂಗೀತ ನೀಡಲಿದ್ದಾರೆ ಮತ್ತು ಜೂನ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


