ಬಾಲಿವುಡ್

ಮಗನ ಸಂಪೂರ್ಣ ಹಕ್ಕು ತನಗೇಬೇಕು ಎಂದ ಮಲೈಕಾ..!

ಬಾಲಿವುಡ್ ನಟ ಅರ್ಬಾಜ್ ಖಾನ್ ಮತ್ತು ನಟಿ ಮಲೈಕಾ ಆರೋರಾ ಅವರ ವಿಚ್ಛೇದನ ವಿಚಾರ ಇದೀಗ ಎಲ್ಲರಿಗೂ ತಿಳಿದಿರುವ ವಿಚಾರ. ಹೊಸ ವಿಚಾರವೆಂದರೆ ಈ ದಪಂತಿಗಳಿಗೆ ಓರ್ವ ಪುತ್ರನಿದ್ದು, ಪುತ್ರನ ಮೇಲಿನ ಸಂಪೂರ್ಣ ಹಕ್ಕು ತಮಗೇ ಬೇಕು ಎಂದು ಮಲೈಕಾ ಅರೋರಾ ಅವರು ಕೇಳಿದ್ದಾರೆ..

ಮಗನ ಸಂಪೂರ್ಣ ಹಕ್ಕು ತನಗೇಬೇಕು ಎಂದ ಮಲೈಕಾ..!
ಪುತ್ರ ಅರ್ಹಾನ್ ಜೊತೆ ಮಲೈಕಾ ಮತ್ತು ಅರ್ಬಾಜ್ (ಸಂಗ್ರಹ ಚಿತ್ರ)
Published On :

ಮುಂಬೈ: ಬಾಲಿವುಡ್ ನಟ ಅರ್ಬಾಜ್ ಖಾನ್ ಮತ್ತು ನಟಿ ಮಲೈಕಾ ಆರೋರಾ ಅವರ ವಿಚ್ಛೇದನ ವಿಚಾರ ಇದೀಗ ಎಲ್ಲರಿಗೂ ತಿಳಿದಿರುವ ವಿಚಾರ. ಹೊಸ ವಿಚಾರವೆಂದರೆ ಈ ದಪಂತಿಗಳಿಗೆ  ಓರ್ವ ಪುತ್ರನಿದ್ದು, ಪುತ್ರನ ಮೇಲಿನ ಸಂಪೂರ್ಣ ಹಕ್ಕು ತಮಗೇ ಬೇಕು ಎಂದು ಮಲೈಕಾ ಅರೋರಾ ಅವರು ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.

17 ವರ್ಷಗಳ ದಾಂಪತ್ಯ ಜೀವನಕ್ಕೆ ಎಳ್ಳು-ನೀರು ಬಿಡಲು ನಿರ್ಧರಿಸಿರುವ ಬಾಲಿವುಡ್ ನ ಈ ಜೋಡಿ, ಇದೀಗ ತಮ್ಮ ಪುತ್ರನ ಸ್ವಾಧೀನ ವಿಚಾರಕ್ಕೆ ಸಂಬಂಧಿಸಿದಂತೆ ಜಟಾಪಟಿಗೆ ನಿಂತಿದ್ದಾರೆ.  ಮೂಲಗಳ ಪ್ರಕಾರ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಲೈಕಾ ಅರೋರಾ ಅವರು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ ಪುತ್ರನ ಸ್ವಾಧೀನದ ಹಕ್ಕನ್ನು  ತಮಗೇ ನೀಡಬೇಕು ಎಂದು ಮಲೈಕಾ ಕೋರಿದ್ದಾರೆ ಎಂದು ತಿಳಿದುಬಂದಿದೆ.

ಅಂತೆಯೇ ಅರ್ಬಾಜ್ ಖಾನ್ ಬೇಕಿದ್ದರೆ ತಮಗಿಷ್ಟ ಬಂದಾಗ ಮನೆಗೆ ಬಂದು ಪುತ್ರನನ್ನು ನೋಡಬಹುದು ಎಂದು ಮಲೈಕಾ ಅರ್ಜಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.