ಕತ್ರೀನಾ ಜೊತೆ ಹೋಲಿಕೆ ಮಾಡುವುದು ನನಗಿಷ್ಟವಿಲ್ಲ: ಜಾಕ್ವೆಲಿನ್ ಫರ್ನಾಂಡೀಸ್
ತನ್ನನ್ನು ಕತ್ರಿನಾ ಕೈಫ್‌ಗೆ ಹೋಲಿಸೋದು ಮಾತ್ರ ಜಾಕ್ವೆಲಿನ್ ಗೆ ಇಷ್ಟವಾಗಲ್ಲವಂತೆ. ತನ್ನನ್ನು ಕತ್ರಿನಾಗೆ ಹೋಲಿಸುವುದು ಸರಿಯಲ್ಲ. ನಾವಿಬ್ಬರೂ ಬೇರೆ ಬೇರೆ. .

ನವದೆಹಲಿ: ಡಿಶೂಂ ಚಿತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ನಾಯಕಿ ಜಾಕ್ವೆಲಿನ್ ಫರ್ನಾಂಡಿಸ್ ಅಭಿನಯದ ಮೂಲಕ ಅಪಾರ ಪ್ರೇಕ್ಷಕರನ್ನು ಗೆದ್ದವರು. ಶ್ರೀಲಂಕಾದ ಬ್ಯೂಟಿ ಜಾಕ್ವೆಲಿನ್ ನಿಧಾನವಾಗಿ ಹಿಂದಿ ಚಿತ್ರರಂಗದಲ್ಲಿ ನೆಲೆಯೂರುತ್ತಿದ್ದಾರೆ.
ಆದ್ರೆ ಜಾಕ್ವೆಲಿನ್ ಗೆ ತನ್ನನ್ನು ಕತ್ರಿನಾ ಕೈಫ್‌ಗೆ ಹೋಲಿಸೋದು ಮಾತ್ರ ಇಷ್ಟವಾಗಲ್ಲವಂತೆ. ತನ್ನನ್ನು ಕತ್ರಿನಾಗೆ ಹೋಲಿಸುವುದು ಸರಿಯಲ್ಲ. ನಾವಿಬ್ಬರೂ ಬೇರೆ ಬೇರೆ. ಜನರೂ ನಮ್ಮನ್ನು ಹಾಗೆಯೇ ನೋಡಬೇಕು. ಹಲವು ವರ್ಷಗಳಿಂದ ಕತ್ರಿನಾ ಬಹಳಷ್ಟು ಸಾಧಿಸಿದ್ದಾಳೆ.
ನಾನು ಬಾಲಿವುಡ್‌ಗೆ ಎಂಟ್ರಿ ನೀಡಿದಾಗ ಆಕೆ ನಮಗೆಲ್ಲಾ ಒಂದು ಮಾದರಿಯಾಗಿದ್ದಳು. ಕತ್ರಿನಾ ಇಂದಿಗೂ ಬೇರೆ ದೇಶದಿಂದ ಬಂದಂತಹ ಬಹಳಷ್ಟು ನಟಿಯರಿಗೆ ಸ್ಫೂರ್ತಿಯಾಗಿದ್ದಾಳೆ ಎಂದಳು.
ಹೋಲಿಕೆ ಎನ್ನುವುದು ಅನ್ ಫೇರ್ ಎನ್ನುವ ಅವರು, ಕತ್ರೀನಾ ಹಾಗೂ ನಾನು ಇಬ್ಬರು ವಿಭಿನ್ನವಾಗಿದ್ದೇವೆ. ಆದ್ದರಿಂದ ಜನರು ಅದೇ ಮಾರ್ಗದಲ್ಲಿ ನಮ್ಮನ್ನು ಕಾಣಲಿ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


