'ಇನ್ಕ್ರೆಡಿಬಲ್ ಇಂಡಿಯಾ' ರಾಯಭಾರಿಯಾಗಲು ನನಗಿಷ್ಟ: ಅಕ್ಷಯ್ ಕುಮಾರ್
ಬಾಲಿವುಡ್ ನಲ್ಲಿ ಮೂರು ದಶಕಗಳಿಂದ ನಟನೆಯಲ್ಲಿ ತೊಡಗಿಸಿಕೊಂಡಿರುವ ಅಕ್ಷಯ್ ಕುಮಾರ್ ಅವರು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಜಾಹೀರಾತು 'ಇನ್ಕ್ರೆಡಿಬಲ್ ಇಂಡಿಯಾ'

ನವದೆಹಲಿ: ಬಾಲಿವುಡ್ ನಲ್ಲಿ ಮೂರು ದಶಕಗಳಿಂದ ನಟನೆಯಲ್ಲಿ ತೊಡಗಿಸಿಕೊಂಡಿರುವ ಅಕ್ಷಯ್ ಕುಮಾರ್ ಅವರು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಜಾಹೀರಾತು 'ಇನ್ಕ್ರೆಡಿಬಲ್ ಇಂಡಿಯಾ' ಅಭಿಯಾನದ ಭಾಗವಾಗಲು ಇಷ್ಟ ಎಂದಿದ್ದಾರೆ.
ಈ ಹಿಂದೆ ಈ ಜಾಹೀರಾತು ರೂಪಿಸುತ್ತಿದ್ದ ಸಂಸ್ಥೆಯ ಜೊತೆಗೆ ಭಾಗವಾಗಿದ್ದ ಬಾಲಿವುಡ್ ನಟ ಅಮೀರ್ ಖಾನ್ ಅವರ ಒಪ್ಪಂದದ ಅವಧಿ ಮುಗಿದಿದ್ದು, ಮುಂದಿನ ರಾಯಭಾರಿ ಯಾರಿರಬಹುದು ಎಂಬ ಊಹೆಗಳು ದಟ್ಟವಾಗಿವೆ.
ವದಂತಿಗಳಲ್ಲಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ ಮತ್ತು ಅಕ್ಷಯ್ ಇವರುಗಳ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.
ಇನ್ಕ್ರೆಡಿಬಲ್ ಇಂಡಿಯಾದ ರಾಯಭಾರಿಯಾಗಲಿ ನಿಮಗೆ ಆಸಕ್ತಿಯಿದೆಯೇ ಎಂಬ ಪ್ರಶ್ನೆಗೆ "ಹೌದು ಇದು ದೊಡ್ಡ ಸಂಗತಿ. ಯಾಕಾಗಬಾರದು. ನನಗೆ ಅದರ ಭಾಗವಾಗಲು ಇಷ್ಟವಿದೆ. ಇದು ಒಳ್ಳೆಯ ಕೆಲಸ" ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


