ಬಾಲಿವುಡ್

ಶಾರುಖ್ ಹಾಡುಗಳಿದ್ದರೆ ನನಗೆ ಮನೋವೈದ್ಯರ ಅಗತ್ಯವಿಲ್ಲ -ಆಲಿಯಾ ಭಟ್

ನಾನೆಲ್ಲಾದ್ರೂ ಡಿಫ್ರೆಶನ್ ಗೆ ಹೋದರೆ ನನಗೆ ಮನೋವೈದ್ಯರ ಅಗತ್ಯವಿಲ್ಲ. ಶಾರುಖ್ ಹಾಡುಗಳೇ ನನ್ನನ್ನು ಸರಿ ಪಡಿಸುತ್ತವೆ ಅಂತಾ ಆಲಿಯಾ ಹೇಳಿದ್ದಾರೆ...

ಶಾರುಖ್ ಹಾಡುಗಳಿದ್ದರೆ ನನಗೆ ಮನೋವೈದ್ಯರ ಅಗತ್ಯವಿಲ್ಲ -ಆಲಿಯಾ ಭಟ್
ಆಲಿಯಾ ಭಟ್
Published On :

ಚಿಕ್ಕ ವಯಸ್ಸಿನಲ್ಲೇ ಬಾಲಿವುಡ್ ನಲ್ಲಿ ಭರವಸೆ ಮೂಡಿಸಿದ ನಟಿಯರಲ್ಲಿ ಒಬ್ಬರು ಆಲಿಯಾ ಭಟ್. 2016 ಅಂತೂ ಆಲಿಯಾ ಪಾಲಿಗೆ ಗೋಲ್ಡನ್ ಇಯರ್. ಅದಕ್ಕೆ ಕಾರಣ ಕೂಡ ಇದೇ. ಅದೇನಪ್ಪಾ ಅಂದ್ರೆ ಎರಡು ಬಿಗ್ ಸಿನಿಮಾಗಳಲ್ಲಿ ಆಲಿಯಾ ಕಾಣಿಸಿಕೊಳ್ಳುತ್ತಿದ್ದಾರೆ. ಶಾರುಖ್ ಹಾಗೂ ರಣ್ ಬೀರ್ ಕಪೂರ್ ಜೊತೆ ಆಲಿಯಾ  ಭಟ್ ಅಭಿನಯಿಸುತ್ತಿದ್ದಾರೆ.

ಶಾರುಖ್ ಜೊತೆ ಅಭಿನಯಿಸಲು ಅವಕಾಶ ಸಿಕ್ಕಿರೋದಕ್ಕೆ ಆಲಿಯಾ ಫುಲ್ ಖುಷಿ ಯಾಗಿದ್ದಾರೆ. ಬಾಲ್ಯದಿಂದಲೇ ಆಲಿಯಾಗೆ ಶಾರುಖ್ ಖಾನ್ ಅಂದ್ರೆ ತುಂಬಾನೇ ಇಷ್ಟವಂತೆ. ಚಿಕ್ಕ ಮಗುವಾಗಿದ್ದಾಗಲೇ ಆಲಿಯಾ ಶಾರುಖ್ ಅವರ ಕುಛ್ ಕುಛ್ ಹೋತಾ ಹೈ, ಕೋಯಿ ಮಿಲ್ ಗಯಾ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದರಂತೆ. ಇನ್ನು ಈಗಲೂ ತನಗೆ ಬೇಜಾರಾದಾಗ ನಾನು ಶಾರುಖ್ ಅವರ ಹಾಡುಗಳನ್ನೇ ಕೇಳುತ್ತೇನೆ. ಅದು ನನ್ನ ಮನಸ್ಸಿಗೆ ತುಂಬಾನೇ ಆನಂದ ನೀಡುತ್ತೆ. ನಾನೆಲ್ಲಾದ್ರೂ ಡಿಫ್ರೆಶನ್ ಗೆ ಹೋದರೆ ನನಗೆ ಮನೋವೈದ್ಯರ ಅಗತ್ಯವಿಲ್ಲ. ಶಾರುಖ್ ಹಾಡುಗಳೇ ನನ್ನನ್ನು ಸರಿ ಪಡಿಸುತ್ತವೆ ಅಂತಾ ಆಲಿಯಾ ಹೇಳಿದ್ದಾರೆ.

ಒಂದು ಕಾಲದಲ್ಲಿ ತನ್ನ ಕನಸಿನ ನಟನಾಗಿದ್ದ ಶಾರುಖ್ ಜೊತೆ ಅಭಿನಯಿಸೋ ಅವಕಾಶ ಸಿಕ್ಕಿದೆ. ಕರಣ್ ಜೋಹರ್ ನಿರ್ಮಾಣದ ಸಿನಿಮಾದಲ್ಲಿ ಇವರಿಬ್ಬರು ಜೊತೆಯಾಗುತ್ತಿದ್ದಾರೆ. ಇದೇ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದ್ದು ಅದಕ್ಕಾಗಿ ಆಲಿಯಾ ಕಾತುರದಿಂದ ಕಾಯುತ್ತಿದ್ದಾರಂತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.