ಸಲ್ಮಾನ್ ಖಾನ್ ಕುಟುಂಬದ ಮತ್ತೊಂದು ಜೋಡಿ ವಿಚ್ಛೇದನದತ್ತ..?
ಅರ್ಬಾಜ್- ಮಲೈಕಾ ಬಳಿಕ ಸಲ್ಮಾನ್ "ಖಾನ್"ದಾನ್ ನ ಮತ್ತೊಂದು ಜೋಡಿ ವಿಚ್ಛೇದನದತ್ತ ಮುಖ ಮಾಡಿದೆ ಎಂಬ ಊಹಾಪೋಹಗಳು ಬಾಲಿವುಡ್ ನಲ್ಲಿ ಹರಿದಾಡುತ್ತಿವೆ...

ಮುಂಬೈ: ಅರ್ಬಾಜ್- ಮಲೈಕಾ ಬಳಿಕ ಸಲ್ಮಾನ್ "ಖಾನ್"ದಾನ್ ನ ಮತ್ತೊಂದು ಜೋಡಿ ವಿಚ್ಛೇದನದತ್ತ ಮುಖ ಮಾಡಿದೆ ಎಂಬ ಊಹಾಪೋಹಗಳು ಬಾಲಿವುಡ್ ನಲ್ಲಿ ಹರಿದಾಡುತ್ತಿವೆ.
ಮೂಲಗಳ ಪ್ರಕಾರ ಸಲ್ಮಾನ್ ಖಾನ್ ಸಹೋದರ ಸೊಹೇಲ್ ಖಾನ್ ಮತ್ತು ಪತ್ನಿ ಸೀಮಾ ಖಾನ್ ನಡುವೆ ಉಂಟಾಗಿರುವ ಕೌಟುಂಬಿಕ ಬಿಕ್ಕಟ್ಟು ತಾರಕ್ಕೇರಿದ್ದು, ಸೀಮಾ ಬಾಂದ್ರಾದಲ್ಲಿರುವ ತಮ್ಮ ಪತಿ ನಿವಾಸವನ್ನು ತೊರೆದು ಪೋಷಕರೊಂದಿಗೆ ಜೀವಿಸುತ್ತಿದ್ದಾರೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ. ಸೀಮಾ ಮತ್ತು ಸೊಹೇಲ್ ನಡುವಿನ ಜಗಳಕ್ಕೆ ಕಾರಣವೇನು ಎಂದು ತಿಳಿದುಬಂದಿಲ್ಲವಾದರೂ, ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಬಾಲಿವುಡ್ ವಲಯದಲ್ಲಿ ಕೇಳಿಬರುತ್ತಿವೆ.
ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗೆ ನಡೆದ ಸಹೋದರಿ ಅರ್ಪಿತಾ ಖಾನ್ ಮಗುವಿನ ಕಾರ್ಯಕ್ರಮದಲ್ಲಿಯೂ ಈ ಜೋಡಿ ಗೈರು ಹಾಜರಾಗಿತ್ತು. ಇದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು. ಇದೇ ಕಾರ್ಯಕ್ರಮಕ್ಕೆ ಮಲೈಕಾ ಮತ್ತು ಅರ್ಬಾಜ್ ಖಾನ್ ಜೋಡಿ ಕೂಡ ಗೈರು ಹಾಜರಾಗಿತ್ತು. ಅರ್ಬಾಜ್-ಮಲೈಕಾ ಬಳಿಕ ಸೊಹೇಲ್- ಸೀಮಾ ಕೂಡ ವಿಚ್ಛೇದನದತ್ತ ಮುಖ ಮಾಡಿರುವುದು ಸಲ್ಮಾನ್ "ಖಾನ್"ದಾನ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮಾಧ್ಯಮಗಳಲ್ಲಿ ಈ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದರೂ ಕುಟುಂಬದ ಮೂಲಗಳಿಂದ ಮಾತ್ರ ಈ ಬಗ್ಗೆ ಯಾವುದೇ ಸ್ಪಷ್ಟನೆ ಬಂದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


