ಬಾಲಿವುಡ್

ಅಳಿಯನ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಮೊಮ್ಮಕ್ಕಳ ಜೊತೆ ಕಾಲ ಕಳೆದ ಬಚ್ಚನ್

ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅಪರೂಪಕ್ಕೊಮ್ಮೆ ತಮ್ಮ ಸಮಯದಲ್ಲಿ ಬಿಡುವು...

ಅಳಿಯನ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಮೊಮ್ಮಕ್ಕಳ ಜೊತೆ ಕಾಲ ಕಳೆದ ಬಚ್ಚನ್
ಮೊಮ್ಮಕ್ಕಳೊಂದಿಗೆ ಮೆಗಾಸ್ಟಾರ್ ಅಮಿತಾಬ್ ಬಚ್ಚನ್
Published On :
ನವದೆಹಲಿ: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅಪರೂಪಕ್ಕೊಮ್ಮೆ ತಮ್ಮ ಸಮಯದಲ್ಲಿ ಬಿಡುವು ಮಾಡಿಕೊಂಡು ಮೊಮ್ಮಕ್ಕಳ ಜೊತೆ ಕಾಲ ಕಳೆಯುವುದುಂಟು. ಅವರು ಇತ್ತೀಚೆಗೆ ತಮ್ಮ ಮಗಳು ಶ್ವೇತಾ ನಂದಾ ಅವರ ಮಕ್ಕಳಾದ ನವ್ಯಾ ನವೇಲಿ ನಂದಾ ಮತ್ತು ಅಗಸ್ತ್ಯ ನಂದಾ ಅವರ ಮಕ್ಕಳನ್ನು ಭೇಟಿ ಮಾಡಿ ಅವರೊಂದಿಗೆ ಕಾಲ ಕಳೆಯಲೆಂದು ಹೋಗಿದ್ದರು.
ಅವರು ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಕೆಲಸದ ಮೇಲೆ ದೆಹಲಿಗೆ ಹೋಗಿ ಅಳಿಯ ನಿಖಿಲ್ ನಂದಾ ಅವರ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವುದಾಗಿ ಟ್ವೀಟ್ ಮಾಡಿಕೊಂಡಿದ್ದರು. ಫ್ಯಾಕ್ಟರಿಯಲ್ಲಿ ತಮ್ಮ ಮೊಮ್ಮಕ್ಕಳೊಂದಿಗೆ ಕಾಲ ಕಳೆದ ಫೋಟೋವನ್ನು ಹಾಕಿಕೊಂಡಿದ್ದಾರೆ.
ತಮ್ಮ  ತಾತ ಬಂದ ವೇಳೆ ಮೊಮ್ಮಕ್ಕಳಿಬ್ಬರೂ ಔಪಚಾರಿಕವಾಗಿ ಕೋಟುಗಳನ್ನು ಧರಿಸಿಕೊಂಡು ಫ್ಯಾಕ್ಟರಿಗೆ ಹೋಗಿದ್ದಾರೆ.
ಇತ್ತೀಚೆಗೆ ಈ ಮಕ್ಕಳ ತಾಯಿ ಶ್ವೇತಾ ನಂದಾ ಮುಂಬೈಯಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ರ್ಯಾಂಪ್ ಮೇಲೆ ಕೂಡ ಹೆಜ್ಜೆ ಹಾಕಿದ್ದರು. ಅದನ್ನು ಸ್ವತಃ ಬಚ್ಚನ್ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು.
ಇನ್ನು ಸಿನಿಮಾದ ವಿಚಾರಕ್ಕೆ ಬಂದರೆ ಅಮಿತಾಬ್ ಬಚ್ಚನ್ ಇತ್ತೀಚೆಗೆ ರಾಮ್ ಗೋಪಾಲ್ ವರ್ಮಾರ ಸರ್ಕಾರ್ 3ಯ ಚಿತ್ರೀಕರಣ ಮುಗಿಸಿದ್ದು ಅದು ಮಾರ್ಚ್ ನಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.