ಬಾಲಿವುಡ್

ಮಗಳನ್ನು ತೆರೆಯ ಮೇಲೆ ನೋಡಿ ಕಣ್ಣು ತೇವವಾಯಿತು: ಗೋವಿಂದ

ಚೊಚ್ಚಲ ಸಿನೆಮಾ "ಸೆಕಂಡ್ ಹ್ಯಾಂಡ್ ಹಸ್ಬೆಂಡ್" ಚಲನಚಿತ್ರದ ಮೂಲಕ ಪಾದಾರ್ಪಣೆ ಮಾಡಿರುವ ಬಾಲಿವುಡ್ ನಟ ಗೋವಿಂದ ಅವರ ಮಗಳು ಟೀನಾ ಅಹುಜಾ

ಮಗಳನ್ನು ತೆರೆಯ ಮೇಲೆ ನೋಡಿ ಕಣ್ಣು ತೇವವಾಯಿತು: ಗೋವಿಂದ
ಬಾಲಿವುಡ್ ನಟ ಗೋವಿಂದ
Published On :

ಮುಂಬೈ: ಚೊಚ್ಚಲ ಸಿನೆಮಾ "ಸೆಕಂಡ್ ಹ್ಯಾಂಡ್ ಹಸ್ಬೆಂಡ್" ಚಲನಚಿತ್ರದ ಮೂಲಕ ಪಾದಾರ್ಪಣೆ ಮಾಡಿರುವ ಬಾಲಿವುಡ್ ನಟ ಗೋವಿಂದ ಅವರ ಮಗಳು ಟೀನಾ ಅಹುಜಾ ಅವರನ್ನು ತೆರೆ ಮೇಲೆ ನೋಡಿ ಭಾವುಕನಾದೆ ಎಂದಿದ್ದಾರೆ.

"ಸ್ವಂತ ಸಾಮರ್ಥ್ಯದ ಮೇಲೆ ಅವಳು ಇದನ್ನು ಸಾಧಿಸಿದ್ದಾಳೆ ಎಂದು ನಂಬಲು ಆಗುತ್ತಿಲ್ಲ. ಅವಳನ್ನು ತೆರೆಯ ಮೇಲೆ ನೋಡಿ ನನ್ನ ಕಣ್ಣು ತೇವವಾಯಿತು" ಎಂದು ಗೋವಿಂದ ಹೇಳಿದ್ದಾರೆ.

"ಟೀನಾ ಕಷ್ಟ ಪಟ್ಟು ಕೆಲಸ ಮಾಡುವ ಮಗಳು. ಅವಳ ಜೀವನದಲ್ಲಿ ಒಳಿತಾಗಲಿ ಎಂದು ಹಾರೈಸುತ್ತೇನೆ" ಎಂದಿದ್ದಾರೆ ನಟ.

"ಅವಳು ಎಲ್ಲಾ ಸವಾಲುಗಳನ್ನು ಮೀರಿ ಸೂಪರ್ ಸ್ಟಾರ್ ಆಗಲಿ. ಇದು ಬಾಪ್ಪಾಗೆ ನನ್ನ ಪ್ರಾರ್ಥನೆ" ಎಂದಿದ್ದಾರೆ.

ಸುಮೀಪ್ ಕಾಂಗ್ ನಿರ್ದೇಶನದ ಈ ಸಿನೆಮಾದಲ್ಲಿ ಜಿಪ್ಪಿ ಗ್ರೆವಾಲ್, ಧರ್ಮೇಂದ್ರ ಮತ್ತು ಗೀತ ಬಸ್ರ ಕೂಡ ನಟಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.