ಬಾಲಿವುಡ್

ನಾನು ತಿನ್ನುವ ಆಹಾರ, ಆರಾಧನೆ ಬಗ್ಗೆ ಪ್ರಶ್ನಿಸುವ ಹಕ್ಕು ನಿಮಗಿಲ್ಲ: ರಿಷಿ ಕಪೂರ್

ಗೋಮಾಂಸ ನಿಷೇಧದ ಕುರಿತು ಅವರ ವಿರುದ್ಧ ಟ್ವಿಟ್ಟರ್ ನಲ್ಲಿ ಪ್ರಕಟವಾದ ಸಂದೇಶಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ...What I do,eat,drink or pray is none of your business.

ನಾನು ತಿನ್ನುವ ಆಹಾರ, ಆರಾಧನೆ ಬಗ್ಗೆ ಪ್ರಶ್ನಿಸುವ ಹಕ್ಕು ನಿಮಗಿಲ್ಲ: ರಿಷಿ ಕಪೂರ್
ರಿಷಿ ಕಪೂರ್
Published On :

ಮುಂಬೈ: ಗೋಮಾಂಸ ನಿಷೇಧದ ಕುರಿತು ಅವರ ವಿರುದ್ಧ ಟ್ವಿಟ್ಟರ್ ನಲ್ಲಿ ಪ್ರಕಟವಾದ ಸಂದೇಶಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ರಿಷಿ ಕಪೂರ್, ನಾನೇನು ತಿನ್ನುತ್ತೇನೆ, ಏನು ಕುಡಿಯುತ್ತೇನೆ, ಏನನ್ನು ಆರಾಧಿಸುತ್ತೇನೆ ಎಂಬುದನ್ನು ವಿಚಾರಿಸುವುದು ನಿಮ್ಮ ವ್ಯವಹಾರವಲ್ಲ ಟ್ವೀಟ್ ಮಾಡಿದ್ದಾರೆ.

ರಿಷಿಕಪೂರ್ ರಂತಹಾ ಮೂರ್ಖರು, ಗೋಮಾಂಸ ತಿನ್ನುತ್ತಾರೆ, ಮನೆಯೊಳಗೊಂದು ಚರ್ಚನ್ನೂ ಹೊಂದಿದ್ದಾರೆ ತಮ್ಮನ್ನು ‘ಹಿಂದೂ’ಎಂದು ಕರೆದುಕೊಳ್ಳುವ ಇವರು ಹಿಂದೂ ಸಂತರ ವಿರುದ್ಧ ಟೀಕೆಯನ್ನೂ ಮಾಡುತ್ತಾರೆ.. ಎಂದು ರಿಷಿಕಪೂರ್ ವಿರುದ್ಧ @chintskap ಎಂಬ ಟ್ವಿಟ್ಟರ್ ಖಾತೆಯಿಂದ ಪ್ರಕಟವಾಗಿತ್ತು.

ಈ ಹಿಂದೆ ಗೋಮಾಂಸ ತಿನ್ನುವುದರ ಕುರಿತು ರಿಷಿಕಪೂರ್ ವಿರುದ್ಧ ವಿವಾದವೆದ್ದಿದ್ದರ ಕುರಿತು ಪ್ರಸ್ತಾಪಿಸಿದ ಅವರು, ಜನರಲ್ಲಿ ತಾನು ‘ಹಿಂದೂ ವಿರೋಧಿ’ ಎಂಬ ತಪ್ಪು ಗ್ರಹಿಕೆ ಇದೆ, ಈ ಸಂಗತಿ ತನಗೆ ಬಹಳವೇ ನೊವು ತರಿಸುವಂತದ್ದಾಗಿದೆ, ಆದರೆ ವಾಸ್ತವದಲ್ಲಿ ನಾನು ಸಂಜೆ ಮುಂಜಾನೆಗಳಲ್ಲಿ ಪ್ರಾರ್ಥಿಸುವ ನೈಜ ಹಿಂದು ಆಗಿದ್ದೇನೆ. ಆದರೆ ನಾನು ಇತರರ ಧಾರ್ಮಿಕ ಭಾವನೆಗಳನ್ನೂ ಅಷ್ಟೇ ಗೌರವಿಸುತ್ತೇನೆ. ಮತ್ತು ಸತ್ಯವನ್ನೇ ಬೆಂಬಲಿಸುತ್ತೇನೆ ಎಂದಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಮಹಾರಾಷ್ಟ್ರ ಸರ್ಕಾರ ಗೋಮಾಂಸ ನಿಷೇಧಿಸಿದ ಸಂದರ್ಭದಲ್ಲಿ ರಿಷಿ ಕಪೂರ್ ಅವರು, ಧರ್ಮವನ್ನು ಆಹಾರದೊಂದಿಗೆ ಸಂಯೋಜಿಸುವುದರ ಕುರಿತು ತನಗೆ ಅಸಮಾಧಾನವಿದೆ. ನಾನೊಬ್ಬ ಗೋಮಾಂಸ ಸೇವಿಸುವ ಹಿಂದೂ ಆಗಿದ್ದೇನೆ, ಬೀಫ್ ತಿನ್ನುವವರು ತಿನ್ನದವರಿಗಿಂತ ಕಡಿಮೆ ದೇವ ಭಕ್ತರೇ?” ಎಂದು ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.