ಭಾರತದ ಟಿವಿ ಷೋಗಳಿಗೆ ಈಜಿಪ್ಟ್ ನಲ್ಲಿ ಡಿಮ್ಯಾಂಡ್!
ಈಜಿಪ್ಟ್ ನಲ್ಲಿ ಭಾರತೀಯ ಟಿವಿ ಕಾರ್ಯಕ್ರಮಗಳು ದಿಢೀರ್ ಜನಪ್ರಿಯತೆ ಪಡೆದುಕೊಂಡಿವೆ...

ಕೈರೋ: ಈಜಿಪ್ಟ್ ನಲ್ಲಿ ಭಾರತೀಯ ಟಿವಿ ಕಾರ್ಯಕ್ರಮಗಳು ದಿಢೀರ್ ಜನಪ್ರಿಯತೆ ಪಡೆದುಕೊಂಡಿವೆ.
ಜೋಧಾ ಅಕ್ಬರ್, ಗೀತ್? ಹುಯೀ ಸಬ್‍ಸೆ ಪರಾಯಿ, ಪುನರ್ ವಿವಾಹ ಮುಂತಾದ ಧಾರಾವಾಹಿಗಳಲ್ಲದೆ, ಕಾಮಿಡಿ ಕಾರ್ಯಕ್ರಮಗಳಿಗೂ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಭಾರತದ ಬಹುತೇಕ ಟಿವಿ ಕಾರ್ಯಕ್ರಮಗಳು ಅರೇಬಿಕ್ ಭಾಷೆಗೆ ಡಬ್ ಆಗಿ ಪ್ರಸಾರವಾಗುತ್ತಿವೆ. ಇತ್ತೀಚಿನ ತನಕ ಟರ್ಕಿಯ ಧಾರಾವಾಹಿ, ಸಿನಿಮಾ ಹಾಗೂ ಇನ್ನಿತರ ಷೋಗಳಿಗೆ ಅಂಟಿಕೊಂಡಿದ್ದ ಈಜಿಪ್ಟ್ ವೀಕ್ಷಕರು ಅವುಗಳಿಂದ ದೂರವಾಗಿ ಭಾರತೀಯ ಕಾರ್ಯಕ್ರಮಗಳನ್ನು ಇಷ್ಟಪಡಲಾರಂಭಿಸಿದ್ದಾರೆ.
ಟರ್ಕಿ ಮತ್ತು ಈಜಿಪ್ಟ್ ನಡುವಣ ರಾಜಕೀಯ ಸಂಬಂಧ ಹದಗೆಟ್ಟ ನಂತರ ಟರ್ಕಿಷ್ ಟಿವಿ ಕಾರ್ಯಕ್ರಮಗಳ ಪ್ರಸಾರ ಕಮ್ಮಿಯಾಗಿದ್ದವು. ಬಾಲಿವುಡ್ ನಟನಟಿಯರು ಈಜಿಪ್ಟ್ ನಲ್ಲೂ ಕೊಂಚ ಪರಿಚಿತ ಮುಖಗಳಾಗಿದ್ದರ ಜೊತೆಗೆ, ನಮ್ಮವರ ಹಾಡು, ನೃತ್ಯಗಳು, ವೇಷಭೂಷಣಗಳು, ಕಥಾಹಂದರಗಳು ಅಲ್ಲಿನವರನ್ನು ಆಕರ್ಷಿಸಿರುವುದಾಗಿ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


