ಜುರಾಸಿಕ್ ವರ್ಲ್ಡ್ ವೇಗಕ್ಕೆ ದಾಖಲೆಗಳೆಲ್ಲ ಧೂಳಿಪಟ
ಜುರಾಸಿಕ್ ಪಾರ್ಕ್ ಸರಣಿಯ ಚಿತ್ರಗಳು ದಾಖಲೆ ಕಲೆಕ್ಷನ್ ಮಾಡಿರುವುದು ತಿಳಿದಿರುವ ಸಂಗತಿ. ಇದೇ ಸರಣಿಯಲ್ಲಿ ಬಂದ ಜುರಾಸಿಕ್ ವಲ್ಡ್ ಚಿತ್ರ...

ಲಾಸ್ ಏಂಜಲೀಸ್: ಜುರಾಸಿಕ್ ಪಾರ್ಕ್ ಸರಣಿಯ ಚಿತ್ರಗಳು ದಾಖಲೆ ಕಲೆಕ್ಷನ್ ಮಾಡಿರುವುದು ತಿಳಿದಿರುವ ಸಂಗತಿ. ಇದೇ ಸರಣಿಯಲ್ಲಿ ಬಂದ ಜುರಾಸಿಕ್ ವಲ್ಡ್ ಚಿತ್ರ ಜಗತ್ತಿನೆಲ್ಲೆಡೆ ಬಿಡುಗಡೆಯಾದ ಒಂದು ವಾರದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ 3276 ಕೋಟಿ ರು. ಕೊಳ್ಳೆ ಹೊಡೆದಿದೆ.
ಕಾಲಿನ್ ಟ್ರೆವೆರೋ ನಿರ್ದೇಶನದ ಈ ಚಿತ್ರ ಮೊದಲ ವಾರಾಂತ್ಯದಲ್ಲಿ ವಿಶ್ವಾದ್ಯಂತ 511.8 ದಶಲಕ್ಷ ಡಾಲರ್ ಬಾಚಿಕೊಂಡಿದೆ. ಚಿತ್ರವೊಂದು ಇಷ್ಟೊಂದು ಅಧಿಕ ಹಣ ಗಳಿಸಿರುವುದು ಕೂಡ ಇದೇ ಮೊದಲು. 2011ರಲ್ಲಿ ಹ್ಯಾರಿ ಪಾಟರ್ ಮತ್ತು ಡೆತ್ಲಿ ಹ್ಯಾಲೋಸ್ ಚಿತ್ರ ಮೊದಲ ವಾರದಲ್ಲಿ 3072 ಕೋಟಿ ರು. ಗಳಿಸಿತ್ತು. ಈ ದಾಖಲೆಯನ್ನು ಜುರಾಸಿಕ್ ವರ್ಲ್ಡ್ ಹಿಂದಿಕ್ಕಿದೆ.
ಕಾಲಿನ್ ಟ್ರೆವೆರೋ ನಿರ್ದೇಶನದ ಈ ಚಿತ್ರ ಮೊದಲ ವಾರಾಂತ್ಯದಲ್ಲಿ ವಿಶ್ವಾದ್ಯಂತ 511.8 ದಶಲಕ್ಷ ಡಾಲರ್ ಬಾಚಿಕೊಂಡಿದೆ. ಈ ಚಿತ್ರ 961 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು.
ಭಾರತದಲ್ಲೂ ಶನಿವಾರ ಜುರಾಸಿಕ್ ವರ್ಲ್ಡ್ ಚಿತ್ರ ಬಿಡುಗಡೆಯಾಗಿದ್ದು, ಎರಡೇ ದಿನದಲ್ಲಿ 44 ಕೋಟಿ ರು. ಬಾಚಿಕೊಂಡಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಇರ್ಫಾನ್ ಖಾನ್ ಅವರು, ಪಾರ್ಕ್‌ನ ಮಾಲೀಕ ಸಾಮ್ ಮಸ್ರಾನಿ ಅವರ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಹಾಲಿವುಡ್ ನಲ್ಲಿ ಮೊದಲ ವಾರಾಂತ್ಯದಲ್ಲಿ ಯಾವೊಂದು ಚಿತ್ರವೂ 500 ದಶಲಕ್ಷ ಡಾಲರ್ ಗಳಿಕೆಯ ಗಡಿ ಮುಟ್ಟಿರಲಿಲ್ಲ. ಆದರೆ ‘ಜುರಾಸಿಕ್ ವರ್ಲ್ಡ್’ ಈ ಖ್ಯಾತಿಗೆ ಪಾತ್ರವಾಗಿದೆ. ಟಾಪ್ 5 ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ಮುಂಚೂಣಿಯಲ್ಲಿ ಜುರಾಸಿಕ್ ವರ್ಲ್ಡ್, ಹ್ಯಾರಿ ಪಾಟರ್ ಆಂಡ್ ದಿ ಡೆತ್ಲಿ ಹಾಲೊಸ್ (483.2 ದಶಲಕ್ಷ ಡಾಲರ್), ಫ್ಯೂರಿಯಸ್ 7 (397.6 ದ.ಲ.ಡಾ.), ಹ್ಯಾರಿ ಪಾಟರ್ ಆಂಡ್ ಹಾಫ್-ಬ್ಲಡ್ ಪ್ರಿನ್ಸ್ (394 ದ.ಲ.ಡಾ.), ದ ಅವೆಂಜರ್ಸ್ (392.5 ದ.ಲ.ಡಾ.) ನಂತರದ ಸ್ಥಾನದಲ್ಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


