ಭಜರಂಗಿ ಪೆಂಡೆಂಟ್‍ಗೆ ರು.71, 154 ಸಾವಿರ!
ಸಲ್ಮಾನ್ ಖಾನ್ ಅದೇನೇ ಮಾಡಿದ್ರೂ ಸುದ್ದಿಯಾಗುತ್ತೆ. ಈತನ ಅಭಿನಯದ `ಭಜರಂಗಿ ಭಾಯ್ ಜಾನ್' ಸದ್ಯದಲ್ಲಿಯೇ ತೆರೆ ಕಾಣಲಿದೆ...

ಸಲ್ಮಾನ್ ಖಾನ್ ಅದೇನೇ ಮಾಡಿದ್ರೂ ಸುದ್ದಿಯಾಗುತ್ತೆ. ಈತನ ಅಭಿನಯದ `ಭಜರಂಗಿ ಭಾಯ್ ಜಾನ್' ಸದ್ಯದಲ್ಲಿಯೇ ತೆರೆ ಕಾಣಲಿದೆ.
ಈ ಚಿತ್ರದಲ್ಲಿ ಸಲ್ಮಾನ್ ಭಜರಂಗಬಲಿ ಭಕ್ತ. ಚಿತ್ರದ ಹೆಸರಿನೊಂದಿಗೇ ಗದೆಯಾಕಾರದ ಪದಕವೊಂದು ಥಳಕು ಹಾಕಿ ಕೊಂಡಿದೆ. ಈ ಆಕಾರದ ಪದಕಕ್ಕೆ ಈಗ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಹುಟ್ಟಿ ಕೊಂಡಿದೆಯಂತೆ. ಸಲ್ಮಾನ್ ಅಭಿಮಾನಿಗಳು ಈ ಪದಕಕ್ಕೆ ಮಾರು ಹೋಗಿದ್ದು, ಎಲ್ಲರೂ ಇಂಥ ಪದಕ ಕೊಳ್ಳಲು ಮುಗಿಬೀಳುತ್ತಿದ್ದಾರೆ.
ಪರಿಸ್ಥಿತಿಯನ್ನು ಅರಿತುಕೊಂಡ ಆನ್‍ಲೈನ್ ಮಾರಾಟಗಾರರು ಇದರಲ್ಲಿಯೇ ಹಣ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಈ ಪದಕಗಳು ಆನ್‍ಲೈನ್‍ನಲ್ಲಿ ರು.71, 154ಸಾವಿರಕ್ಕೆ ಲಭ್ಯವಿದೆ. ಚಿತ್ರದಲ್ಲಿ ಕಾಣಿಸಿಕೊಳ್ಳುವ ಪದಕಕ್ಕೇ ಇಷ್ಟೊಂದು ಬೇಡಿಕೆ ಸೃಷ್ಟಿಯಾಗಿರುವಾಗ ಸಿನಿಮಾ ಇನ್ನೆಷ್ಟು ಮಟ್ಟಿಗೆ ಹೆಸರು ಮಾಡಬಹುದು ಎಂಬುದನ್ನು ಕಾದು ನೋಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


