ಕೋಟಿ ಕೊಟ್ಟರೂ ಬೇಡ: ಕಂಗನಾ
ಕ್ವೀನ್', `ತನು ವೆಡ್ಸ್ ಮನು ರಿಟನ್ರ್ಸ್' ಚಿತ್ರಗಳ ಸರಣಿ ಯಶಸ್ಸಿನ ನಂತರ ಗುಂಗುರು ಕೂದಲ ಚೆಲುವೆ ಕಂಗನಾಳಿಗೆ ಬಾಲಿವುಡ್‍ನಲ್ಲೂ ಬೇಡಿಕೆ, ಜಾಹೀರಾತಿಗೂ ಬೇಡಿಕೆ...

ಕ್ವೀನ್', `ತನು ವೆಡ್ಸ್ ಮನು ರಿಟನ್ರ್ಸ್' ಚಿತ್ರಗಳ ಸರಣಿ ಯಶಸ್ಸಿನ ನಂತರ ಗುಂಗುರು ಕೂದಲ ಚೆಲುವೆ ಕಂಗನಾಳಿಗೆ ಬಾಲಿವುಡ್‍ನಲ್ಲೂ ಬೇಡಿಕೆ, ಜಾಹೀರಾತಿಗೂ ಬೇಡಿಕೆ. ಹೀಗೆ ಕ್ವೀನ್‍ಗಾಗಿ ಕ್ಯೂ ನಿಂತಿದ್ದ ಫೇರ್‍ನೆಸ್ ಕಂಪನಿಯೊಂದು ಬಂದ ದಾರಿಗೆ ಸುಂಕವಿಲ್ಲ ಎಂದು ಹಿಂದಿರುಗಿದೆ.
`ಫೇರ್‍ನೆಸ್ ಜಾಹೀರಾತುಗಳಲ್ಲಿ ಬಿಳಿಯಿದ್ದರೆ ಮಾತ್ರ ಚೆಲುವು ಎಂಬಂತೆ ತೋರಿಸುತ್ತಾರೆ. ಹಲವಾರು ಅಭಿಮಾನಿಗಳಿರುವಾಗ ನಾನು ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ಕಪ್ಪಿದ್ದವರೂ ಚೆನ್ನಾಗಿಯೇ ಇರುತ್ತಾರೆ. ನನ್ನ ತಂಗಿ ಕೂಡಾ ಕೃಷ್ಣಸುಂದರಿಯೇ. ಇಂಥ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದರಿಂದ ನನ್ನ ತಂಗಿಗೂ, ಉಳಿದ ಕಪ್ಪು ಬಣ್ಣದ ಅಭಿಮಾನಿಗಳಿಗೂ ತಪ್ಪು ಸಂದೇಶ ನೀಡಿದಂತಾಗುತ್ತದೆ' ಎಂದಿರುವ ಕಂಗನಾ 2 ಕೋಟಿ ರುಪಾಯಿಯ ಜಾಹೀರಾತನ್ನು ತಿರಸ್ಕರಿಸಿದ್ದಾಳೆ.
ಶಾರುಖ್, ಅಮಿತಾಭ್‍ರಂಥ ನಟರೂ ಕಾನ್ಸೆಪ್ಟ್ ನೋಡದೆ ಜಾಹೀರಾತುಗಳಲ್ಲಿ ನಟಿಸಿ ಹಣ ಮಾಡುವಾಗ, ಕಂಗನಾಳ ಈ ನಿರ್ಧಾರ ಎಲ್ಲೆಡೆ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದೆ. ಈಕೆ ನಿಜವಾಗಿಯೂ ಕ್ವೀನ್ ಅಲ್ಲವೇ..!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


