ಶಾರುಕ್ ಗೆ ಸ್ಕಿಝೋಪ್ರೇನಿಕ್ ಅನುಭವ ನೀಡಿದ ಫ್ಯಾನ್..!
ಬಾಲಿವುಡ್ ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಶಾರುಖ್ ಖಾನ್ ಅಭಿನಯದ ಫ್ಯಾನ್ ಚಿತ್ರ ಸ್ಕಿಝೋಪ್ರೇನಿಕ್ ಅನುಭವ ನೀಡಿದೆ ಎಂದು ನಟ ಶಾರುಖ್ ಖಾನ್ ಹೇಳಿಕೊಂಡಿದ್ದಾರೆ...

ಮುಂಬೈ: ಬಾಲಿವುಡ್ ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಶಾರುಖ್ ಖಾನ್ ಅಭಿನಯದ ಫ್ಯಾನ್ ಚಿತ್ರ ಸ್ಕಿಝೋಪ್ರೇನಿಕ್ ಅನುಭವ ನೀಡಿದೆ ಎಂದು ನಟ ಶಾರುಖ್ ಖಾನ್ ಹೇಳಿಕೊಂಡಿದ್ದಾರೆ.
ಫ್ಯಾನ್ ಚಿತ್ರ ದ ಶೂಟಿಂಗ್ ಮುಗಿಸಿರುವ ಶಾರುಕ್, ಸುದ್ದಿಗಾರರ ಜೊತೆ ಚಿತ್ರೀಕರಣದ ತಮ್ಮ ವಿಶಿಷ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. "ಫ್ಯಾನ್ ಚಿತ್ರ ದೈಹಿಕವಾಗಿ ನನ್ನನ್ನು ಬರಿದುಗೊಳಿಸಿದ್ದರೂ, ಚಿತ್ರೀಕರಣದ ವೇಳೆ ಅದ್ಭುತವಾದ ಅನುಭವವನ್ನು ನೀಡಿದೆ. ಹಾಗೆ ನೋಡಿದರೆ, ನನಗೆ ಸ್ಕಿಝೋಪ್ರೇನಿಕ್ ಅನ್ನಿಸುವಂತಹ ಅನುಭವಗಳನ್ನು ಈ ಚಿತ್ರ ನೀಡಿದೆ. ಮಾನಸಿಕವಾಗಿ ಜರ್ಜರಿತಗೊಂಡಿರುವ ವ್ಯಕ್ತಿಯ ಪಾತ್ರ ಈ ಚಿತ್ರದಲ್ಲಿದ್ದು, ನಿಜಕ್ಕೂ ಈ ಪಾತ್ರ ಸಾವಾಲಿನದಾಗಿತ್ತು ಎಂದು ಶಾರುಕ್ ಹೇಳಿದ್ದಾರೆ.
“ನನ್ನಂತಹ ಒಬ್ಬ ವ್ಯಕ್ತಿ 24ರ ಹರೆಯದ ವ್ಯಕ್ತಿಯ ಪಾತ್ರ ಮಾಡುವುದು ದೈಹಿಕವಾಗಿ ಎಷ್ಟು ಕಷ್ಟಕರವಾದುದು ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಕೃತಕ ಉಪಕರಣಗಳ ನೆರವಿನಿಂದ ಇದನ್ನು ನಿರ್ವಹಿಸಿದೆ. ಆ ಯುವಕ ತಾನು ಪ್ರೀತಿಸುವ ನಟನನ್ನೇ ಹೋಲುವುದು ಈ ಚಿತ್ರದ ವಿಶೇಷ. ಒಂದು ರೀತಿಯಲ್ಲಿ ಆತನ ಕಥೆ ನನ್ನನ್ನೇ ಹೋಲುತ್ತದೆ” ಎಂದು ಶಾರುಕ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮನೀಶ್ ಶರ್ಮಾ ನಿರ್ದೇಶನದ ಫ್ಯಾನ್ ಚಿತ್ರದಲ್ಲಿ ನಟ ಶಾರುಖ್ ಎರಡು ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ಯಶ್ ರಾಜ್ ಫಿಲ್ಮ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಫ್ಯಾನ್ ಚಿತ್ರದಲ್ಲಿ 50ರ ಹರೆಯದ ಶಾರುಕ್ ಖಾನ್ 24 ವರ್ಷದ ದಿಲ್ಲಿ ಹುಡುಗನ ಪಾತ್ರ ನಿರ್ವಹಿಸಿದ್ದಾರೆ. ಈತ ಪ್ರಸಿದ್ಧ ನಟನ ಫ್ಯಾನ್ ಆಗಿದ್ದು, ಆ ನಟನನ್ನೇ ಹೋಲುವುದು ಈ ಪಾತ್ರದ ವಿಶಿಷ್ಟತೆಯಾಗಿದೆ. ಈ ಚಿತ್ರದಲ್ಲಿ ಹೊಸ ಪರಿಚಯವಾದ ವಾಲುಸ್ಚಾ ಡಿಸೋಜ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. 2016ರ ಏಪ್ರಿಲ್ 15ರಂದು ಚಿತ್ರ ವಿಶ್ವದಾದ್ಯಂತ ಬಿಡುಗಡೆಗೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


