ಬಾಲಿವುಡ್

ರಾಧಿಕಾ ಆಪ್ಟೆ ಹಸಿಬಿಸಿ ದೃಶ್ಯಕ್ಕೆ ನಾನೇ ಹೊಣೆ ಎಂದ ಅನುರಾಗ್ ಕಶ್ಯಪ್

ಅಂತರ್ಜಾಲದಲ್ಲಿ ನಗ್ನ ಚಿತ್ರಗಳು ಬಿಡುಗಡೆಗೊಳಿಸಿ ವಿವಾದ ಸೃಷ್ಟಿಸಿದ್ದ ಬಾಲಿವುಡ್ ಹಾಟ್ ನಟಿ ರಾಧಿಕಾ ಆಪ್ಟೆ, ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ...

ರಾಧಿಕಾ ಆಪ್ಟೆ ಹಸಿಬಿಸಿ ದೃಶ್ಯಕ್ಕೆ ನಾನೇ ಹೊಣೆ ಎಂದ ಅನುರಾಗ್ ಕಶ್ಯಪ್
ಅನುರಾಗ್ ಕಶ್ಯಪ್ ಮತ್ತು ರಾಧಿಕಾ ಆಪ್ಟೆ
Published On :

ಮುಂಬೈ: ಅಂತರ್ಜಾಲದಲ್ಲಿ ನಗ್ನ ಚಿತ್ರಗಳು ಬಿಡುಗಡೆಗೊಳಿಸಿ ವಿವಾದ ಸೃಷ್ಟಿಸಿದ್ದ ಬಾಲಿವುಡ್ ಹಾಟ್ ನಟಿ ರಾಧಿಕಾ ಆಪ್ಟೆ, ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ.

ಈ ಬಾರಿ ರಾಧಿಕಾ ಆಪ್ಟೆ ನಟಿಸಿದ್ದ ಶಾರ್ಟ್ ಫಿಲ್ಮ್ ಚಿತ್ರದ ಹಾಟ್ ಚಿತ್ರಗಳು ವಾಟ್ಸ್ ಆಪ್ ನಲ್ಲಿ ಲೀಕ್ ಆಗಿರುವುದು ಚಿತ್ರದ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಕೆಂಗಣ್ಣಿಗೆ ಕಾರಣವಾಗಿದೆ. ಕೆಲವು ತಿಂಗಳ ಹಿಂದಷ್ಟೇ 20 ನಿಮಿಷದ ಕಿರುಚಿತ್ರವೊಂದಕ್ಕೆ ಕಶ್ಯಪ್ ರಾಧಿಕಾ ಆಪ್ಟೆಯವರ ನಗ್ನ ದೃಶ್ಯಗಳನ್ನು ಚಿತ್ರೀಕರಿಸಿದ್ದರು.

ಈ ಕಿರು ಚಿತ್ರವನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿರಿಸಿ ಚಿತ್ರೀಕರಣ ನಡೆಸಲಾಗಿತ್ತು. ಚಿತ್ರೀಕರಣ ಬಹಳ ಸೂಕ್ಷ್ಮದ ವಿಚಾರವಾಗಿದ್ದರಿಂದ ಕಿರು ಚಿತ್ರದ ಚಿತ್ರೀಕರಣವನ್ನು ಕೇವಲ ಮಹಿಳಾ ಸಿಬ್ಬಂದಿಯನ್ನೇ ಬಳಸಿ ಚಿತ್ರೀಕರಣ ನಡೆಸಲಾಗಿತ್ತು. ಈ ಕಿರುಚಿತ್ರದ ದೃಶ್ಯಗಳ ಚಿತ್ರೀಕರಣಕ್ಕೆ ಸಾಕಷ್ಟು ಹರಸಾಹಸ ಪಡಬೇಕಾಗಿತ್ತು. ಕಳೆದೊಂದು ತಿಂಗಳ ಹಿಂದಷ್ಟೇ ಈ ಚಿತ್ರವನ್ನು ನ್ಯೂಯಾರ್ಕ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಇದಕ್ಕೂ ಮುನ್ನವೇ ಈ ಚಿತ್ರ ಭಾರತದ ಅಂತರ್ಜಾಲದಲ್ಲಿ ಹರಿದಾಡತೊಡಗಿದೆ ಎಂದು ಕಶ್ಯಪ್ ವಿಷಾದವ್ಯಕ್ತಪಡಿಸಿದ್ದಾರೆ.

ಅಲ್ಲದೆ, ರಾಧಿಕಾ ಆಪ್ಟೆ ಅವರ ಬೆಂಬಲಕ್ಕೆ ನಿಂತಿರುವ ಕಶ್ಯಪ್, ಚಿತ್ರದಲ್ಲಿರುವ ಹಸಿಬಿಸಿ ದೃಶ್ಯಕ್ಕೆ ತಾವೇ ಹೊಣೆ ಎಂದು ಹೇಳಿದ್ದಾರೆ. ಚಿತ್ರದ ಸೋರಿಕೆ ಬಹಳ ಬೇಸರ ತಂದಿದ್ದು, ಈ ಕುರಿತಂತೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಕಶ್ಯಪ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.