ಛೋಪ್ರಾಸುತ್ತ ಸ್ಪಾ ಫಿಕ್ಸಿಂಗ್
ನಂಬಿಕೊಟ್ಟೆ, ಈಗ ಕೆಟ್ಟೆ ಎಂದು ಗೋಳಾಡುತ್ತಿದ್ದಾಳೆ ನಟಿ ಪ್ರಿಯಾಂಕ...

ನಂಬಿಕೊಟ್ಟೆ, ಈಗ ಕೆಟ್ಟೆ ಎಂದು ಗೋಳಾಡುತ್ತಿದ್ದಾಳೆ ನಟಿ ಪ್ರಿಯಾಂಕ ಛೋಪ್ರಾ.
ಈಕೆಗೆ ಸೇರಿದ ಕಟ್ಟಡವೊಂದಕ್ಕೆ, ಇಲ್ಲಿ ಮಾಂಸದಂಧೆ ನಡೆಯುತ್ತಿದೆಯೆಂದು ಪೊಲೀಸರು ಧಾಂಗುಡಿ ಇಟ್ಟಿದ್ದರಿಂದಾಗಿ ನಟಿ ತೀವ್ರ ಮುಜುಗರಕ್ಕೆ ಒಳಗಾಗಿದ್ದಾಳೆ. ಮುಂಬೈನ್ ಅಂಧೇರಿಯಲ್ಲಿರುವ ಈ ಕಟ್ಟಡವನ್ನು ಛೋಪ್ರಾ ಸ್ಪಾ ನಡೆಸುತ್ತಿದ್ದವರಿಗೆ ಬಾಡಿಗೆಗೆ ನೀಡಿದ್ದಳು.
ಆದರೆ ಬಾಡಿಗೆದಾರರು ವೇಶ್ಯಾವಾಟಿಕೆ ನಡೆಸುತ್ತಿದ್ದುದರ ಕಿಂಚಿತ್ತೂ ಅರಿವಿಲ್ಲದ ನಟಿಗೆ ಇದು ಬಹುದೊಡ್ಡ ಶಾಕ್ ನೀಡಿದೆ. ಸ್ಪಾ ಪಕ್ಕದಲ್ಲೇ ಪ್ರಿಯಾಂಕಾಳ ತಾಯಿಯ ಕ್ಲಿನಿಕ್ ಇದ್ದರೂ ದಂಧೆ ಅವರ ಗಮನಕ್ಕೆ ಬರದಿದ್ದುದು ಅಚ್ಚರಿ ಮೂಡಿಸಿದೆ.
ದಾಳಿಯನ್ನೂ ಮೂವರು ಯುವತಿಯರನ್ನು ರಕ್ಷಿಸಲಾಗಿದ್ದು, ಮ್ಯಾನೇಜರ್ ಕಂಬಿ ಎಣಿಸುತ್ತಿದ್ದಾನೆ. ಸ್ಪಾ ಮಾಲೀಕ ಪರಾರಿಯಾಗಿರುವುದರಿಂದ ಆತ ಸಿಕ್ಕ ಮೇಲಷ್ಟೇ ನಟಿ ಹಾಗೂ ಆತನ ನಡುವೆ ಇದ್ದ ಕಟ್ಟಡ ಒಪ್ಪಂದಗಳನ್ನು ವಿಚಾರೆಗೊಳಪಡಿಸಬಹುದಾಗಿದೆ ಎಂಬುದು ಪೊಲೀಸರ ವಾದ ಸರಣಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


