ಟಾಲಿವುಡ್ಡೇ ಚಂದ!
ಬಾಲಿವುಡ್‌ನಲ್ಲಿ ಭದ್ರ ನೆಲೆ ಕಂಡುಕೊಂಡಿರುವ ಕತ್ರೀನಾಗೆ ಬಾಲಿವುಡ್‌ಗಿಂತ ಟಾಲಿವುಡ್ಡೇ...

ಬಾಲಿವುಡ್‌ನಲ್ಲಿ ಭದ್ರ ನೆಲೆ ಕಂಡುಕೊಂಡಿರುವ ಕತ್ರೀನಾಗೆ ಬಾಲಿವುಡ್‌ಗಿಂತ ಟಾಲಿವುಡ್ಡೇ ಚಂದವಂತೆ! ಟಾಲಿವುಡ್‌ನಲ್ಲಿ ಕತ್ರೀನಾ ನಟಿಸಿರುವ ಚಿತ್ರಗಳು ಒಂದೋ..ಎರಡೋ..ಹೀಗಿದ್ದರೂ, ಟಾಲಿವುಡ್ ಹೊಗಳಲು ಅಲ್ಲಿ ಹೀರೋಗಳು ಕಾರಣವಂತೆ. ಬಾಲಿವುಡ್ ಹೀರೋಗಳಿಗಿಂತ ಟಾಲಿವುಡ್ ಹೀರೋಗಳೇ ಇಷ್ಟವಂತೆ.
ಇದಕ್ಕೆ ಕಾರಣ ಏನು ಗೊತ್ತಾ? ಬಾಲಿವುಡ್‌ನಲ್ಲಿರುವ ಕೆಲ ಹೀರೊಗಳಲ್ಲಿ ಶಿಸ್ತಿಲ್ಲವಂತೆ. ಮಧ್ಯರಾತ್ರಿವರೆಗೂ ಪಾರ್ಟಿ ಮಾಡಿ, ಸೆಟ್‌ಗೆ ಲೇಟಾಗಿ ಬರುವುದಲ್ಲದೇ, ಕೆಲವರು ಸ್ನಾನವನ್ನೇ ಮಾಡುವುದಿಲ್ಲವಂತೆ! ಅಂಥ ಸಂದರ್ಭದಲ್ಲಿ ರೋಮ್ಯಾಂಟಿಕ್ ಸೀನ್ ಇದ್ದರಂತೂ ನರಕಯಾತನೆ ಅಂತ ಕತ್ರೀನಾ ಬಾಯ್ಬಿಟ್ಟಿದ್ದಾರೆ. ಬಾಲಿವುಡ್‌ನಲ್ಲಿ ನೀಟ್ನೆಸ್ ಇಲ್ಲದ ಹೀರೋಗಳ ಜತೆ ಆ್ಯಕ್ಟ್ ಮಾಡುವಾಗ ಎಷ್ಟೋ ಬಾರಿ ಸೆಟ್‌ನಲ್ಲಿ ಕತ್ರೀನಾ ವಾಂತಿ ಮಾಡಿಕೊಂಡಿದ್ದಾರಂತೆ. ಇಂಥ ಪರಿಸ್ಥಿತಿ ಟಾಲಿವುಡ್‌ನಲ್ಲಿ ಎದುರಾಗಿಲ್ಲ.
'ಅಲ್ಲಿ, ಎಲ್ಲರಿಗೂ ಶಿಸ್ತಿದೆ. ಹೀರೋಗಳಿಗೆ ಸಮಯ ಪ್ರಜ್ಞೆ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಅವರು ಕ್ಲೀನ್ ಆಗಿ ಬರುತ್ತಾರೆ. ಹೀಗಾಗಿ ಟಾಲಿವುಡ್ ನನಗೆ ಅಚ್ಚುಮೆಚ್ಚು' ಅನ್ನುವ ಕತ್ರೀನಾ ಹೇಳಿಕೆ ಯಾಕೋ ಸಂಶಯ ಮೂಡಿಸುವಂತಿದೆ. ಏಕೆಂದರೆ, ಟಾಲಿವುಡ್‌ನಿಂದ ದೊಡ್ಡ ದೊಡ್ಡ ಆಫರ್‌ಗಳು ಬರುತ್ತಿದ್ದರೂ ಕತ್ರೀನಾ ಯಾಕೆ ಒಪ್ಪಿಕೊಳ್ಳುತ್ತಿ ಲ್ಲ? ಬಹುಶಃ ಪೈಸಾ ಕಾರಣವಿರಬಹುದಾ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


