ಬಾಲಿವುಡ್

ಎರಡು ದಿನಗಳಲ್ಲಿ ೫೦ ಕೋಟಿ ಬಾಚಿದ ಪಿಕೆ

ಅಮೀರ್ ಖಾನ್ ಅಭಿನಯದ "ಪಿಕೆ" ಗಲ್ಲಾಪೆಟ್ಟಿಗೆಯಲ್ಲಿ

ಎರಡು ದಿನಗಳಲ್ಲಿ ೫೦ ಕೋಟಿ ಬಾಚಿದ ಪಿಕೆ
"ಪಿಕೆ" ಚಿತ್ರದ ಸ್ಟಿಲ್
Published On :

ನವದೆಹಲಿ: ಅಮೀರ್ ಖಾನ್ ಅಭಿನಯದ "ಪಿಕೆ" ಗಲ್ಲಾಪೆಟ್ಟಿಗೆಯಲ್ಲಿ ಭಾರತದಲ್ಲೇ ೨ ದಿನಗಳಲ್ಲಿ ೫೦ ಕೋಟಿ ಬಾಚಿದ್ದು, ಮುಂದಿನ ದಿನಗಳಲ್ಲೂ ಹೀಗೆಯೇ ಮುಂದುವರೆಯಲಿದೆ ಎನ್ನುತ್ತಾರೆ ಸಿನೆಮಾ ಪಂಡಿತರು.

ವಿದು ವಿನೋದ್ ಚೋಪ್ರಾ ನಿರ್ಮಾಣದ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರ ಶುಕ್ರವಾರ ಬಿಡುಗಡೆ ಕಂಡಿತ್ತು.

ಹಿಂದಿ ಚಲನಚಿತ್ರೋದ್ಯಮದ ಪಂಡಿತ ಗಿರೀಶ್ ಜೋಹರ್, ಪಿಕೆ ೨ ದಿನಗಳಲ್ಲಿ ೫೦ ಕೋಟಿ ಗಳಿಕೆ ದಾಟಿದೆ. ೨೦೧೪ ರಲ್ಲಿ ೨ ದಿನಗಳಲ್ಲೇ ೫೦ ಕೋಟಿ ಗಳಿಕೆ ದಾಟಿದ ನಾಲ್ಕನೇ ಚಿತ್ರ ಇದು ಎಂದು ಟ್ವೀಟ್ ಮಾಡಿದ್ದಾರೆ.

ಅನುಷ್ಕಾ ಶರ್ಮಾ ಅಭಿನಯದ ಈ ಚಲನಚಿತ್ರ ಎರಡನೆ ದಿನ ಉತ್ತಮ ಗಳಿಕೆಯನ್ನು ಕಂಡು ೨೯ ಕೋಟಿ ಗಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.