ನೀತೂಚಂದ್ರ ಈಗ ಬಾಲ್‌ಚಂದ್ರ
ಬಾಲಿವುಡ್‌ನ ಗರಮ್ ಮಸಾಲೆ ನೀತೂಚಂದ್ರ ಈ ಕೊರೆಯುವ ಚಳಿಯಲ್ಲೂ ಗರಮ್ಮಾಗಿದ್ದಾಳೆ...

ಬಾಲಿವುಡ್‌ನ ಗರಮ್ ಮಸಾಲೆ ನೀತೂಚಂದ್ರ ಈ ಕೊರೆಯುವ ಚಳಿಯಲ್ಲೂ ಗರಮ್ಮಾಗಿದ್ದಾಳೆ. ಆಕೆ ಮೊದಲಿಂದಲೂ ಹಾಟ್ ಅಲ್ವೇ ಅಂತ ಕೇಳಬೇಡಿ. ಆಕೆಗೆ ಬರೀ ಮಸಾಲೆ ಸಿನಿಮಾ ಮಾಡಿ ಬೇಸರ ಬಂದಿದೆಯಂತೆ. ನಡುನಡುವೆ ಅಲ್ಲೊಂದು ಇಲ್ಲೊಂದು ಒಳ್ಳೆ ಸಿನಿಮಾ ಸಿಕ್ಕಿದ್ದರೂ ಈ ನಡುವೆ ಸವಾಲಿನ ಪಾತ್ರವೇ ಸಿಗುತ್ತಿಲ್ಲವೆಂಬ ಕೊರಗು ಆಕೆಗೆ, ಮಧುರ್ ಭಂಡಾರ್ ಕರ್, ವರ್ಮಾರಂಥ ನಿರ್ದೇಶಕರ ಕೈಲಿ ನಟಿಸಿಯೂ ಈಗ ಪರಭಾಷಾ ಸಿನಿಮಾಗಳಲ್ಲಿ ಐಟಂ ನಂಬರ್ ಮಾಡೋ ಹಾಗಿದೆ ಎಂಬುದು ಆಕೆಯ ಕೋಪಕ್ಕೆ ಕಾರಣ. ಪುನೀತ್‌ರ ಪವರ್ ಚಿತ್ರದಲ್ಲೂ ವಿಶೇಷ ಪಾತ್ರ ಎಂಬ ಹೆಸರಿನಲ್ಲಿ ಆಕೆ ಮಾಡಿದ್ದು ಐಟಂ ಸಾಂಗೇ!. ಟೇಕ್ವಾಂಡೋ ಕಲೆಯನ್ನು ಕರಗತ ಮಾಡಿಕೊಂಡು ರಾಷ್ಟ್ರೀಯ ತಂಡವನ್ನೂ ಪ್ರತಿನಿಧಿಸಿದ್ದ ನೀತೂಗೆ ಮೊದಲಿಂದಲೂ ಕ್ರೀಡಾಸಕ್ತಿ ಜಾಸ್ತಿ. ಆದರೆ ಆಕೆಗೆ ಬಾಲಿವುಡ್ಡಲ್ಲಿ ಬೇರೆ ಕ್ರೀಡೆಯ ಪಾತ್ರಗಳನ್ನು ನೀಡುವ ಕೀಡೇಗಳೇ ತುಂಬಿದೆಯಂತೆ. ಅಂಥವರನ್ನು ಛೀ ಥೂ ಎಂಜು ದೂರ ಇಟ್ಟಿರುವ ನೀತೂ ಇದೀಗ ಬಾಸ್ಕೆಟ್ ಬಾಲ್‌ಗೆ ಸಂಬಂಧಿಸಿದ ಚಿತ್ರವೊಂದನ್ನು ಮಾಡುವ ಆಸಕ್ತಿ ತೋರಿದ್ದಾಳೆ. ಸ್ವತಃ ಬಾಸ್ಕೆಟ್ ಬಾಲ್ ಸ್ಟೇಟ್‌ಲೆವೆಲ್ ಆಟಗಾರ್ತಿಯಾಗಿದ್ದ ನೀತೂಗೆ ಈ ಮೂಲಕ ಭಾರತದಲ್ಲಿ ಬಾಸ್ಕೆಟ್ ಬಾಲನ್ನು ಜನಪ್ರಿಯಗೊಳಿಸುವ ಇರಾದೆಯಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


