ಕನ್ನಡ ಗೊತ್ತಿದ್ರೆ ಸಾಕು ಸರ್ಕಾರಿ ಕೆಲಸ ಪಕ್ಕಾ! ಯಾವುದೇ ಪರೀಕ್ಷೆಯಿಲ್ಲದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉದ್ಯೋಗ
ಸರ್ಕಾರಿ ಕೆಲಸ ಹುಡುಕುತಿರುವವರಿಗೆ ಗುಡ್ ನ್ಯೂಸ್; ಬೆಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭರ್ಜರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ವಿದ್ಯಾರ್ಹತೆ ಆದ್ರೂ ಪರವಾಗಿಲ್ಲ, ಕನ್ನಡ ಗೊತ್ತಿದ್ರೆ ಕೆಲಸ ಪಕ್ಕ! ಇಲ್ಲಿದೆ ನೇಮಕಾತಿಯ ಕುರಿತ ವಿವರ:

ಬೆಂಗಳೂರು: ಸರ್ಕಾರಿ ಕೆಲಸ ಹುಡುಕುತಿರುವವರಿಗೆ ಗುಡ್ ನ್ಯೂಸ್; ಬೆಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭರ್ಜರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ವಿದ್ಯಾರ್ಹತೆ ಆದ್ರೂ ಪರವಾಗಿಲ್ಲ, ಕನ್ನಡ ಗೊತ್ತಿದ್ರೆ ಕೆಲಸ ಪಕ್ಕ! ಇಲ್ಲಿದೆ ನೇಮಕಾತಿಯ ಕುರಿತ ವಿವರ:
ಹುದ್ದೆಯ ವಿವರ:
ಒಟ್ಟು ಹುದ್ದೆಗಳು: 142
ಹುದ್ದೆಗಳ ಪ್ರಕಾರ: ಹೆಲ್ಪರ್ಸ್, ಕ್ಲೀನರ್ಸ್ ಮತ್ತು ಹೆಲ್ಪರ್ಸ್
ನೇಮಕಾತಿ ಸಂಸ್ಥೆ: ಜಿಲ್ಲಾ ನಗರಾಭಿವೃದ್ಧಿ ಕೋಶ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಾರ್ಯಾಲಯ
ಉದ್ಯೋಗ ಸ್ಥಳ:
ಮಾದನಾಯಕನಹಳ್ಳಿ ನಗರಸಭೆಯಲ್ಲಿ 62 ಹುದ್ದೆಗಳು
ಹೆಬ್ಬಗೋಡಿ ನಗರಸಭೆಯಲ್ಲಿ 80 ಹುದ್ದೆಗಳು
ಅರ್ಹತೆ:
ಶೈಕ್ಷಣಿಕ ಅರ್ಹತೆ: ಈ ಹುದ್ದೆಗಳಿಗೆ ಯಾವುದೇ ಶೈಕ್ಷಣಿಕ ವಿದ್ಯಾರ್ಹತೆಯ ಅಗತ್ಯವಿಲ್ಲ
ಭಾಷಾ ಜ್ಞಾನ: ಅಭ್ಯರ್ಥಿಗಳಿಗೆ ಕನ್ನಡ ಜ್ಞಾನ ಕಡ್ಡಾಯವಾಗಿ ಇರಬೇಕು
ಅನುಭವ: ಹೊರಗುತ್ತಿಗೆ, ದಿನಗೂಲಿ ಅಥವಾ ಗುತ್ತಿಗೆ ಆಧಾರದ ಮೇಲೆ UGD ಹೆಲ್ಪರ್, ಕ್ಲೀನರ್ ಅಥವಾ ಹೆಲ್ಪರ್ ಆಗಿ ಕನಿಷ್ಠ 1 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ವಯೋಮಿತಿ: ಅಭ್ಯರ್ಥಿಗಳ ವಯಸ್ಸು 18 ರಿಂದ 50 ವರ್ಷಗಳ ಒಳಗಿರಬೇಕು
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ: 22 ಜುಲೈ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21 ಆಗಸ್ಟ್ 2026

ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಅಭ್ಯರ್ಥಿಗಳು ಮಾದನಾಯಕನಹಳ್ಳಿ ಅಥವಾ ಹೆಬ್ಬಗೋಡಿ ನಗರಸಭೆ ಕಚೇರಿಗೆ ನೇರವಾಗಿ ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆದು, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ bengaluruurbandudc.mrc.gov.in ಗೆ ಭೇಟಿ ನೀಡಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




