ವೃತ್ತಿ & ಉದ್ಯೋಗ ಅವಕಾಶಗಳು

SSLC ಪಾಸಾದವರಿಗೆ ಗುಡ್ ನ್ಯೂಸ್; ಬೆಳಗಾವಿಯಲ್ಲಿ ಭರ್ಜರಿ ಬ್ಯಾಂಕ್ ಉದ್ಯೋಗವಕಾಶ, 104 ಹುದ್ದೆಗಳಿಗೆ BDCC ಬ್ಯಾಂಕ್ ಅರ್ಜಿ ಆಹ್ವಾನ

ಬ್ಯಾಂಕ್ ಉದ್ಯೋಗದ ಕನಸು ಕಾಣುತ್ತಿರುವ ಯುವಕರಿಗೆ ಅದರಲ್ಲೂ, ಉತ್ತರ ಕರ್ನಾಟಕದ ಯುವಕರಿಗೆ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತವು ಒಟ್ಟು 104 ಖಾಲಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಆ ಕುರಿತ ವರದಿ ಇಲ್ಲಿದೆ:

SSLC ಪಾಸಾದವರಿಗೆ ಗುಡ್ ನ್ಯೂಸ್; ಬೆಳಗಾವಿಯಲ್ಲಿ ಭರ್ಜರಿ ಬ್ಯಾಂಕ್ ಉದ್ಯೋಗವಕಾಶ, 104 ಹುದ್ದೆಗಳಿಗೆ BDCC ಬ್ಯಾಂಕ್ ಅರ್ಜಿ ಆಹ್ವಾನ
ಭರ್ಜರಿ ಬ್ಯಾಂಕ್ ಉದ್ಯೋಗವಕಾಶ — Online Desk
Published On :

Belagavi DCC Bank Recruitment 2026: ಬ್ಯಾಂಕ್ ಉದ್ಯೋಗದ ಕನಸು ಕಾಣುತ್ತಿರುವ ಯುವಕರಿಗೆ ಅದರಲ್ಲೂ, ಉತ್ತರ ಕರ್ನಾಟಕದ ಯುವಕರಿಗೆ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತವು (Belagavi DCC Bank) ಒಟ್ಟು 104 ಖಾಲಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. SSLC ಪಾಸಾದವರಿಂದ ಹಿಡಿದು, ಪದವೀಧರರವರೆಗೆ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಗರಿಷ್ಠ ವೇತನ ₹1,15,150 ರವರೆಗೆ ಇರಲಿದೆ. ಆ ಕುರಿತ ವರದಿ ಇಲ್ಲಿದೆ:

ಹುದ್ದೆಯ ವಿವರ:

  • ದ್ವಿತೀಯ ದರ್ಜೆ ಗುಮಾಸ್ತರು: 83 ಹುದ್ದೆಗಳು

  • ಬಂದೂಕುಧಾರಿ: 1

  • ಸಿಪಾಯಿ: 20

ಒಟ್ಟು: 104

ಅರ್ಹತೆ:

  • ದ್ವಿತೀಯ ದರ್ಜೆ ಗುಮಾಸ್ತರು: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ

  • ಬಂದೂಕುಧಾರಿ ಮತ್ತು ಸಿಪಾಯಿ: SSLC ಪಾಸಾಗಿದ್ದರೆ ಸಾಕು (ಗನ್‌ಮ್ಯಾನ್ ಹುದ್ದೆಗೆ ಮಾಜಿ ಸೈನಿಕರು ಹಾಗೂ ಗನ್ ಲೈಸೆನ್ಸ್ ಹೊಂದಿರುವವರಿಗೆ ಆದ್ಯತೆ)

ಎಲ್ಲಾ ಹುದ್ದೆಗಳಿಗೂ ಕನ್ನಡ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ಕಡ್ಡಾಯವಾಗಿ ತಿಳಿದಿರಬೇಕು.

ವಯೋಮಿತಿ:

ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ (ಸರ್ಕಾರಿ ನಿಯಮಾವಳಿಗಳ ಪ್ರಕಾರ SC/ST ಹಾಗೂ Cat-1ಗೆ 5 ವರ್ಷ, ಇತರೆ OBC ವರ್ಗಕ್ಕೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ).

ಸಂಬಳ:

  • ದ್ವಿತೀಯ ದರ್ಜೆ ಗುಮಾಸ್ತರು: ₹53,150 ರಿಂದ ₹1,15,150

  • ಬಂದೂಕುಧಾರಿ: ₹42,650 ರಿಂದ ₹96,650

  • ಸಿಪಾಯಿ: ₹47,650 ರಿಂದ ₹1,05,650

ಅರ್ಜಿ ಶುಲ್ಕ:

  • SC/ST ಹಾಗೂ Cat-1: ₹500

  • ಇತರೆ ವರ್ಗಕ್ಕೆ: ₹1000

ಪ್ರಮುಖ ದಿನಾಂಕ:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 27 ಜುಲೈ 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27 ಆಗಸ್ಟ್ 2026

  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: 27 ಆಗಸ್ಟ್ 2026

ನೇಮಕಾತಿ ಅಧಿಸೂಚನೆ ಲಿಂಕ್:

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.