KPSC ಇಂದ ಬಂಪರ್ ಉದ್ಯೋಗಾವಕಾಶ: ರಾಜ್ಯ ಲೆಕ್ಕಪರಿಶೋಧನೆ ಇಲಾಖೆಯ 83 ಗ್ರೂಪ್ ಎ, ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಎ ಮತ್ತು ಗ್ರೂಪ್ ಬಿ ದರ್ಜೆಯ ಒಟ್ಟು 83 ಹುದ್ದೆಗಳ ನೇರ ನೇಮಕಾತಿಗೆ KPSC ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ಸರ್ಕಾರಿ ಹುದ್ದೆಯ ಕನಸು ಹೊತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು (KPSC) ಭರ್ಜರಿ ಸಿಹಿಸುದ್ದಿ ನೀಡಿದೆ. ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಎ ಮತ್ತು ಗ್ರೂಪ್ ಬಿ ದರ್ಜೆಯ ಒಟ್ಟು 83 ಹುದ್ದೆಗಳ ನೇರ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪರೀಕ್ಷಾ ದಿನಾಂಕ, ಅರ್ಹತೆ ಮತ್ತು ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆಗಳ ವಿವರ:
ಒಟ್ಟು 83 ಹುದ್ದೆಗಳು
ಗ್ರೂಪ್ ‘ಎ’ - ಸಹಾಯಕ ನಿಯಂತ್ರಕರು (Assistant Controller - RPC): 15 ಹುದ್ದೆಗಳು
ಗ್ರೂಪ್ ‘ಬಿ’ - ಲೆಕ್ಕ ಪರಿಶೋಧನಾಧಿಕಾರಿ (Audit Officer): 68 ಹುದ್ದೆಗಳು
ಉಳಿಕೆ ಮೂಲ ವೃಂದ: 53 ಹುದ್ದೆಗಳು
ಕಲ್ಯಾಣ ಕರ್ನಾಟಕ ವೃಂದ: 13 ಹುದ್ದೆಗಳು
ಬ್ಯಾಕ್‌ಲಾಗ್ ಹುದ್ದೆಗಳು: 02 ಹುದ್ದೆಗಳು
ಅರ್ಹತೆ:
ಶೈಕ್ಷಣಿಕ ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ M.Com, M.B.A in Finance / Financial Management / Financial Analysis, ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸದಸ್ಯತ್ವ (CA) ಅಥವಾ ಅಸೋಸಿಯೇಟ್ ಮೆಂಬರ್ ಆಫ್ ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ. ಇದರೊಂದಿಗೆ, ಅಂತಿಮ ವರ್ಷ/ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವವರೂ ಸಹ ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರು (ಮುಖ್ಯ ಪರೀಕ್ಷೆಯ ವೇಳೆಗೆ ಉತ್ತೀರ್ಣರಾದ ಪ್ರಮಾಣಪತ್ರ ಒದಗಿಸಬೇಕು).
ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿಯು 40 ವರ್ಷ. ಜೊತೆಗೆ 2A, 2B, 3A, 3Bಗೆ ಮೂರು ವರ್ಷ ಹಾಗೂ SC / ST / Cat-1ಗೆ 5 ವರ್ಷಗಳ ಸಡಲಿಕೆ ಇದೆ.
ಸಂಬಳ:
ಸಹಾಯಕ ನಿಯಂತ್ರಕರು (ಗ್ರೂಪ್ ‘ಎ’): ₹83,700 – ₹1,55,200
ಲೆಕ್ಕ ಪರಿಶೋಧನಾಧಿಕಾರಿ (ಗ್ರೂಪ್ ‘ಬಿ’): ₹69,250 – ₹1,34,200
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 28-08-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26-09-2026
ಉಳಿಕೆ ಮೂಲ ವೃಂದ ಪೂರ್ವಭಾವಿ ಪರೀಕ್ಷಾ ಸಂಭಾವ್ಯ ದಿನಾಂಕ: 06-12-2026
ಕಲ್ಯಾಣ ಕರ್ನಾಟಕ ವೃಂದ ಪೂರ್ವಭಾವಿ ಪರೀಕ್ಷೆಯ ಸಂಭಾವ್ಯ ದಿನಾಂಕ: 29-11-2026
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಅಭ್ಯರ್ಥಿಗಳು KPSC ಯ ಅಧಿಕೃತ ಆನ್‌ಲೈನ್ ಪೋರ್ಟಲ್ https://kpsc.kar.nic.in/ ಗೆ ಭೇಟಿ ನೀಡಬೇಕು.
ನಿಮ್ಮ ಪ್ರೊಫೈಲ್ ರಚಿಸಲು ಮೊದಲು ಒನ್-ಟೈಮ್ ರಿಜಿಸ್ಟ್ರೇಷನ್ (OTR) ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ನಂತರ ಚಾಲ್ತಿಯಲ್ಲಿರುವ ಅಧಿಸೂಚನೆಗಳ ಪಟ್ಟಿಯಲ್ಲಿ "Assistant Controller & Audit Officer Recruitment" ಲಿಂಕ್ ಆಯ್ದುಕೊಂಡು, ಅಗತ್ಯ ದಾಖಲೆಗಳು, ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತೆ: ₹600/-, ಪ್ರವರ್ಗ 2A, 2B, 3A, 3B: ₹300/-, ಮಾಜಿ ಸೈನಿಕರು: ₹50/-, SC / ST / ಪ್ರವರ್ಗ-1 ಹಾಗೂ ಅಂಗವಿಕಲರು: ಶುಲ್ಕ ವಿನಾಯಿತಿ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




