ವಾಣಿಜ್ಯ

ಪಿನ್ ಇಲ್ಲದೆ ಸೆಕೆಂಡಿನಲ್ಲಿ ಪೇಮೆಂಟ್; ಬ್ಯಾಂಕ್ ಸರ್ವರ್ ಡೌನ್ ಆದರೂ ಟೆನ್ಷನ್ ಇಲ್ಲ: ಇದು UPI Lite ಮ್ಯಾಜಿಕ್!

ನಾವು ದಿನಾ 10 ರೂ, 20 ರೂ ಚಹಾ, ಆಟೋಗೆ UPI ಮಾಡುವಾಗ ಪಿನ್ ಹಾಕುವುದು, ಬ್ಯಾಂಕ್ ಸರ್ವರ್ ಬ್ಯುಸಿ ಎಂದು ಫೇಲ್ ಆಗುವುದು ಸಾಮಾನ್ಯ. ಈ ಸಮಸ್ಯೆಗೆ RBI ತಂದಿರುವ ಪರಿಹಾರವೇ UPI ಲೈಟ್.! ಪಿನ್ ಇಲ್ಲದೆ ಕ್ಷಣಾರ್ಧದಲ್ಲಿ ಹಣ ಪಾವತಿ; ಇಲ್ಲಿದೆ ಆ ಕುರಿತ ಕಂಪ್ಲೀಟ್ ಡಿಟೇಲ್ಸ್:

ಪಿನ್ ಇಲ್ಲದೆ ಸೆಕೆಂಡಿನಲ್ಲಿ ಪೇಮೆಂಟ್; ಬ್ಯಾಂಕ್ ಸರ್ವರ್ ಡೌನ್ ಆದರೂ ಟೆನ್ಷನ್ ಇಲ್ಲ: ಇದು UPI Lite ಮ್ಯಾಜಿಕ್!
ಯುಪಿಐ ಲೈಟ್ — AI Image
Published On :

UPI Lite: ಟೀ ಅಂಗಡಿಯಲ್ಲೋ ಅಥವಾ ತರಕಾರಿ ಅಂಗಡಿಯಲ್ಲೋ 10 -20 ರೂಪಾಯಿ ಪಾವತಿಸಲು QR ಕೋಡ್ ಸ್ಕ್ಯಾನ್ ಮಾಡಿ, ಬ್ಯಾಂಕ್ ಸರ್ವರ್ ಕೈಕೊಟ್ಟು ಕಾಯುವ ಪರಿಸ್ಥಿತಿ ಎಂದಾದರೂ ನಿಮಗಾಗಿದೆಯೇ? ಇಂತಹ ಕಿರಿಕಿರಿಯನ್ನು ತಪ್ಪಿಸಲು ಮತ್ತು ಸಣ್ಣ ಮೊತ್ತದ ಪಾವತಿಯನ್ನು ಕಣ್ಣುಮುಚ್ಚಿ ತೆರೆಯುವುದರೊಳಗೆ ಪೂರ್ಣಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ NPCI ಪರಿಚಯಿಸಿರುವುದೇ ಯುಪಿಐ ಲೈಟ್. ಯಾವುದೇ ಪಿನ್ ನಮೂದಿಸದೆ ಕ್ಷಣಾರ್ಧದಲ್ಲಿ ಹಣ ವರ್ಗಾವಣೆ ಮಾಡುವ ಈ ಅದ್ಭುತ ಸೌಲಭ್ಯದ ಕುರಿತ ಸಂಪೂರ್ಣ ವಿವರ ಇಲ್ಲಿದೆ...

UPI ಲೈಟ್ ಎಂದರೇನು?

UPI ಲೈಟ್ ಎನ್ನುವುದು ನಿಮ್ಮ UPI ಆ್ಯಪ್ ನಲ್ಲಿರುವ ಒಂದು ಚಿಕ್ಕ ವ್ಯಾಲೆಟ್. ಸಾಮಾನ್ಯ UPI ಪೇಮೆಂಟ್ ನೇರವಾಗಿ ಬ್ಯಾಂಕ್ ಖಾತೆಯಿಂದ ಹಣ ಕಟ್ ಆಗುತ್ತದೆ. ಆದರೆ UPI ಲೈಟ್ ನಲ್ಲಿ ನೀವು ಮೊದಲೇ ಸ್ವಲ್ಪ ಹಣವನ್ನು ಆ್ಯಡ್ ಮಾಡಿ ಇಟ್ಟುಕೊಳ್ಳುತ್ತೀರಿ. ನಂತರ ಪಾವತಿ ಮಾಡುವಾಗ ಹಣ ನಿಮ್ಮ ಬ್ಯಾಂಕ್ ಖಾತೆಯಿಂದಲ್ಲ, ಆ ವ್ಯಾಲೆಟ್ ನಿಂದ ಕಟ್ ಆಗುತ್ತದೆ. ಇದರಿಂದ ಪೇಮೆಂಟ್ ತುಂಬಾ ವೇಗವಾಗಿ ಆಗುತ್ತದೆ ಮತ್ತು ಪಿನ್ ಹಾಕುವ ಅಗತ್ಯವೂ ಇರುವುದಿಲ್ಲ.

UPI ಲೈಟ್ ನ ಹೊಸ ಲಿಮಿಟ್ ಎಷ್ಟು?

RBI ಇತ್ತೀಚೆಗೆ UPI ಲೈಟ್ ಲಿಮಿಟ್ ಹೆಚ್ಚಿಸಿದೆ. ಅದರಂತೆ,

  • ಒಂದು ಬಾರಿಗೆ ಗರಿಷ್ಠ ಪಾವತಿ: ರೂ. 1000

  • ಒಟ್ಟು ವ್ಯಾಲೆಟ್ ನಲ್ಲಿ ಇಡಬಹುದಾದ ಗರಿಷ್ಠ ಹಣ: ರೂ. 5000

  • ದಿನಕ್ಕೆ ಆ್ಯಡ್ ಮಾಡಬಹುದಾದ ಹಣ: ಸಾಮಾನ್ಯವಾಗಿ ರೂ. 4000 ವರೆಗೆ

ಅದರಲ್ಲೂ, 500 ರೂ ಒಳಗಿನ ಸಣ್ಣ ಪೇಮೆಂಟ್ ಗಳಿಗೆ ಇದು ಬೆಸ್ಟ್. ಪಿನ್ ಇಲ್ಲದೆ ಒಂದೇ ಕ್ಲಿಕ್ ನಲ್ಲಿ ಪೇಮೆಂಟ್ ಆಗುತ್ತದೆ.

UPI ಲೈಟ್ ಅನ್ನು ಹೇಗೆ ಬಳಸುವುದು?

  • ಇದು ಬಹುತೇಕ ಎಲ್ಲಾ ಆ್ಯಪ್ ಗಳಲ್ಲಿ ಲಭ್ಯವಿದೆ - PhonePe, Google Pay, Paytm, BHIM.

  • ನಿಮ್ಮ UPI ಆ್ಯಪ್ ಓಪನ್ ಮಾಡಿ.

  • ಅಲ್ಲಿ UPI Lite ಆಯ್ಕೆಯನ್ನು ಹುಡುಕಿ Enable ಮಾಡಿ.

  • ನಿಮ್ಮ ಬ್ಯಾಂಕ್ ಖಾತೆಯಿಂದ ವ್ಯಾಲೆಟ್ ಗೆ ಹಣ ಆ್ಯಡ್ ಮಾಡಿ.

ಉದಾಹರಣೆಗೆ 1000 ರೂ.ಈಗ ಅಂಗಡಿಯಲ್ಲಿ QR ಕೋಡ್ ಸ್ಕ್ಯಾನ್ ಮಾಡಿದಾಗ ಪಾವತಿ ಮಾಡಲು UPI Lite ಆಯ್ಕೆ ಬರುತ್ತದೆ. ಅದನ್ನು ಆಯ್ಕೆ ಮಾಡಿದರೆ ಪಿನ್ ಕೇಳದೆ ತಕ್ಷಣ ಪೇಮೆಂಟ್ ಆಗುತ್ತದೆ. ಅದರಲ್ಲೂ, ಇದು ಇಂಟರ್ನೆಟ್ ಸ್ಲೋ ಇದ್ದಾಗಲೂ ವೇಗವಾಗಿ ಕೆಲಸ ಮಾಡುತ್ತದೆ ಮತ್ತು ಬ್ಯಾಂಕ್ ಸರ್ವರ್ ಲೋಡ್ ಕಡಿಮೆ ಮಾಡುತ್ತದೆ.

ಯಾರಿಗೆ ಇದು ಹೆಚ್ಚು ಉಪಯುಕ್ತ?

ದಿನಕ್ಕೆ ಸಣ್ಣ ಸಣ್ಣ ಪಾವತಿಗಳನ್ನು ಜಾಸ್ತಿ ಮಾಡುವವರು, ಆಟೋ, ಬಸ್, ಟೀ ಅಂಗಡಿ, ಕಿರಾಣಿ ಅಂಗಡಿಯಲ್ಲಿ ಪದೇ ಪದೇ UPI ಮಾಡುವವರಿಗೆ UPI ಲೈಟ್ ತುಂಬಾ ಉಪಯುಕ್ತ. ಪಿನ್ ಬೇರೆಯವರಿಗೆ ಕಾಣುವ ಭಯವೂ ಇರುವುದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.