Petrol-Diesel ಬೆಲೆ ಏರಿಕೆ; ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 106.17 ರೂ; ದೇಶದ ಮೆಟ್ರೊ ಸಿಟಿಗಳಲ್ಲಿ ನೂತನ ದರ ಹೀಗಿದೆ...
ಈ ದರ ಏರಿಕೆಯಿಂದ ಕೆಲವು ನಗರಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 3 ರೂಪಾಯಿಯಿಂದ 3 ರೂಪಾಯಿ 46ರವರೆಗೆ ಏರಿಕೆಯಾದರೆ, ಡೀಸೆಲ್ ದರವು ಪ್ರದೇಶಾನುಸಾರ 3 ರೂಪಾಯಿಯಿಂದ 3 ರೂಪಾಯಿ 56 ಪೈಸೆಯವರೆಗೆ ಹೆಚ್ಚಾಗಿದೆ.

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಪರಿಣಾಮ ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ಪೂರೈಕೆ ಸಂಕಷ್ಟದ ನಡುವೆಯೇ ಕೇಂದ್ರ ಸರ್ಕಾರ ಇಂದು ಶುಕ್ರವಾರ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಹೆಚ್ಚಿಸಿದೆ.
ಈ ದರ ಏರಿಕೆಯಿಂದ ಕೆಲವು ನಗರಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 3 ರೂಪಾಯಿಯಿಂದ 3 ರೂಪಾಯಿ 46ರವರೆಗೆ ಏರಿಕೆಯಾದರೆ, ಡೀಸೆಲ್ ದರವು ಪ್ರದೇಶಾನುಸಾರ 3 ರೂಪಾಯಿಯಿಂದ 3 ರೂಪಾಯಿ 56 ಪೈಸೆಯವರೆಗೆ ಹೆಚ್ಚಾಗಿದೆ.
ಉತ್ಪಾದನಾ ವೆಚ್ಚ ಏರಿಕೆಯಿಂದ ಸರ್ಕಾರಿ ತೈಲ ಕಂಪನಿಗಳು ಭಾರೀ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ದರ ಪರಿಷ್ಕರಣೆ ಮಾಡಲಾಗಿದೆ. 2022ರ ಮೇ ತಿಂಗಳಿನಿಂದ ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಇದ್ದರೂ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಬಹುತೇಕ ಸ್ಥಿರವಾಗಿದ್ದವು. ಇದೀಗ ಇದೇ ಮೊದಲ ದೊಡ್ಡ ಮಟ್ಟದ ದರ ಏರಿಕೆಯಾಗಿದೆ.
ಕರ್ನಾಟಕ ರಾಜಧಾನಿ ಬೆಂಗಳೂರು ನಿವಾಸಿಗಳು ಪ್ರತಿ ಲೀಟರ್ ಪೆಟ್ರೋಲ್ಗೆ 3 ರೂಪಾಯಿ 21 ಪೈಸೆ ಹೆಚ್ಚುವರಿ ಪಾವತಿಸಬೇಕಾಗುತ್ತದೆ. ಡೀಸೆಲ್ ದರ 3 ರೂಪಾಯಿ 11 ಪೈಸೆ ಏರಿಕೆಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಹೊಸ ದರಗಳು ಕ್ರಮವಾಗಿ 106.17 ರೂಪಾಯಿ ಮತ್ತು 94.10 ರೂಪಾಯಿ ಆಗಿವೆ.
ಮುಂಬೈನಲ್ಲಿ ಪೆಟ್ರೋಲ್ ದರ 3.10 ರೂಪಾಯಿ ಏರಿಕೆಯಾಗಿದ್ದು, ಲೀಟರ್ಗೆ 106.64 ರೂಪಾಯಿಗೆ ತಲುಪಿದೆ. ಡೀಸೆಲ್ ದರ 3.11 ರೂಪಾಯಿ ಹೆಚ್ಚಾಗಿ ಲೀಟರ್ಗೆ 93.14 ರೂಪಾಯಿ ಆಗಿದೆ.
ಭಾರತದ ವಿವಿಧ ನಗರಗಳಲ್ಲಿನ ಹೊಸ ಪೆಟ್ರೋಲ್ ದರ ಹೀಗಿವೆ...

ಭಾರತದ ವಿವಿಧ ನಗರಗಳಲ್ಲಿನ ಹೊಸ ಡೀಸೆಲ್ ದರಗಳು ಹೀಗಿವೆ...

ದರ ಏರಿಕೆಯ ನಂತರ, ದೇಶದಲ್ಲಿ ಹೈದರಾಬಾದ್ ನಿವಾಸಿಗಳು ಒಂದು ಲೀಟರ್ ಪೆಟ್ರೋಲ್ಗೆ ಅತಿ ಹೆಚ್ಚು 110.89 ರೂಪಾಯಿ ಪಾವತಿಸಬೇಕಾಗಿದೆ. ಈ ನಗರದಲ್ಲಿ ಪೆಟ್ರೋಲ್ ದರವು 3.39 ರೂಪಾಯಿ ಏರಿಕೆಯಾಗಿದೆ. ತಿರುವನಂತಪುರಂನಲ್ಲಿ ಲೀಟರ್ಗೆ 110.75 ರೂಪಾಯಿ ದರದೊಂದಿಗೆ ಎರಡನೇ ಸ್ಥಾನದಲ್ಲಿದೆ.
ಚಂಡೀಗಢದಲ್ಲಿ ಪೆಟ್ರೋಲ್ ದರ ದೇಶದಲ್ಲಿ ಅತಿ ಕಡಿಮೆಯಾಗಿದ್ದು, ಲೀಟರ್ಗೆ 2.97 ರೂಪಾಯಿ ಏರಿಕೆಯಾದರೂ ಹೊಸ ದರ 97.27 ರೂಪಾಯಿ ಆಗಿದೆ. ಲಕ್ನೋ ಮತ್ತು ನೋಯ್ಡಾದಲ್ಲೂ ಪೆಟ್ರೋಲ್ ದರಗಳು ಇತರ ದೊಡ್ಡ ನಗರಗಳಿಗಿಂತ ಕಡಿಮೆಯೇ ಉಳಿದಿದ್ದು, ಕ್ರಮವಾಗಿ 97.58 ರೂಪಾಯಿ ಮತ್ತು 98.04 ರೂಪಾಯಿ ಪ್ರತಿ ಲೀಟರ್ಗೆ ನಿಗದಿಯಾಗಿದೆ.
ಡೀಸೆಲ್ ವಿಚಾರದಲ್ಲಿ, ತಿರುವನಂತಪುರಂ ನಿವಾಸಿಗಳು 3.37 ರೂಪಾಯಿ ಏರಿಕೆ ನಂತರ ಪ್ರತಿ ಲೀಟರ್ಗೆ 99.63 ರೂಪಾಯಿ ಪಾವತಿಸಬೇಕಾಗಿದೆ. ಹೈದರಾಬಾದ್ನಲ್ಲಿ ಡೀಸೆಲ್ ದರ ಲೀಟರ್ಗೆ 98.96 ರೂಪಾಯಿ ಆಗಿದೆ.
ಪ್ರಮುಖ ನಗರಗಳಲ್ಲಿ ಚಂಡೀಗಢದಲ್ಲೇ ಡೀಸೆಲ್ ದರ ಅತಿ ಕಡಿಮೆಯಾಗಿದ್ದು, 2.80 ರೂಪಾಯಿ ಏರಿಕೆ ನಂತರ ಹೊಸ ದರ ಲೀಟರ್ಗೆ 85.25 ರೂಪಾಯಿ ಆಗಿದೆ. ದೆಹಲಿಯಲ್ಲಿ ಡೀಸೆಲ್ ದರ ಬೇರೆ ನಗರಗಳಿಗೆ ಹೋಲಿಸಿದರೆ ಕಡಿಮೆಯಾಗಿದ್ದು, ಲೀಟರ್ಗೆ 90.67 ರೂಪಾಯಿ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



