ಬ್ಯಾಂಕ್, ಲೋನ್, ಇನ್ಸೂರೆನ್ಸ್ ಅಂತ ಎಲ್ಲೋದ್ರು KYC ಟೆನ್ಶನ್? ಅದಕ್ಕೆ ಸರ್ಕಾರ ತಂದಿದೆ CKYC; ಎಲ್ಲಿ ಹೋದ್ರು ಇದೊಂದೇ ನಂಬರ್ ಸಾಕು!
KYC ಬದಲು ಕೇಂದ್ರ ಸರ್ಕಾರವು ಹಣಕಾಸು ವಲಯದಲ್ಲಿ ಕೇಂದ್ರೀಕೃತ ಮತ್ತು ಏಕಕಾಲದ KYC ವ್ಯವಸ್ಥೆಯಾಗಿ CKYC ಜಾರಿಗೆ ತಂದಿದೆ. ಆ ಕುರಿತ ವರದಿ ಇಲ್ಲಿದೆ:

ಇವತ್ತೆಲ್ಲಾ ಬ್ಯಾಂಕ್ ಅಕೌಂಟ್ ಓಪನ್ ಮಾಡಬೇಕು ಅಂದ್ರೆ KYC, ಲೋನ್ ತಗೋಬೇಕು ಅಂದ್ರೂ KYC, ಇನ್ಸೂರೆನ್ಸ್ ತಗೋಬೇಕು ಅಂದ್ರೂ KYC, ಡಿಮ್ಯಾಟ್ ಅಕೌಂಟ್ ಓಪನ್ ಮಾಡಬೇಕು ಅಂದ್ರೆ ಮತ್ತೊಮ್ಮೆ KYC. ಹೀಗೆ ಯಾವುದೇ ಹಣಕಾಸಿನ ಚಟುವಟಿಕೆಗಳಿಗೆ KYC ಎಂಬುದು ಕಡ್ಡಾಯ; ಹೀಗೆ ಪ್ರತಿ ಬಾರಿಯೂ KYC ಗಾಗಿ ದಾಖಲೆಗಳನ್ನು ಇಟ್ಕೊಂಡು ಅಳಿದು ಸುಸ್ತಾಗಿದೀಯಾ? ಹಾಗಾದ್ರೆ, ಇಲ್ಲಿದೆ ನಿಮಗೆ ಗುಡ್ ನ್ಯೂಸ್?
ಹೌದು, ಕೇಂದ್ರ ಸರ್ಕಾರವು ಹಣಕಾಸು ವಲಯದಲ್ಲಿ ಕೇಂದ್ರೀಕೃತ ಮತ್ತು ಏಕಕಾಲದ KYC ವ್ಯವಸ್ಥೆಯಾಗಿ CKYC ಜಾರಿಗೆ ತಂದಿದೆ. ಆ ಕುರಿತ ವರದಿ ಇಲ್ಲಿದೆ:
ಮೊದಲಿಗೆ KYC ಅಂದ್ರೇನು?
KYC ಎಂದರೆ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ ಅರ್ಥಾತ್ Know Your Customer ಎಂದರ್ಥ. ಇದು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಗ್ರಾಹಕರ ಗುರುತು ಮತ್ತು ವಿಳಾಸವನ್ನು ಖಚಿತಪಡಿಸಿಕೊಳ್ಳಲು ಬಳಸುವ ಕಡ್ಡಾಯ ಪರಿಶೀಲನಾ ಪ್ರಕ್ರಿಯೆಯಾಗಿದೆ. ಈ ಮೂಲಕ ವಂಚನೆ, ಕಪ್ಪು ಹಣ ವರ್ಗಾವಣೆ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವುದಾಗಿದೆ.
ಇನ್ನು. KYC ಯನ್ನು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಚಾಲನಾ ಪರವಾನಗಿ ಮೂಲಕ 3 ವಿಧಾನದಲ್ಲಿ ದೃಢ ಪಡಿಸಲಾಗುತ್ತದೆ. ಅದರಂತೆ, ನೇರ ಭೇಟಿ, ಆನ್‌ಲೈನ್ ಅಥವಾ ವಿಡಿಯೋ ಕೆವೈಸಿ ಮೂಲಕ ಇದನ್ನು ಪೂರ್ಣಗೊಳಿಸಬಹುದು. ಹಾಗಾದ್ರೆ, ಏನಿದು CKYC?
CKYC ಅಂದ್ರೆ,
Central Know Your Customer ಅರ್ಥಾತ್ 14 ನಂಬರ್ನ ಕೇಂದ್ರೀಯ ಗುರುತಿನ ಪರಿಶೀಲನೆಯಾಗಿದ್ದು, ಭಾರತ ಸರ್ಕಾರವು ಕೇಂದ್ರೀಕೃತ ಮತ್ತು ಏಕಕಾಲದ KYC ವ್ಯವಸ್ಥೆಯಾಗಿ ಹಣಕಾಸು ವಲಯದಲ್ಲಿ ಜಾರಿಗೆ ತಂದಿದೆ.
ಸರಳವಾಗಿ ಹೇಳುವುದಾದರೆ, ನೀವು ಯಾವುದೇ ಬ್ಯಾಂಕ್ ಖಾತೆ ತೆರೆಯಲು, ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಅಥವಾ ಇನ್ಸೂರೆನ್ಸ್ ಖರೀದಿಸಲು ಪ್ರತಿ ಬಾರಿಯೂ ಪ್ರತ್ಯೇಕವಾಗಿ ಆಧಾರ್, ಪ್ಯಾನ್ ಕಾರ್ಡ್ ಮುಂತಾದ ದಾಖಲೆಗಳನ್ನು ನೀಡಿ KYC ಮಾಡುವ ಅಗತ್ಯವಿರುವುದಿಲ್ಲ. ಒಮ್ಮೆ CKYC ಪೂರ್ಣಗೊಂಡರೆ, ಆ ವಿವರಗಳನ್ನು ಕೇಂದ್ರ ಡೇಟಾಬೇಸ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ.
ಮುಂದೆ, ಹೊಸದಾಗಿ ಡಿಮ್ಯಾಟ್ ಖಾತೆ, ಸಾಲ ಅಥವಾ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ಪ್ರತಿ ಬಾರಿಯೂ ಜೆರಾಕ್ಸ್ ಪ್ರತಿಗಳನ್ನು ಕೊಡುವ ಅಗತ್ಯವಿಲ್ಲ. ಅದರ ಬದಲಾಗಿ, ಕೇವಲ ನಿಮ್ಮ 14-ನಂಬರ್ನ CKYC ಸಂಖ್ಯೆ ನೀಡಿದರೆ ಸಾಕು. ಹಣಕಾಸು ಸಂಸ್ಥೆಗಳು ನಿಮ್ಮ ನಂಬರ್ ಬಳಸಿ ತಕ್ಷಣವೇ ವಿವರಗಳನ್ನು ಆನ್‌ಲೈನ್ ಮೂಲಕ ಪಡೆದುಕೊಳ್ಳುವುದರಿಂದ ನಿಮ್ಮ ಕೆಲಸಗಳು ವೇಗವಾಗಿ ಮುಗಿಯುತ್ತವೆ. ಅದರಲ್ಲೂ, ನಿಮ್ಮ ವಿಳಾಸ ಅಥವಾ ಮೊಬೈಲ್ ಸಂಖ್ಯೆ ಬದಲಾದರೆ, ಯಾವುದಾದರೂ ಒಂದು ಬ್ಯಾಂಕ್‌ನಲ್ಲಿ ಅಪ್‌ಡೇಟ್ ಮಾಡಿದರೆ ಸಾಕು, ಅದು CKYC ಡೇಟಾಬೇಸ್ ಮೂಲಕ ಎಲ್ಲಾ ಸಂಸ್ಥೆಗಳಿಗೂ ತಾನಾಗಿಯೇ ಅಪ್‌ಡೇಟ್ ಆಗುತ್ತದೆ.
ಹಾಗಾದ್ರೆ, ನಿಮ್ಮ CKYC ಸಂಖ್ಯೆಯನ್ನು ಪರಿಶೀಲಿಸುವುದು ಹೇಗೆ?
ವೆಬ್‌ಸೈಟ್ ಮೂಲಕ: ನೀವು ಹೂಡಿಕೆ ಮಾಡಿರುವ ಮ್ಯೂಚುಯಲ್ ಫಂಡ್ ವೆಬ್‌ಸೈಟ್‌ಗಳು ಅಥವಾ ಫಿಂಟೆಕ್ ನಂತಹ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ, ನಿಮ್ಮ ಪ್ಯಾನ್ ನಂಬರ್ ಹಾಕಿ CKYC ಸ್ಟೇಟಸ್ ಮತ್ತು ಸಂಖ್ಯೆಯನ್ನು ಪರಿಶೀಲಿಸಬಹುದು.
ಮಿಸ್ಡ್ ಕಾಲ್ ಸೌಲಭ್ಯ: ಸೆಂಟ್ರಲ್ ರಿಜಿಸ್ಟ್ರಿಯ ಅಧಿಕೃತ ಸಂಖ್ಯೆ 7799022129 ಕ್ಕೆ ಮಿಸ್ಡ್ ಕಾಲ್ ನೀಡುವ ಮೂಲಕವೂ ನಿಮ್ಮ CKYC ವಿವರಗಳನ್ನು ಮೊಬೈಲ್‌ಗೆ ಪಡೆಯಬಹುದು.
ಡಿಜಿಲಾಕರ್: ನಿಮ್ಮ ಪರಿಶೀಲಿಸಿದ CKYC ಕಾರ್ಡ್ ಅನ್ನು ಡಿಜಿಲಾಕರ್ ಆಪ್ ಮೂಲಕವೂ ಡೌನ್‌ಲೋಡ್ ಮಾಡಿಕೊಳ್ಳಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




