Airtel ಗ್ರಾಹಕರಿಗೆ ಬಿಗ್ ಶಾಕ್! Unlimited 5G ನಿಯಮದಲ್ಲಿ ಭಾರಿ ಬದಲಾವಣೆ; ತಿಂಗಳಿಗೆ ಇದಕ್ಕಿಂತ ಜಾಸ್ತಿ ಇಂಟರ್ನೆಟ್ ಇಲ್ಲ!
ಏರ್‌ಟೆಲ್ ತನ್ನ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದೆ. ತನ್ನ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ನೀಡಲಾಗುತ್ತಿದ್ದ ಅನ್‌ಲಿಮಿಟೆಡ್ 5G ಡೇಟಾ ನಿಯಮಗಳಲ್ಲಿ ಕಂಪನಿಯು ಭಾರಿ ಬದಲಾವಣೆ ತಂದಿದೆ. ಆ ಕುರಿತ ವರದಿ ಇಲ್ಲಿದೆ:

klmk.ನವದೆಹಲಿ: ಭಾರತೀಯ ಟೆಲಿಕಾಂ (Telecom) ವಲಯದ ದೈತ್ಯ ಸಂಸ್ಥೆ ಭಾರ್ತಿ ಏರ್‌ಟೆಲ್ (Bharthi Airtel) ತನ್ನ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದೆ. ಹೌದು, ತನ್ನ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ನೀಡಲಾಗುತ್ತಿದ್ದ ಅನ್‌ಲಿಮಿಟೆಡ್ 5G ಡೇಟಾ (Unlimited 5G Data) ನಿಯಮಗಳಲ್ಲಿ ಕಂಪನಿಯು ಭಾರಿ ಬದಲಾವಣೆ ತಂದಿದೆ. ಇನ್ಮುಂದೆ ಹೀಗೆ ಇಂಟರ್ನೆಟ್ ಬಳಸುವ ಗ್ರಾಹಕರಿಗೆ ಉಚಿತ 5G ಇಂಟರ್ನೆಟ್ ಕ್ಯಾನ್ಸಲ್ (Free 5G Internet Cancel) ಮಾಡಿದೆ.!
ಏನದು ಏರ್‌ಟೆಲ್ 5G ಹೊಸ ನಿಯಮ?
ಏರ್‌ಟೆಲ್ ತನ್ನ ಅಧಿಕೃತ ನಿಯಮಗಳನ್ನು ಭಾರಿ ಬದಲಾವಣೆ ತಂದಿದೆ. ಅದ್ರಂತೆ, ಅನ್‌ಲಿಮಿಟೆಡ್ 5G ಇಂಟರ್ನೆಟ್ ಸೌಲಭ್ಯವನ್ನು ಕೇವಲ ಸಿಮ್ ಹಾಕಿರುವ ಪ್ರಾಥಮಿಕ 5G ಸ್ಮಾರ್ಟ್‌ಫೋನ್‌ಗೆ ಮಾತ್ರ ಸೀಮಿತಗೊಳಿಸಿದೆ. ಒಂದು ವೇಳೆ ಗ್ರಾಹಕರು ಹಾಟ್‌ಸ್ಪಾಟ್ ಆನ್ ಮಾಡಿ ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಅಥವಾ ಇತರ ಫೋನ್‌ಗಳಿಗೆ ಕನೆಕ್ಟ್ ಮಾಡಿದರೆ, ಆ ಡಿವೈಸ್‌ಗಳಲ್ಲಿ ಬಳಸುವ ಡೇಟಾವನ್ನು ಗ್ರಾಹಕರ ದೈನಂದಿನ 5G ಕೋಟಾದಿಂದಲೇ ಉದಾಹರಣೆಗೆ ದಿನಕ್ಕೆ 2GB ಅಥವಾ 2.5GB ದಿಂದಲೇ ಕಟ್ ಮಾಡಲಾಗುತ್ತದೆ.
ತಿಂಗಳಿಗೆ 300GB ಲಿಮಿಟ್!
ಹಾಟ್‌ಸ್ಪಾಟ್ ನಿಷೇಧದ ಜೊತೆಗೆ, ಏರ್‌ಟೆಲ್ ವೈಯಕ್ತಿಕ ಬಳಕೆಯ ಹೆಸರಿನಲ್ಲಿ ತಿಂಗಳಿಗೆ ಗರಿಷ್ಠ 300GB ವರೆಗೆ ಮಾತ್ರ 5G ಡೇಟಾ ಬಳಸಲು ಮಿತಿ ವಿಧಿಸಿದೆ. ಅದಕ್ಕಿಂತ ಹೆಚ್ಚು ಬಳಸಿದರೆ ಅದನ್ನು ವಾಣಿಜ್ಯ ಬಳಕೆ ಎಂದು ಪರಿಗಣಿಸಲಾಗುತ್ತದೆ ಎನ್ನಲಾಗಿದ್ದು, ಆ ವೇಳೆ ಇಂಟರ್ನೆಟ್ ಸ್ಲೋ ಆಗಿ ವರ್ಕ್ ಆಗುವ ಸಾಧ್ಯತೆ ಇದೆ. ಕೆಲವು ಸಂದರ್ಭದಲ್ಲಿ ಇಂಟರ್ನೆಟ್ ವರ್ಕ್ ಆಗದೆಯೂ ಇರಬಹುದು!
ಈ ಕಠಿಣ ನಿರ್ಧಾರಕ್ಕೆ ಕಾರಣವೇನು?
ಹಲವಾರು ಗ್ರಾಹಕರು ತಮ್ಮ ಮೊಬೈಲ್ ಹಾಟ್‌ಸ್ಪಾಟ್ ಅನ್ನು ಹೋಮ್ ಬ್ರಾಡ್‌ಬ್ಯಾಂಡ್ ಅಥವಾ ವೈ-ಫೈ ತರಹ ಬಳಸಿ ಇಡೀ ಮನೆಯ ಎಲ್ಲಾ ಡಿವೈಸ್‌ಗಳಿಗೆ ಅನ್‌ಲಿಮಿಟೆಡ್ ಇಂಟರ್ನೆಟ್ ಹಂಚಿಕೊಳ್ಳುತ್ತಿದ್ದರು. ಇದರಿಂದ ನೆಟ್‌ವರ್ಕ್ ದಟ್ಟಣೆ ಹೆಚ್ಚಾಗಿ, ಇತರ ಸಾಮಾನ್ಯ ಗ್ರಾಹಕರಿಗೆ ಇಂಟರ್ನೆಟ್ ವೇಗ ಕಡಿಮೆಯಾಗುತ್ತಿತ್ತು. ಈ ವಾಣಿಜ್ಯ ಮಾದರಿಯ ಬಳಕೆಯನ್ನು ತಡೆಯಲು ಮತ್ತು ನೆಟ್‌ವರ್ಕ್ ಗುಣಮಟ್ಟವನ್ನು ಕಾಯ್ದುಕೊಳ್ಳಲು ಏರ್‌ಟೆಲ್ ಈ ಕಠಿಣ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಜಿಯೋ ಕಥೆ ಏನು?
ಈ ಮಧ್ಯೆ, ಏರ್‌ಟೆಲ್ ಪ್ರತಿಸ್ಪರ್ಧಿಯಾಗಿರುವ ಜಿಯೋ ಇಂದಿಗೂ ತನ್ನ ಗ್ರಾಹಕರಿಗೆ ಯಾವುದೇ ಅಧಿಕೃತ ಮಿತಿಯಿಲ್ಲದೆ ಹಾಟ್‌ಸ್ಪಾಟ್ ಮೂಲಕವೂ ಅನ್‌ಲಿಮಿಟೆಡ್ 5G ಡೇಟಾ ಹಂಚಿಕೊಳ್ಳಲು ಮುಕ್ತ ಅವಕಾಶ ನೀಡಿದೆ. ಆದರೆ ಏರ್‌ಟೆಲ್ ಜಾರಿಗೆ ತಂದಿರುವ ಈ ಹೊಸ ನಿಯಮವು ತನ್ನ ಫೋನ್ ಅನ್ನೇ ವೈ-ಫೈ ರೂಟರ್ ಆಗಿ ಬಳಸಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ದೊಡ್ಡ ಆಘಾತವನ್ನುಂಟುಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




