SBI ಗ್ರಾಹಕರಿಗೆ ಬಿಗ್ ಶಾಕ್! ಹಣ ವಿತ್‌ಡ್ರಾ ನಿಯಮಗಳಲ್ಲಿ ಭಾರಿ ಬದಲಾವಣೆ; ಹೊಸ ಶುಲ್ಕ ಎಷ್ಟು ಗೊತ್ತಾ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆದಾರರ ಗಮನಕ್ಕೆ: ಎಸ್‌ಬಿಐನಿಂದ ಜಾರಿಯಾಗಲಿದೆ ಹೊಸ ಕ್ಯಾಶ್ ವಿತ್ ಡ್ರಾ ನಿಯಮ; ತಿಂಗಳಿಗೆ 4 ಬಾರಿಗಿಂತ ಹೆಚ್ಚು ಹಣ ತೆಗೆದರೆ ಬೀಳುತ್ತೆ ಚಾರ್ಜ್! ಹೊಸ ನಿಯಮ ಜಾರಿ!

ಮುಂಬೈ (ಮಹಾರಾಷ್ಟ್ರ): SBI ಗ್ರಾಹಕರಿಗೆ ಶಾಕ್ ! ಬ್ಯಾಂಕ್‌ನಿಂದ ಆಗಾಗ್ಗೆ ಹಣವನ್ನು ವಿತ್‌ಡ್ರಾ ಮಾಡುವ ಅಭ್ಯಾಸ ನಿಮ್ಮದಾಗಿದ್ದರೆ, ಇನ್ಮುಂದೆ ನೀವು ಸ್ವಲ್ಪ ಎಚ್ಚರ ವಹಿಸಲೇಬೇಕು. ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆದಾರರಿಗೆ ನಗದು ಹಿಂಪಡೆಯುವಿಕೆ ಸೇವಾ ಶುಲ್ಕಗಳಲ್ಲಿ ಎಸ್‌ಬಿಐ ಹೊಸ ನಿಯಮಗಳನ್ನು ತಂದಿದೆ. ಇನ್ಮುಂದೆ ತಿಂಗಳಿಗೆ ನಿಗದಿತ ಮಿತಿಗಿಂತ ಹೆಚ್ಚು ಬಾರಿ ಹಣ ಡ್ರಾ ಮಾಡಿದರೆ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಹಾಗಾದರೆ ಬ್ಯಾಂಕ್ ನಿಗದಿಪಡಿಸಿರುವ ಉಚಿತ ಮಿತಿ ಎಷ್ಟು ಮತ್ತು ಹೆಚ್ಚುವರಿ ವಹಿವಾಟಿಗೆ ನೀವು ಎಷ್ಟು ಶುಲ್ಕ ಪಾವತಿಸಬೇಕಾಗುತ್ತದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಹೌದು, ಭಾರತದ ಅತಿ ದೊಡ್ಡ ಮತ್ತು ಅತ್ಯಂತ ವಿಶ್ವಾಸಾರ್ಹ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್ (BSBD) ಖಾತೆದಾರರಿಗೆ ನಗದು ಹಿಂಪಡೆಯುವಿಕೆಯ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ಈ ಹೊಸ ನಿಯಮಗಳು 2026ರ ಅಕ್ಟೋಬರ್ 1 ರಿಂದ ಜಾರಿಗೆ ಬರಲಿವೆ.
4 ಉಚಿತ ವಹಿವಾಟುಗಳು:
ಎಸ್‌ಬಿಐ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ ಖಾತೆ (BSBD) ಖಾತೆದಾರರಿಗೆ ತಿಂಗಳಿಗೆ ಮೊದಲ 4 ನಗದು ಹಿಂಪಡೆಯುವಿಕೆಗಳು ಉಚಿತವಾಗಿರುತ್ತವೆ. ಇದು ಎಸ್‌ಬಿಐ ಎಟಿಎಂ, ಇತರ ಬ್ಯಾಂಕ್ ಎಟಿಎಂ ಹಾಗೂ ಬ್ಯಾಂಕ್ ಶಾಖೆಗಳೂ ಸೇರಿದಂತೆ ಎಲ್ಲಾ ನಗದು ವಹಿವಾಟುಗಳಿಗೆ ಅನ್ವಯಿಸುತ್ತದೆ. ಅದರಂತೆ, ತಿಂಗಳಿಗೆ 4 ಬಾರಿಗಿಂತ ಹೆಚ್ಚು ಅಂದರೆ 5ನೇ ಬಾರಿ ಅಥವಾ ಅದಕ್ಕಿಂತ ಹೆಚ್ಚು ಬಾರಿ ನಗದು ಹಿಂಪಡೆದರೆ ಪ್ರತಿ ವಹಿವಾಟಿಗೆ ₹15 ಮತ್ತು ಜಿಎಸ್‌ಟಿ ಶುಲ್ಕ ವಿಧಿಸಲಾಗುತ್ತದೆ. ಏತನ್ಮಧ್ಯೆ, ಈ ಮೊದಲು ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (AePS) ಮೂಲಕ ಮಾಡುವ ನಗದು ಹಿಂಪಡೆಯುವಿಕೆಯನ್ನು ಉಚಿತ ವಹಿವಾಟಿನ ಲೆಕ್ಕಕ್ಕೆ ಸೇರಿಸುತ್ತಿರಲಿಲ್ಲ. ಆದರೆ ಅಕ್ಟೋಬರ್ 1 ರಿಂದ AePS ನಗದು ವಹಿವಾಟುಗಳನ್ನೂ ಸಹ ಈ 4 ಉಚಿತ ವಹಿವಾಟುಗಳ ಮಿತಿಯೊಳಗೆ ಪರಿಗಣಿಸಲಾಗುತ್ತದೆ.
ಡಿಜಿಟಲ್ ವಹಿವಾಟುಗಳು..
UPI, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, NEFT ಮತ್ತು RTGS ನಂತಹ ಎಲ್ಲಾ ಡಿಜಿಟಲ್ ವಹಿವಾಟುಗಳು ಯಾವುದೇ ಮಿತಿಯಿಲ್ಲದೆ ಸಂಪೂರ್ಣವಾಗಿ ಉಚಿತವಾಗಿ ಮುಂದುವರಿಯಲಿವೆ. ಜೊತೆಗೆ, ರೂಪೇ ಡೆಬಿಟ್ ಕಾರ್ಡ್ ವಿತರಣೆ, ಸ್ಥಗಿತಗೊಂಡ ಖಾತೆಗಳನ್ನು ಮರು ಚಾಲನೆ ಮಾಡುವುದು ಮತ್ತು ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ನಿಯಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




