ಸೂಪರ್ ಮಾರ್ಕೆಟ್ಗೆ ಹೋದ್ರೆ ಈ ಒಂದೇ ಟ್ರಿಕ್ ಮಾಡಿ; ತಿಂಗಳ ಬಿಲ್ನಲ್ಲಿ ₹3000 ಸೇವ್ ಮಾಡಿ! ಹೇಗೆ ಗೊತ್ತಾ?
ಅಂಗಡಿಗೆ ಹೋಗುವಾಗ 2 ಸಾವಿರ ರೂಪಾಯಿ ಬಜೆಟ್ ಇಟ್ಟುಕೊಂಡು ಹೋದರೆ, ವಾಪಸ್ ಬರುವಾಗ 5 ಸಾವಿರ ರೂಪಾಯಿ ಬಿಲ್ ಕಟ್ಟಿ ಬರುವ ಪರಿಸ್ಥಿತಿ ಹಲವರದ್ದು. ಆದ್ರೆ ಒಂದು ಸಿಂಪಲ್ ಟ್ರಿಕ್ ಫಾಲೋ ಮಾಡಿದ್ರೆ ನಿಮ್ಮ ಬಿಲ್ ಪಕ್ಕಾ 30% ರಿಂದ 40% ಕಡಿಮೆ ಆಗುತ್ತೆ. ಹಾಗಾದ್ರೆ, ಅದೇನು ಗೊತ್ತಾ?

Shopping Tips: ಇಂದಿನ ದುಬಾರಿ ದುನಿಯಾದಲ್ಲಿ ತಿಂಗಳ ರೇಷನ್ ಖರೀದಿ ಎಂದರೆ ಪ್ರತಿಯೊಂದು ಕುಟುಂಬಕ್ಕೂ ದೊಡ್ಡ ಸವಾಲಾಗಿದೆ. ಯಾಕಂದ್ರೆ, ತಿಂಗಳ ರೇಷನ್ಗೆ 2000 ರೂಪಾಯಿ ಬಜೆಟ್ ಇಟ್ಟುಕೊಂಡು ಹೋಗಿ, 5000 ರೂಪಾಯಿ ಬಿಲ್ ಕಟ್ಟಿ ಮನೆಗೆ ಬಂದಿದ್ದೀರಾ? ಇದು ನಿಮಗೆ ಮಾತ್ರ ಅಲ್ಲ. ಸೂಪರ್ ಮಾರ್ಕೆಟ್ಗಳು ನಮ್ಮನ್ನು ಜಾಸ್ತಿ ಖರ್ಚು ಮಾಡುವ ಹಾಗೆ ಡಿಸೈನ್ ಮಾಡಿರುತ್ತವೆ. ಆಫರ್, ಡಿಸ್ಪ್ಲೇ, ಫ್ರೀ ಸ್ಯಾಂಪಲ್ ಎಲ್ಲವೂ ಒಂದು ಟ್ರ್ಯಾಪ್. ಆದ್ರೆ ಒಂದು ಸಿಂಪಲ್ ಟ್ರಿಕ್ ಫಾಲೋ ಮಾಡಿದ್ರೆ ನಿಮ್ಮ ಬಿಲ್ ಪಕ್ಕಾ 30% ರಿಂದ 40% ಕಡಿಮೆ ಆಗುತ್ತೆ. ಹಾಗಾದ್ರೆ, ಅದೇನು ಗೊತ್ತಾ?
Step 1: ಮನೆಯಿಂದಲೇ ಬೇಕಾದ ವಸ್ತುಗಳ ಲಿಸ್ಟ್ ರೆಡಿ ಮಾಡಿ
ಅಂಗಡಿಗೆ ಹೋಗೋ ಮೊದಲು 10 ನಿಮಿಷ ಕೂತು ಏನು ನಿಜವಾಗ್ಲೂ ಬೇಕು ಎಂದು ಬರೆಯಿರಿ.
ಅಗತ್ಯ ಪಟ್ಟಿ: ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಸೋಪು, ಹಾಲಿನ ಪುಡಿ - ಮನೆಯಲ್ಲಿ ಮುಗಿದಿರುವ ವಸ್ತುಗಳು
ಅನಗತ್ಯ ಪಟ್ಟಿ: ಹೊಸ ಚಿಪ್ಸ್ ಫ್ಲೇವರ್, 3ನೇ ಜ್ಯೂಸ್ ಬಾಟಲ್, ಆಫರ್ನಲ್ಲಿರುವ ಶಾಂಪೂ
ಈ ಲಿಸ್ಟ್ ಮತ್ತು ಅಷ್ಟೇ ಹಣವನ್ನು ಮಾತ್ರ ಕೈಯಲ್ಲಿ ಇಟ್ಟುಕೊಂಡು ಹೋಗಿ. ಕಾರ್ಟ್ಗೆ ಲಿಸ್ಟ್ನಲ್ಲಿ ಇಲ್ಲದ್ದನ್ನು ಹಾಕಲೇಬೇಡಿ.
Step 2: ರೂಲ್ ಆಫ್ 24 ಗಂಟೆ ಪಾಲಿಸಿ
ಶೆಲ್ಫ್ನಲ್ಲಿ ಏನಾದ್ರೂ ಹೊಸ ಪ್ರಾಡಕ್ಟ್ ಕಂಡು ಇದು ಬೇಕು ಅನಿಸಿದರೆ, ತಕ್ಷಣ ತಗೋಬೇಡಿ. ಅದರ ಫೋಟೋ ತೆಗೆದು 24 ಗಂಟೆ ಕಾಯಿರಿ. ಅದರಂತೆ, 24 ಗಂಟೆ ನಂತರ ಮನೆಗೆ ಬಂದು ಯೋಚಿಸಿ: ಇದು ಇಲ್ಲದೆ ನಾನು ಇರಬಹುದಾ? 90% ಸಂದರ್ಭದಲ್ಲಿ ಉತ್ತರ ಇಲ್ಲ ಆಗಿರುತ್ತೆ. ಇದೇ ನಿಮ್ಮ ದೊಡ್ಡ ಉಳಿತಾಯ.!
ಇದರೊಂದಿಗೆ,
ಹಸಿದ ಹೊಟ್ಟೆಯಲ್ಲಿ ಹೋಗಬೇಡಿ
ಹಸಿವಿನಲ್ಲಿ ಹೋದರೆ ಬ್ರೆಡ್, ಬಿಸ್ಕಟ್, ಚಾಕೊಲೇಟ್ ಎಲ್ಲವೂ ಬೇಕು ಅನಿಸುತ್ತದೆ. ಊಟದ ನಂತರ ಹೋದರೆ ಅನಗತ್ಯ ಖರೀದಿ 50% ಕಡಿಮೆ ಆಗುತ್ತೆ.
ಕಣ್ಣಿನ ಮಟ್ಟದ ಪ್ರಾಡಕ್ಟ್ ಬೇಡ
ಸೂಪರ್ ಮಾರ್ಕೆಟ್ನಲ್ಲಿ ಕಣ್ಣಿನ ಮಟ್ಟದಲ್ಲಿ ಇರುವುದೆಲ್ಲಾ ಕಂಪನಿಗಳು ಜಾಸ್ತಿ ಹಣ ಕೊಡುವ ಬ್ರಾಂಡ್ಗಳು. ಅಗ್ಗ ಮತ್ತು ಒಳ್ಳೆಯ ಪ್ರಾಡಕ್ಟ್ ಸಾಮಾನ್ಯವಾಗಿ ಕೆಳಗಿನ ಅಥವಾ ಮೇಲಿನ ಸಾಲಿನಲ್ಲಿ ಇರುತ್ತದೆ.
1+1 ಫ್ರೀ ಮತ್ತು ಬಲ್ಕ್ ಆಫರ್ ಬಲೆಗೆ ಬೀಳಬೇಡಿ
2 ಪ್ಯಾಕ್ ಬೇಕಿಲ್ಲದಿದ್ದರೆ 1+1 ಫ್ರೀ ತಗೊಂಡರೂ ಅದು ವ್ಯರ್ಥ. "5 ಕೆಜಿ ತಗೊಂಡರೆ 500 ಗ್ರಾಂ ಫ್ರೀ" ಎಂದು ಆಸೆ ತೋರಿಸುತ್ತಾರೆ. ಬೇಕಾದ್ದನ್ನು ಮಾತ್ರ, ಬೇಕಾದಷ್ಟು ಮಾತ್ರ ತಗೊಳ್ಳಿ.

ನಿಜವಾದ ಲೆಕ್ಕಚಾರವೇನು?
ತಿಂಗಳಿಗೆ 4 ಬಾರಿ ಶಾಪಿಂಗ್ ಮಾಡಿ ಪ್ರತಿ ಬಾರಿ 1000 ರೂಪಾಯಿ ಸೇವ್ ಮಾಡಿದರೂ ತಿಂಗಳಿಗೆ 4000 ರೂಪಾಯಿ. ಅಂದ್ರೆ, ಒಂದು ವರ್ಷಕ್ಕೆ ₹48,000 ಸೇವ್
ಒಟ್ಟಾರೆಯಾಗಿ ಸೂಪರ್ ಮಾರ್ಕೆಟ್ನಲ್ಲಿ ನಿಮ್ಮ ದೊಡ್ಡ ಶತ್ರು ಆಫರ್ ಅಲ್ಲ, ನಿಮ್ಮ ಇಂಪಲ್ಸ್ ಖರೀದಿ. ಹಾಗಾಗಿ ಲಿಸ್ಟ್ ಜೊತೆಗೆ 24 ಗಂಟೆ ರೂಲ್ ಇಟ್ಟುಕೊಂಡರೆ ನೀವೇ ಖರ್ಚಿನ ಬಾಸ್ ಆಗುತ್ತೀರಿ, ಬಿಲ್ ಅಲ್ಲ. ಅದರಂತೆ, ಮುಂದಿನ ಬಾರಿ ಶಾಪಿಂಗ್ಗೆ ಹೋಗುವಾಗ ಈ ಟ್ರಿಕ್ ಟ್ರೈ ಮಾಡಿ. ಫಲಿತಾಂಶವೇ ನಿಮಗೆ ಉತ್ತರ ಕೊಡುತ್ತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




